Bigg Boss Gilli Nata: ಬಿಗ್ ಬಾಸ್ ಮನೆಯಲ್ಲಿ ಐದರಿಂದ ಆರು ವಾರ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದ ಗಿಲ್ಲಿ ನಟ ಅವರು 12 ಸೀಸನ್ ಗೆದ್ದಿದ್ದಲ್ಲದೆ, ದೊಡ್ಡ ಕ್ರೇಜ್ ಸೃಷ್ಟಿ ಮಾಡಿದರು. ಈಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ ಗೆದ್ದ ಬಳಿಕ ಒಂದು ದಿನವೂ ಅಲ್ಲ, ಒಂದು ಗಂಟೆ ಕೂಡ ಫ್ರೀ ಇಲ್ಲ. ಗಿಲ್ಲಿ ನಟ ಅವರು ಈ ಹಿಂದೆ ನಟಿಸಿದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಸಿನಿಮಾದ ಪ್ರಚಾರದಲ್ಲಿ ಭಾಗಿ ಆಗಬೇಕು.
25
ಇವೆಂಟ್‌ಗಳಿವೆ
ಕರ್ನಾಟದೆಲ್ಲೆಡೆ ಗಿಲ್ಲಿ ಅಭಿಮಾನಿಗಳು ಇವೆಂಟ್‌ಗಳನ್ನು ಹಮ್ಮಿಕೊಂಡಿದ್ದು, ಅವುಗಳಿಗೆ ಗಿಲ್ಲಿ ನಟ ಅವರು ಅತಿಥಿ ಆಗಿದ್ದಾರೆ. ಹೀಗಾಗಿ ಅವರು ಅಲ್ಲೆಲ್ಲ ಹೋಗಬೇಕಿದೆ.
35
ರಿಯಾಲಿಟಿ ಶೋನಲ್ಲಿ ಭಾಗಿ
ಕಲರ್ಸ್ ಕನ್ನಡದ ಕೆಲವು ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ನಟ ಅವರು ಅತಿಥಿ ಆಗಿ ಭಾಗವಹಿಸುತ್ತಿದ್ದಾರೆ. ದೊಡ್ಮನೆ ಹಬ್ಬ ಎನ್ನುವ ಇತ್ತೀಚಿನ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿದ್ದರು.
ಬಿಗ್ ಬಾಸ್ ಶೋನಿಂದ ಸಿಕ್ಕ 50 ಲಕ್ಷ ರೂಪಾಯಿ ಜೊತೆಗೆ 13 ಲಕ್ಷದ ಕಾರು ಕೊಟ್ಟಿದ್ದಾರೆ. Suzuki victoris ನೂತನ ಮಾದರಿ ಕಾರ್ ಇದಾಗಿದೆ. ಇದೀಗ ಗಿಲ್ಲಿ ಮನೆಗೆ ಈ ಕಾರನ್ನು ಬಿಗ್ ಬಾಸ್ ಸಂಸ್ಥೆಯವರು ಡೆಲಿವರಿ ಕೊಟ್ಟಿದ್ದಾರೆ ಎಂಬ ಪೋಸ್ಟ್ ಹರಿದಾಡುತ್ತಿದೆ.
55
ಕಾರ್ ಬಂದಿದ್ದು ನಿಜವೇ?
ಇಷ್ಟು ಬೇಗ ಕಾರ್ ಡೆಲಿವರಿ ಸಿಗೋದಿಲ್ಲ. ಈ ಹಿಂದಿನ ಸೀಸನ್ ವಿಜೇತರಿಗೆ ಕೂಡ ಇಷ್ಟು ಬೇಗ ಡೆಲಿವರಿ ಸಿಕ್ಕಿಲ್ಲ. ಹೀಗಾಗಿ ಇದು ಎಡಿಟೆಡ್ ಫೋಟೋ ಎಂದು ಕಾಣುತ್ತದೆ. ಇಷ್ಟು ಬೇಗ ಗಿಲ್ಲಿಗೆ ಕಾರ್ ಸಿಕ್ಕಿರೋದು ಡೌಟ್. ಈ ಬಗ್ಗೆ ಗಿಲ್ಲಿ ನಟ ಉತ್ತರ ಕೊಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.