ಜೂ.8ರಿಂದ ಅಗ್ನಿಸಾಕ್ಷಿ ಸೀರಿಯಲ್​: ಏನಿದರ ಸ್ಟೋರಿ? ಹಳೆಯ ಧಾರಾವಾಹಿಗೆ ಲಿಂಕ್​ ಇದ್ಯಾ

Published : Jun 06, 2026, 02:34 PM IST

ಕಲರ್ಸ್ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಹೆಸರಿನ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಇದು ಹಳೆಯ ಸೀರಿಯಲ್​ನ ಮುಂದುವರಿದ ಭಾಗವಲ್ಲ, ಬದಲಿಗೆ ಶಮಂತ್ ಬ್ರೋ ಗೌಡ ಮತ್ತು ವರ್ಷಿಣಿ ಗೌಡ ನಟನೆಯ, ಅಹಂ ಮತ್ತು ಸ್ವಾಭಿಮಾನದ ನಡುವಿನ ವಿಶಿಷ್ಟ ಪ್ರೇಮಕಥೆಯಾಗಿದೆ.

PREV
16
ದಾಖಲೆ ಬರೆದಿತ್ತು ಹಿಂದಿನ ಸೀರಿಯಲ್​​

2013ರಿಂದ ಸತತ ಏಳು ವರ್ಷ ಅರ್ಥಾತ್​ 2020ರವರೆಗೆ ದಾಖಲೆ ಬರೆದಿತ್ತು ಅಗ್ನಿಸಾಕ್ಷಿ ಸೀರಿಯಲ್ (Agni Sakshi Serial)​. ವಿಜಯ ಸೂರ್ಯ ಮತ್ತು ವೈಷ್ಣವಿ ಗೌಡ ಅವರು ನಟಿಸಿದ್ದ ಈ ಸೀರಿಯಲ್​ ಸಕತ್​ ಹಿಟ್​ ಕೂಡ ಆಗಿತ್ತು. ಇದರಲ್ಲಿ, ಸನ್ನಿಧಿ ಸಿದ್ಧಾರ್ಥ್‌ನನ್ನು ಮದುವೆಯಾಗುತ್ತಾಳೆ. ಆದರೆ ಆತ ಇದಾಗಲೇ ಬೇರೊಬ್ಬನನ್ನು ಪ್ರೀತಿಸುತ್ತಿರುವುದು ಅವಳಿಗೆ ತಿಳಿದಿರುವುದಿಲ್ಲ. ಮದುವೆಯಾದ ಮೇಲೆ ವಿಷಯ ತಿಳಿಯುತ್ತಲೇ ಡಿವೋರ್ಸ್​ ಕೊಡಲು ಮುಂದಾದಾಗ, ವಿಧಿಯ ಆಟವೇ ಬೇರೆಯಾಗಿರುತ್ತದೆ, ದಂಪತಿ ಒಂದಾಗುವುದು ಹಳೆಯ ಸೀರಿಯಲ್​ನ ವಿಷಯವಾಗಿತ್ತು.

26
ಜೂನ್​ 8ರಿಂದ ಆರಂಭ

ಆದರೆ ಇದೀಗ ಅದೇ ಹೆಸರಿನಲ್ಲಿ ಹೊಸ ಸೀರಿಯಲ್​ ಬರುತ್ತಿದ್ದು, ಈ ಸೀರಿಯಲ್​ ಇದೇ ಸೋಮವಾರ ಅರ್ಥಾತ್​ ಜೂನ್​ 8ರಿಂದ ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗಲಿದೆ. ಸಂಜೆ 7:00 ಗಂಟೆಗೆ ಪ್ರಸಾರ ಕಾಣಲಿದೆ. ಹಾಗಿದ್ದರೆ ಆ ಹಳೆಯ ಸೀರಿಯಲ್​ಗೂ, ಹೊಸ ಸೀರಿಯಲ್​ಗೂ ಏನಾದ್ರೂ ಲಿಂಕ್​ ಇದ್ಯಾ, ಇದು ಆ ಸೀರಿಯಲ್​ ಪಾರ್ಟ್​-2 ನಾ ಎನ್ನುವ ಹಲವಾರು ಪ್ರಶ್ನೆಗಳು ಸೀರಿಯಲ್​ ಪ್ರಿಯರಲ್ಲಿ ಇವೆ.

36
ಹಿಂದಿನ ಸೀರಿಯಲ್​ಗೆ ಲಿಂಕ್​ ಇದ್ಯಾ?

ಆದರೆ, ಅಸಲಿಗೆ ಆ ಸೀರಿಯಲ್​ಗೂ, ಈ ಸೀರಿಯಲ್​ಗೂ ಲಿಂಕ್​ ಇಲ್ಲ. ಎರಡೂ ಸೀರಿಯಲ್​ ಬರೆದಿರುವವರು ಒಬ್ಬರೇ ಎನ್ನುವುದು ಬಿಟ್ಟರೆ ಯಾವುದೂ ಹೋಲಿಕೆ ಇಲ್ಲ ಎಂದು ಇದಾಗಲೇ ಸೀರಿಯಲ್​ ತಂಡ ಹೇಳಿದೆ. ಇದು ಹಳೆಯ ಧಾರಾವಾಹಿಯ ಮುಂದುವರಿದ ಭಾಗವಲ್ಲ; ಬದಲಿಗೆ ಇಂದಿನ ತಲೆಮಾರಿನ ಯುವಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್ ಕಥೆಯಾಗಿದೆ ಎಂದು ತಂಡ ಹೇಳಿದೆ.

46
ಸೀರಿಯಲ್​ ಹೈಲೈಟ್​ ಏನು?

ಇಬ್ಬರು ಕಣ್ಣುಂದೆ ಬಂದ್ರೆ ಸಹಿಸೋಕಾಗಲ್ಲ, ಕಾಣದೇ ಹೋದ್ರೆ ಬದುಕೋಕೇ ಆಗಲ್ಲ ಎನ್ನುವುದೇ ಈ ಸೀರಿಯಲ್​ ಹೈಲೈಟ್​. ಇದೊಂದು ರೀತಿಯಲ್ಲಿ ವಿಶಿಷ್ಟ ಪ್ರೇಮಬಂಧವಾಗಿದೆ. ಬಹುತೇಕ ಸೀರಿಯಲ್​ಗಳಂತೆ ಇಲ್ಲಿ ನಾಯಕ-ನಾಯಕಿಯ ಹೆಸರು ಸೀರಿಯಲ್​ಗೆ ಇಡಲಾಗಿದೆ. ಅಗ್ನಿ ನಾಯಕ, ಸಾಕ್ಷಿ ನಾಯಕಿ. ಹಸೆಮಣೆಯಲ್ಲಿ ಇವರಿಬ್ಬರ ಹಣೆಬರಹ ಹೇಗೆ ಒಂದಾಗಲಿದೆ, ಈ ಬೆಂಕಿ ಮತ್ತು ತಂಗಾಳಿಯ ನಡುವಿನ ಅಹಂ ಹಾಗೂ ಆದರ್ಶಗಳ ಹೋರಾಟ ಎತ್ತ ಸಾಗಲಿದೆ ಎನ್ನುವುದೇ ಇಡೀ ಸರಣಿಯ ಜೀವಾಳ.

56
ಯಾರು ನಾಯಕ ಮತ್ತು ನಾಯಕಿ?

ನಾಯಕ ಅಗ್ನಿ ಹೆಸರಿಗೆ ತಕ್ಕಂತೆ ಎಲ್ಲವನ್ನೂ ಧ್ವಂಸ ಮಾಡೋ ಬಿರುಗಾಳಿ ಅಷ್ಟೇ ಅಲ್ಲ, ತನ್ನ ಅಹಂಗೆ ಎದುರು ನಿಂತರೆ ಎಲ್ಲವನ್ನೂ ಸುಟ್ಟು ಹಾಕೋ ಬೆಂಕಿ. ಸಂಪತ್ತು ಮತ್ತು ವಿಪರೀತ ಗರ್ವದ ಹಿನ್ನೆಲೆಯುಳ್ಳ ಈ ಹಠಮಾರಿ ಉದ್ಯಮಿಯ ಪಾತ್ರದಲ್ಲಿ ನಟಿಸ್ತಾ ಇರೋರು ಗಾಯಕ ಹಾಗೂ ನಟ ಶಮಂತ್ ಬ್ರೋ ಗೌಡ. ಇನ್ನು ನಾಯಕಿ ಸಾಕ್ಷಿ.ಇವಳು ನಾಯಕನ ಗುಣದ ವಿರುದ್ಧ ಗುಣದವಳು. ಎಲ್ಲವನ್ನೂ ತಂಪಾಗಿಸೋ ತಂಗಾಳಿ ಆದರೆ ಅನ್ಯಾಯದ ವಿರುದ್ಧ ನಿಲ್ಲುವಾಗ, ಕತ್ತಲ ಹಾದಿಗೆ ಅವಳು ದಾರಿ ತೋರಿಸೋ ಬೆಳಕು. ಎಷ್ಟೇ ಕಷ್ಟ ಬಂದರೂ ತನ್ನ ಆತ್ಮಗೌರವವನ್ನು ಬಿಟ್ಟುಕೊಡದ ಈ ಧೀಮಂತ ಯುವತಿಯ ಪಾತ್ರದಲ್ಲಿ ನಟಿ ವರ್ಷಿಣಿ ಗೌಡ ನಟಿಸುತ್ತಿದ್ದಾರೆ.

66
ತಾಂತ್ರಿಕ ವರ್ಗ ಮತ್ತು ಪ್ರಸಾರದ ವಿವರ

ಪ್ರಶಾಂತ್ ಡಿ.ಪಿ ನಿರ್ದೇಶಿಸುತ್ತಿರುವ ಈ ಸೀರಿಯಲ್​ನಲ್ಲಿ ಈ ಹಿಂದಿನ ಸೂಪರ್ ಹಿಟ್ ‘ಅಗ್ನಿಸಾಕ್ಷಿ ‘ ಧಾರಾವಾಹಿಯ ಬರಹಗಾರರಾದ ಹ್ಯಾರಿಸ್ ಅವರೇ ಈ ಕಥೆಯನ್ನು ಬರೆಯುತ್ತಿದ್ದಾರೆ. ಇನ್ನು ಈ ಧಾರಾವಾಹಿಯು ಅತ್ಯುನ್ನತ ಮೇಕಿಂಗ್ ಹಾಗೂ ಶ್ರೀಮಂತ ದೃಶ್ಯವೈಭವದಿಂದ ಕೂಡಿರಲಿದೆ. ಅಕ್ಷತ, ಲೇಖನ, ಶ್ರೀಕಾಂತ್ ಮುಂತಾದವರ ತಾರಾಬಳಗವಿರುವ "ಅಗ್ನಿಸಾಕ್ಷಿ" ಧಾರಾವಾಹಿಯಲ್ಲಿ ಬಹಳ ದಿನಗಳ ನಂತರ ನಟ ಮಿಥುನ್ ತೇಜಸ್ವಿ ಅಭಿನಯಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories