ಓ ಹಿರಿಯ ಸೊಸೆ ಪ್ರಿಯಾ ಎಲ್ಲಾ ಓಕೆ ಅಮ್ಮಾ? ಕೊನೆಗೆ ಯಾಕೆ ಇಷ್ಟು ಕೆಟ್ಟ ಬುದ್ದಿ, ಅಮ್ಮು-ಮೀನಾ ಪಾಪ!

Published : Feb 09, 2026, 11:02 AM IST

ಹಿರಿಯ ಸೊಸೆ ಪ್ರಿಯಾ, ನೆಚ್ಚಿನ ಸೊಸೆಯಾಗುವ ಹಠಕ್ಕೆ ಬಿದ್ದಿದ್ದಾಳೆ. ಮುಂಜಾನೆ ಎದ್ದು ಅಡುಗೆ ಮಾಡಿ ಅತ್ತೆಯ ಮನಗೆದ್ದ ಆಕೆ, ತನ್ನ ಓರಗಿತ್ತಿಯರಾದ ಮೀನಾ ಮತ್ತು ಅಮೂಲ್ಯಗೆ ಟಾಂಗ್ ನೀಡಿದ್ದಾಳೆ. ಪ್ರಿಯಾಳ ಈ ವರ್ತನೆಯನ್ನು ವೀಕ್ಷಕರು 'ವಿಲನ್ ಎಂಟ್ರಿ' ಎಂದು ಬಣ್ಣಿಸುತ್ತಿದ್ದಾರೆ.

PREV
15
ನೆಚ್ಚಿನ ಸೊಸೆಯಾಗುವ ಹಠ

ತುಂಬಿದ ನಂದಗೋಕುಲಕ್ಕೆ ಹಿರಿಯ ಸೊಸೆ ಪ್ರಿಯಾ ಆಗಮನವಾಗಿದೆ. ಮೊದಲ ದಿನವೇ ಮೀನಾ ಮತ್ತು ಅಮೂಲ್ಯಗೆ ಮನೆಯವರು ತೋರಿಸುವ ಪ್ರೀತಿಯನ್ನು ನೋಡಿ ಪ್ರಿಯಾ ಹೊಟ್ಟೆ ಉರಿದುಕೊಂಡಿದ್ದಳು. ನಾನೇ ಮನೆಯ ನೆಚ್ಚಿನ ಸೊಸೆಯಾಗುವ ಹಠಕ್ಕೆ ಬಿದ್ದಿರುವ ಪ್ರಿಯಾ ಎಲ್ಲರಿಗಿಂತ ಮುಂಚೆಯೇ ಎದ್ದು, ಅಡುಗೆ ಮಾಡಿದ್ದಾಳೆ.

25
ಆರತಿ ತಟ್ಟೆ ಹಿಡಿದುಕೊಂಡು ಬಂದ ಪ್ರಿಯಾ

ಬೆಳಗ್ಗೆಯೇ ಅಡುಗೆಯೆಲ್ಲಾ ಯಾರು ಮಾಡಿದ್ದು ಅಂತ ಮೀನಾ ಮತ್ತು ಅಮೂಲ್ಯಗೆ ಅತ್ತೆ ಗಿರಿಜಾ ಕೇಳಿದ್ದಾಳೆ. ಇದಕ್ಕೆ ಇಬ್ಬರು ಸೊಸೆಯರು ನಾವು ಮಾಡಿಲ್ಲ ಅಂತ ತಲೆಯಾಡಿಸಿದ್ದಾರೆ. ಅಷ್ಟರಲ್ಲಿಯೇ ಆರತಿ ತಟ್ಟೆ ಹಿಡಿದುಕೊಂಡು ಪ್ರಿಯಾ ಬಂದಿದ್ದಾಳೆ.

35
ಓರಗಿತ್ತಿಯರಿಗೆ ಟಾಂಗ್

ಮನೆ ಕೆಲಸಗಳೆಲ್ಲವನ್ನು ಮಾಡಿದ್ದಕ್ಕೆ ಅತ್ತೆ ಗಿರಿಜಾ ಫುಲ್ ಖುಷಿಯಾದ್ರೆ, ಅಮೂಲ್ಯ ಮತ್ತು ಮೀನ ಶಾಕ್ ಆಗಿದ್ದಾರೆ. ತನ್ನಿಬ್ಬರು ಓರಗಿತ್ತಿಯರಿಗೆ ಟಾಂಗ್ ಕೊಟ್ಟಿದ್ದಾಳೆ. ಪ್ರಿಯಾಳ ಈ ವರ್ತನೆಯಿಂದ ಅಮೂಲ್ಯ ಮತ್ತು ಮೀನ ಸಪ್ಪೆ ಮುಖ ಹಾಕಿಕೊಂಡಿದ್ದಾರೆ.

45
ಓರಗಿತ್ತಿಯರ ಮೇಲೆ ಮುನಿಸು

ತನ್ನ ಮದುವೆಯಲ್ಲಿಯೇ ಮೀನಾ ಮತ್ತು ಅಮೂಲ್ಯಗೆ ಶಾಸ್ತ್ರಗಳು ನಡೆದಿರೋದಕ್ಕೆ ಪ್ರಿಯಾ ಬೇಸರಗೊಂಡಿದ್ದಳು. ಇಷ್ಟು ಮಾತ್ರ ಪ್ರಿಯಾ ಪೋಷಕರು ಸುಳ್ಳು ಹೇಳುತ್ತಿರುವ ಬಗ್ಗೆ ಮಿನಾ, ಅಮೂಲ್ಯ ಅನುಮಾನ ವ್ಯಕ್ತಪಡಿಸಿದರು. ಹಾಗಾಗಿ ಆರಂಭದಿಂದಲೂ ಇಬ್ಬರ ಓರಗಿತ್ತಿಯರ ಮೇಲೆ ಮುನಿಸಿಕೊಂಡಿದ್ದಾಳೆ.

ಇದನ್ನೂ ಓದಿ: ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣನ ಮದುವೆ, ರಿಯಲ್‌ ಆಗಿ ತಂಗಿ ಮದುವೆ; ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ!

55
ವಿಲನ್ ಎಂಟ್ರಿ

ಇಂದಿನ ಪ್ರೋಮೋ ನೋಡಿದ ಸೀರಿಯಲ್ ವೀಕ್ಷಕರು, ಎಲ್ಲಾ ಓಕೆ. ಆದ್ರೆ ಕೊನೆಗೆ ಟಾಂಗ್ ಕೊಡೋದು ಬೇಕಿರಲಿಲ್ಲ. ನಂದಗೋಕುಲಕ್ಕೆ ವಿಲನ್ ಎಂಟ್ರಿಯಾಯ್ತು. ಇದರಿಂದ ಸೀರಿಯಲ್ ದಾರಿ ತಪ್ಪುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಂದಗೋಕುಲ: ಮಾಧವ-ಪ್ರಿಯಾ ಫಸ್ಟ್‌ನೈಟ್ ರೂಮ್‌ನಲ್ಲಿ ವಲ್ಲಭ-ಅಮ್ಮು ತುಂಟಾಟದ ರೊಮ್ಯಾನ್ಸ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories