17 ಕೆಜಿ ತೂಕ ಇಳಿಸಿಕೊಂಡ ಕಿರುತೆರೆ ನಟಿ ಗೀತಾ ವರ್ಕೌಟ್‌ ಫೋಟೋಗಳು!

First Published | Mar 22, 2022, 12:11 PM IST

ವೈರಲ್ ಆಗುತ್ತಿದೆ ಬ್ರಹ್ಮಗಂಟು ಗೀತಾ ವರ್ಕೌಟ್ ವಿಡಿಯೋ ಮತ್ತು ಪೋಟೋಗಳು. ಅದೆಷ್ಟೋ ಹೆಣ್ಣು ಮಕ್ಕಳಿಗೆ ನೀವು ಸ್ಪೂರ್ತಿ ಎಂದ ನೆಟ್ಟಿಗರು. 
 

ಗೀತಾ ವರ್ಕೌಟ್‌ ಫೋಟೋ

 ಬ್ರಹ್ಮಗಂಟು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ಗೀತಾ ಭಾರತಿ ಭಟ್ ಹೊಸ ಲುಕ್ ಫೋಟೋಗಳು ವೈರಲ್ ಆಗುತ್ತಿದೆ. 

ಗೀತಾ ರೀಲ್ಸ್‌ನಿಂದ ಸೆರೆಹಿಡಿದಿರುವ ಫೋಟೋ

ಗೀತಾ ಭಾರತಿ ಭಟ್ ಕಳೆದ ಮೂರ್ನಾಲ್ಕು ತಿಂಗಳಿನಿಂದ ವರ್ಕೌಟ್ ಮತ್ತು ಡಯಟ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Tap to resize

ಪರ್ಸನಲ್‌ ಟ್ರೈನರ್‌ ಸಹಾಯದಿಂದ ವರ್ಕೌಟ್‌ ಜರ್ನಿ ಶುರು.

ಟ್ರೈನರ್ ಸಹಾಯದಿಂದ ನಾನ್‌ ಸ್ಟಾಪ್ ವರ್ಕೌಟ್ ಮಾಡುತ್ತಿರುವ ಗೀತಾ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇತ್ತೀಚಿಗೆ ಮಾಡಿಸಿರುವ ಫೋಟೋಶೂಟ್‌ನಲ್ಲಿ ಬದಲಾವಣೆ ಕಾಣಬಹುದು.

ಗೀತಾ ಯೂಟ್ಯೂಬ್‌ ಚಾನೆಲ್‌ನಲ್ಲಿ ವರ್ಕೌಟ್‌ ವಿಡಿಯೋ ನೋಡಬಹುದು.

ಕೆಲವು ದಿನಗಳ ಹಿಂದೆ ಗೀತಾ ವರ್ಕೌಟ್ ಅಪ್ಡೇಟ್ ಹಂಚಿಕೊಂಡಿರಲಿಲ್ಲ ಆಗ ಹಲವರು ಪ್ರಶ್ನೆ ಮಾಡಿದ್ದರು. 'ಸ್ವಲ್ಪ disturbanceಮತ್ತು ಬ್ರೇಕ್ ಆಯ್ತು ಆದರೆ ನಾನು ಜರ್ನಿ ಬಿಟ್ಟಿದ್ದೀನಿ ಸಣ್ಣ ಆಗ್ತಿಲ್ಲ ಅನ್ನೋ ಭ್ರಮೆಯಲ್ಲಿರುವವರಿಗೆ ನಾನು ಸಣ್ಣ ಆಗಿದ್ದೀನಿ' ಎಂದು ವಿಡಿಯೋದಲ್ಲಿ ಹೇಳಿದ್ದಾರೆ. 

ಗುಂಡಮ್ಮ ಸಣ್ಣಮ್ಮ ಆಗಿರುವ ಲುಕ್‌ ಹೇಗಿದೆ?

'ನನ್ನ ತೂಕದ ಬಗ್ಗೆ ನನಗಿಂತ ಜನರಿಗೆ ಹೆಚ್ಚಿಗೆ ಕ್ಯೂರಿಯಾಸಿಟಿ ಇದೆ. ಬಟ್ಟೆ ಎಲ್ಲಿ ಖರೀದಿ ಮಾಡ್ತೀನಿ ಅಂತ ತುಂಬಾನೇ ಕೇಳ್ತಾರೆ. ಹೀಗಾಗಿ ಈ ಗುಂಡಮ್ಮ ಸಣ್ಣಮ್ಮ ಆದರೆ ಹೇಗಿರುತ್ತದೆ?' ಎಂದು ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

ಆಹಾರದ ಗುಟ್ಟು ಬಿಚ್ಚಿಟ್ಟ ನಟಿ

37 ಸಾವಿರ ಯೂಟ್ಯೂಬ್ ಫಾಲೋವರ್ಸ್ ಹೊಂದಿರುವ ಗೀತಾ ಡಯಟ್ ಮಾಡುವವರು ಏನು ತಿನ್ನಬೇಕು, ಯಾವ ರೀತಿ ವ್ಯಾಯಾಮ ಮಾಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ.

Latest Videos

click me!