ಸೀರೆಯುಟ್ಟ ಸೀರಿಯಲ್​ ನಾಯಕಿಯರು ಅದೇನು ತಿಂತಾರೆ? ಕೈ-ಕಾಲು ಎತ್ತಿದ್ರೆ ರೌಡಿಗಳು ಮಟಾಷ್​; ಭಾರಿ ಚರ್ಚೆ

Published : Jun 06, 2026, 03:59 PM IST

ಕನ್ನಡ ಕಿರುತೆರೆ ಸೀರಿಯಲ್​ಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದ್ದು, ನಾಯಕಿಯರೇ ಸೀರೆಯುಟ್ಟು ರೌಡಿಗಳಿಗೆ ಹೊಡೆಯುವ ದೃಶ್ಯಗಳು ಸಾಮಾನ್ಯವಾಗುತ್ತಿವೆ. 'ಅಮೃತಧಾರೆ', 'ಭಾಗ್ಯಲಕ್ಷ್ಮಿ'ಯಂತಹ ಧಾರಾವಾಹಿಗಳಲ್ಲಿ ನಟಿಯರು ಸಾಹಸ ದೃಶ್ಯಗಳಲ್ಲಿ ಮಿಂಚುತ್ತಿದ್ದು, ಇದು ಜಾಲತಾಣಗಳಲ್ಲಿ ತಮಾಷೆಯ ಚರ್ಚೆಗೆ ಕಾರಣವಾಗಿದೆ.

PREV
17
ಮಹಿಳಾ ಪ್ರಧಾನ ಸೀರಿಯಲ್​ಗಳು

ಸೀರಿಯಲ್​ಗಳು ಎಂದ್ರೆ ಅತಿಶೋಕ್ತಿಗಳ ಆಗರ ಎನ್ನೋದು ಗೊತ್ತೇ ಇದೆ. ಅದರಲ್ಲಿಯೂ ಸೀರಿಯಲ್​ಗಳನ್ನು ಮೈಮೇಮೆ ಆಹ್ವಾನಿಸಿಕೊಂಡು ನೋಡುವ ಬಹುದೊಡ್ಡ ವರ್ಗದ ಮಹಿಳೆಯರು ಇರುವುದಕ್ಕಾಗಿ ಮಹಿಳೆಯರೇ ಸೀರಿಯಲ್​ಗಳಲ್ಲಿ ನಾಯಕ, ನಾಯಕಿ ಜೊತೆಗೆ ವಿಲನ್​ ಕೂಡ. ನಟರು ಬಹುತೇಕ ಸೀರಿಯಲ್​ಗಳಲ್ಲಿ ಡಮ್ಮಿ ಪೀಸ್​ಗಳು ಅಷ್ಟೇ. ಈಗಂತೂ ಸೀರಿಯಲ್​ಗಳು ಯಾವ ಸಿನಿಮಾಕ್ಕೂ ಮೀರಿ ಇರುವುದಿಲ್ಲ. ರೊಮಾನ್ಸ್​ ಜೊತೆ ಇತ್ತೀಚಿನ ದಿನಗಳಲ್ಲಿ ಒತ್ತಾಯಪೂರ್ವಕವಾಗಿ ಫೈಟಿಂಗ್​ ದೃಶ್ಯಗಳನ್ನೂ ಸೇರಿಸಲಾಗುತ್ತದೆ. ಆದ್ರೆ ಒಂದೇ ಒಂದು ವ್ಯತ್ಯಾಸ ಎಂದ್ರೆ, ಹಲವಾರು ಸೀರಿಯಲ್​ಗಳಲ್ಲಿ ನಾಯಕಿಯರೇ ಫೈಟಿಂಗ್​ ಮಾಡ್ತಾರೆ.

27
ಸೀರೆಯುಟ್ಟು ನಾಯಕಿಯರ ಫೈಟಿಂಗ್​

ಸೀರೆಯುಟ್ಟು ನಾಯಕಿಯರು ಫೈಟಿಂಗ್​ ಮಾಡಲು ಶುರು ಮಾಡಿದ್ರು ಎಂದ್ರೆ, ವರ್ಷಾನುಗಟ್ಟಲೆ ಜಿಮ್​ನಲ್ಲಿ ದೇಹವನ್ನೆಲ್ಲಾ ಬಗ್ಗಿಸಿ ರೌಡಿಸಂಗಾಗಿಯೇ ಮೀಸಲು ಇರುವ ರೌಡಿಗಳೂ ಮಟಾಶ್​ ಆಗಿಬಿಡುತ್ತಾರೆ. ನಾಯಕಿಯರು ಕೈ ಎತ್ತಿ ಕಾಲಿನಿಂದ ಒದ್ದರೆ ರೌಡಿಗಳು ಕಿಲೋಮೀಟರ್​ಗಟ್ಟಲೆ ಹೋಗಿ ಬೀಳುವುದು ಈಗಂತೂ ಸರ್ವೇ ಸಾಮಾನ್ಯವಾಗಿದೆ.

37
ಅಣ್ಣಯ್ಯ ಸೀರಿಯಲ್​ನಲ್ಲಿ ರೌಡಿಗಳಲ್ಲಿ ನಡುಕ

ಕೆಲ ತಿಂಗಳ ಹಿಂದೆ ಅಣ್ಣಯ್ಯ ಸೀರಿಯಲ್​ನಲ್ಲಿ ಪಾರು, ರಾಣಿ, ಮಲ್ಲಿ ಸೇರಿದಂತೆ ವಿವಿಧ ನಟಿಯರು ರೌಡಿಗಳನ್ನು ಒಂದೇ ಹೊಡೆತಕ್ಕೆ ಎತ್ತಿ ಎತ್ತಿ ಬೀಸಾಕಿದ್ದು ನೆನಪಿರಬಹುದು.

47
ದುರ್ಗಾ ಒದೆಗೆ ಮರ ಏರಿದ ರೌಡು

ಇದೀಗ, ಹೆಣ್ಣುಮಕ್ಕಳ ಮೇಲೆ ಕೆಟ್ಟದ್ದಾಗಿ ಮಾತನಾಡಿರುವ ಕಾರಣಕ್ಕೆ ನಾ ನಿನ್ನ ಬಿಡಲಾರೆ ಸೀರಿಯಲ್​ನಲ್ಲಿ, ದುರ್ಗಾ ಕೂಡ ರೌಡಿಗಳಿಗೆ ಸೀರೆಯುಟ್ಟೇ ಮಣ್ಣು ಮುಕ್ಕಿಸಿದಳು. ಅದ್ಯಾವ ಪರಿ ಎಂದರೆ, ಒಬ್ಬ ರೌಡಿ ಮರ ಏರಿ ಕುಳಿತುಬಿಟ್ಟ. ಅಷ್ಟು ಜೋರಾಗಿ ಒದೆ ಕೊಟ್ಟಿದ್ದಳು ದುರ್ಗಾ.

57
ಭೂಮಿಕಾ ಫೈಟಿಂಗ್​

ಅದೂ ಸಾಲದು ಎನ್ನುವುದಕ್ಕೆ ಅಮೃತಧಾರೆ ಸೀರಿಯಲ್​ನಲ್ಲಿ ಮಿಂಚುವನ್ನು ಕಿಡ್​ನ್ಯಾಪ್​ ಮಾಡಿದ ರೌಡಿಗಳ ಅಟ್ಟಹಾಸವನ್ನು ಮಣ್ಣುಮುಕ್ಕಿಸಿದಳು ಭೂಮಿಕಾ. ಭೂಮಿಕಾ ಏಟಿಗೆ ವೃತ್ತಿಪರ ರೌಡಿಗಳೂ ಕಕ್ಕಾಬಿಕ್ಕಿಯಾಗಿ ಓಡಿ ಹೋದರು.

67
ಭಾಗ್ಯಲಕ್ಷ್ಮಿ ಸೀರಿಯಲ್​

ಇನ್ನು ವಾಹಿನಿ ಬದಲಾದರೂ ಲೇಡಿ ಫೈಟಿಂಗ್​ ನಿಂತಿಲ್ಲ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿಯೂ ಭಾಗ್ಯ ಭರ್ಜರಿ ಫೈಟಿಂಗ್​ ಮಾಡಿದ್ದಳು. ಕಿಡ್​ನ್ಯಾಪ್​ ಮಾಡಿದ್ದ ರೌಡಿಗಳಿಗೆ ಮಣ್ಣು ಮುಕ್ಕಿಸಿದ್ದಳು.

77
ಏನ್​ ತಿಂತಾರೆ ಇವರು?

ಇವೆಲ್ಲಾ ನೋಡಿದ ಮೇಲೆ, ಸೀರಿಯಲ್ ನಟಿಯರು ಏನು ತಿಂತಾರೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಜನರು ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ. ನಟಿಯರ ಫೈಟಿಂಗ್ಸ್​ಗಳನ್ನು ಫನ್ನಿಯಾಗಿ ತೆಗೆದುಕೊಂಡಿರುವ ನೆಟ್ಟಿಗರು, ರೌಡಿಗಳನ್ನು ಮೀರಿಸೋ ಲೇಡಿ ರೌಡಿಗಳಪ್ಪಾ ಇವರು ಎನ್ನುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories