ರೆಸ್ಟೋರೆಂಟ್‌ ಕ್ಲೀನ್‌ ಮಾಡುವುದರಿಂದ ಫೇಮಸ್‌ ನಟಿಯಾಗಿ ಈಗ ಕೇಂದ್ರ ಸಚಿವೆ; Smriti Irani ಜರ್ನಿ

Published : Mar 23, 2022, 05:52 PM IST

ಟಿವಿಯ ಅತ್ಯಂತ ಜನಪ್ರಿಯ ಶೋ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ (Kyunki Saas Bhi Kabhi Bahu Thi) ಮೂಲಕ ಮನೆ ಮನೆಯಲ್ಲೂ  ಪ್ರಸಿದ್ಧರಾದ ಸ್ಮೃತಿ ಇರಾನಿ (Smriti Irani)  46 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 23 ಮಾರ್ಚ್ 1976 ರಂದು ದೆಹಲಿಯಲ್ಲಿ ಜನಿಸಿದರು. ಸ್ಮೃತಿ ಮೊದಲಿನಿಂದಲೂ ತಮ್ಮ ಕೆಲಸ ಮತ್ತು ಕನಸುಗಳ ಬಗ್ಗೆ ವಿಭಿನ್ನವಾಗಿ ಯೋಚಿಸುತ್ತಿದ್ದರು. ಅವರು ತನ್ನದೇ ಆದ ಒಂದು ಗುರುತು ಮಾಡಲು ಬಯಸಿದ್ದರು. ಆದರೆ, ಗಮ್ಯ ತಲುಪಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಅವರ ಹಣ ಸಂಪಾದಿಸಲು ರೆಸ್ಟೋರೆಂಟ್‌ನ ನೆಲವನ್ನು ಸಹ ಸ್ವಚ್ಛಗೊಳಿಸಬೇಕಾಗಿತ್ತು. ಅಂತಿಮವಾಗಿ ಅವರ ಅದೃಷ್ಟ ತಿರುಗಿತು ಮತ್ತು ಇಂದು ಅವರು ಕೇಂದ್ರ ಸಚಿವರಾಗಿದ್ದಾರೆ.  

PREV
18
ರೆಸ್ಟೋರೆಂಟ್‌ ಕ್ಲೀನ್‌ ಮಾಡುವುದರಿಂದ ಫೇಮಸ್‌ ನಟಿಯಾಗಿ ಈಗ ಕೇಂದ್ರ ಸಚಿವೆ; Smriti Irani ಜರ್ನಿ

ಸ್ಮೃತಿ ಇರಾನಿ ಅವರಿಗೆ ಮೂವರು ಸಹೋದರಿಯರಿದ್ದಾರೆ ಇವರೇ ಹಿರಿಯರು. ಅವರು ಹೋಲಿ ಚೈಲ್ಡ್ ಆಕ್ಸಿಲಿಯಮ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು .12 ನೇ ತರಗತಿಯ ನಂತರ ಅವರು ಕಾಲೇಜಿಗೆ ಸೇರಿದರು.

28

ಅವರು ವಿದ್ಯಾರ್ಥಿಯಾಗಿದ್ದಾಗಿನಿಂದ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಅವರು ಅದನ್ನು ಬಹಿರಂಗಪಡಿಸಿದಳು. ಅವರ ತಾತ ಸಂಘದ ಕಾರ್ಯಕರ್ತರಾಗಿದ್ದರು.
 

38
Smriti Irani

ಆದರೆ, ಸ್ಮೃತಿ ರಾಜಕೀಯಕ್ಕೆ ಸೇರುವ ಮುನ್ನ ಗ್ಲಾಮರ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅವರು 1998 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಆದಾರೆ, ಅವರ ತಂದೆಗೆ ಸ್ಮೃತಿ ಭಾಗವಹಿಸುವುದು  ಇಷ್ಟವಿರಲಿಲ್ಲ

48
Smriti Irani

ಸ್ಮೃತಿ ಇರಾನಿ ಕೊನೆಗೂ ತಾಯಿಯ ಬೆಂಬಲ ಪಡೆದು ಹೇಗೋ ಹಣ ಕೂಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಫೈನಲ್ ತಲುಪಿದರೂ ಸ್ಪರ್ಧೆಯಲ್ಲಿ ಗೆಲ್ಲಲಾಗಲಿಲ್ಲ ಎಂಬುದು ಬೇರೆ ಮಾತು.

58

ನಂತರ ಸ್ಮೃತಿ ಇರಾನಿ ತನ್ನ ತಾಯಿಗೆ ಹಣವನ್ನು ಹಿಂದಿರುಗಿಸಲು ಉದ್ಯೋಗವನ್ನು ಹುಡುಕಲಾರಂಭಿಸಿದರು. ಹಲವೆಡೆ ಕೆಲಸಕ್ಕೆ ಅರ್ಜಿ ಸಲ್ಲಿಸಿದರೂ  ಎಲ್ಲ ಕಡೆ ನಿರಾಸೆಯೇ ಕಾಡುತ್ತಿತ್ತು. ನಂತರ ಅವರು ರೆಸ್ಟೋರೆಂಟ್‌ನಲ್ಲಿ ನೆಲವನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಕೆಲವು ಕಾಲ ಮಾಡುತ್ತಿದ್ದರು.

68

ನಂತರ ನಿಧಾನವಾಗಿ  ಅದೃಷ್ಟ ಫಲ ನೀಡಿತು. ಅವರು 2000 ರಲ್ಲಿ ಟಿವಿ ಧಾರಾವಾಹಿ ಆತಿಶ್ ಮತ್ತು ಹಮ್ ಹೈ ಕಾಲ್ ಆಜ್ ಔರ್ ಕಲ್ ನಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದರು. ಆದಾಗ್ಯೂ, ಏಕ್ತಾ ಕಪೂರ್ ಅವರ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯಿಂದ ಅವರು ಗುರುತಿಸಲ್ಪಟ್ಟರು. ಆ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.

78

ಸಂದರ್ಶನವೊಂದರಲ್ಲಿ ಅವರು ಜೀವನದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. 'ನಾನು 20 ನೇ ವಯಸ್ಸಿನಲ್ಲಿ ಟಿವಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಇಲ್ಲಿಂದ ರಾಜಕೀಯಕ್ಕೆ ಬರಲು ವೇದಿಕೆ ಸಿಕ್ಕಿತು. ಅದೇ ಸಮಯದಲ್ಲಿ, ಏಕ್ತಾ ಕಪೂರ್ ನನಗೆ ತುಂಬಾ ಬೆಂಬಲ ನೀಡಿದರು' ಎಂದಿದ್ದಾರೆ.
 

88

ಸ್ಮೃತಿ ಇರಾನಿ 2001 ರಲ್ಲಿ ಜುಬಿನ್ ಇರಾನಿ ಅವರನ್ನು ವಿವಾಹವಾದರು. ಈಗ ಎರಡು ಮಕ್ಕಳ ತಾಯಿ. ಅವರ ಮಗನ ಹೆಸರು ಜೋಹರ್ ಮತ್ತು ಮಗಳ ಹೆಸರು ಜೋಯಿಶ್. 

Read more Photos on
click me!

Recommended Stories