ಮುದುಕ-ಮುದುಕಿಯಾದ ಅಮೂಲ್ಯ ಗೌಡ & ನಿರಂಜನ್; ರಿಷಿ ಸರ್ ಎಷ್ಟು ರೊಮ್ಯಾಂಟಿಕ್ ಅಲ್ಲವಾ?

Published : Aug 08, 2026, 02:23 PM IST

'ಕಮಲಿ' ಸೀರಿಯಲ್ ಖ್ಯಾತಿಯ ಅಮೂಲ್ಯ ಗೌಡ ಮತ್ತು ನಿರಂಜನ್ ಇದೀಗ ನಿಜ ಜೀವನದಲ್ಲೂ ಜೋಡಿಯಾಗಿದ್ದಾರೆ. ತೆಲುಗು ರಿಯಾಲಿಟಿ ಶೋ ಒಂದರಲ್ಲಿ ನಿರಂಜನ್, ಅಮೂಲ್ಯಾಗೆ ಕಾಲ್ಗೆಜ್ಜೆ ತೊಡಿಸಿ, ಉಂಗುರ ನೀಡಿ ಎಲ್ಲರ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಈ ಕ್ಷಣಕ್ಕೆ ಅಮೂಲ್ಯ ಭಾವುಕರಾಗಿದ್ದಾರೆ.

PREV
15
ಅಮೂಲ್ಯ ಗೌಡ ಮತ್ತು ನಿರಂಜನ್

ಅಮೂಲ್ಯ ಗೌಡ ಮತ್ತು ನಿರಂಜನ್ ಕಿರುತೆರೆ ಲೋಕದ ಜನಪ್ರಿಯ ಜೋಡಿ. ಜೀ ಕನ್ನಡ ವಾಹಿನಿಯ 'ಕಮಲಿ' ಸೀರಿಯಲ್‌ನಲ್ಲಿ ಕಮಲಿ ಮತ್ತು ರಿಷಿಯಾಗಿ ಇಡೀ ಕರುನಾಡನ್ನು ರಂಜಿಸಿದ್ದಾರೆ. ಇದೀಗ ತೆರೆ ಹಿಂದೆಯೂ ಜೋಡಿ ಒಂದಾಗಿದ್ದು, ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೀಗ ತೆಲುಗು ವಾಹಿನಿಯ ರಿಯಾಲಿಟಿ ಶೋನಲ್ಲಿ ನಿರಂಜನ್ ತಮ್ಮ ಮನದಾಳದ ಮಾತುಗಳನ್ನು ಮುದ್ದು ಮುದ್ದಾಗಿ ಪ್ರೇಯಸಿ ಅಮೂಲ್ಯ ಮುಂದೆ ಹೇಳಿಕೊಂಡಿದ್ದಾರೆ.

25
ಬಾಲ್ಯದ ಫೋಟೋ

Maa Bonala Jathara ಕಾರ್ಯಕ್ರಮದ ವೇದಿಕೆ ಮೇಲೆ ನಿರಂಜನ್ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾರೆ. ಇದು ನನ್ನ ರಾಜಕುಮಾರಿ ಕಥೆ ಎಂದು ಪುಸ್ತಕವನ್ನ ತೆರೆದ ನಿರಂಜನ್, ಪ್ರೇಯಸಿಯ ಬಾಲ್ಯದ ಫೋಟೋ ತೋರಿಸಿ, ಸಿಕ್ಕಾಪಟ್ಟೆ ಕ್ಯೂಟ್‌ ಅಲ್ಲವೇ? ಈಗಲೂ ಸಹ ಮುದ್ದಾಗಿದ್ದಾಳೆ ಎಂದು ಹೇಳುತ್ತಲೇ ಅಮೂಲ್ಯ, ನಾಚಿಕೆಯಿಂದ ಮುಖ ಮುಚ್ಚಿಕೊಳ್ಳುತ್ತಾರೆ.

35
ನಿರಂಜನ್ ಪ್ರೀತಿ ಕಂಡು ಅಮೂಲ್ಯಾ ಭಾವುಕ

ನಾನು ಮೊದಲಿಗೆ ಅಮೂಲ್ಯಾಳ ಮುಖ ನೋಡಿರಲಿಲ್ಲ ಎಂದು ಗೆಳತಿಯ ಕಾಲುಗಳ ಫೋಟೋ ತೋರಿಸುತ್ತಾರೆ. ನಂತರ ಈ ಫೋಟೋದಲ್ಲಿ ಮಿಸ್ ಆಗಿರೋದನ್ನು ಇಂದು ತೋರಿಸುವೆ ಎಂದು ಅಮೂಲ್ಯಾ ಕಾಲುಗಳಿಗೆ ಗೆಜ್ಜೆ ತೊಡಿಸುತ್ತಾರೆ. ನಂತರ ಬಿಗ್‌ಬಾಸ್‌ ಮನೆಯಲ್ಲಿದ್ದ ಸಂದರ್ಭದಲ್ಲಿ ನನ್ನ ಎಲ್ಲಾ ಎಪಿಸೋಡ್‌ ನೋಡಿದ್ದಾರೆ ಎಂದು ಹೇಳುತ್ತಾ ಅಮೂಲ್ಯಾ ಭಾವುಕರಾಗಿ ನಿರಂಜನ್ ಅವರನ್ನು ಅಪ್ಪಿಕೊಳ್ಳುತ್ತಾರೆ.

45
ಪ್ರತಿ ಕ್ಷಣವೂ ಜೊತೆಯಾಗಿರುವೆ

ಮುಂದುವರಿದು ಮಾತನಾಡಿದ ನಿರಂಜನ್, ಇಡೀ ಜೀವನನ್ನು ಅಮೂಲ್ಯಾ ಜೊತೆಯಲ್ಲಿರಲು ಬಯಸುತ್ತೇನೆ. ನಾವಿಬ್ಬರು ಮುದುಕರಾಗೋವರೆಗೆ ಅಂದ್ರೆ ಪ್ರತಿಕ್ಷಣವೂ ಅಮೂಲ್ಯ ಜೊತೆಗೆ ಇರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ. ನಂತರ ಇಬ್ಬರು ಮುಂದೆ ವೃದ್ದರಾದ್ರೆ ಹೇಗಿರುತ್ತೇವೆ ಎಂಬುದರ ನಟನೆಯನ್ನು ನಿರಂಜನ್ ಮತ್ತು ಅಮೂಲ್ಯಾ ಮಾಡಿದ್ದಾರೆ. ಹಾಗೆಯೇ ಸುಂದರವಾದ ಹಾಡಿಗೆ ಜೋಡಿ ರೊಮ್ಯಾಂಟಿಕ್‌ ಆಗಿ ಹೆಜ್ಜೆ ಹಾಕಿದೆ.

55
ಪ್ರಪೋಸ್ ಫೋಟೋ

ಇದೇ ಪುಸ್ತಕದಲ್ಲಿ ಅಮೂಲ್ಯಾಗೆ ಪ್ರಪೋಸ್ ಮಾಡಿದ ಫೋಟೋವನ್ನು ನಿರಂಜನ್ ಎಲ್ಲರೊಂದಿಗೆ ಶೇರ್ ಮಾಡಿಕೊಂಡರು. ಕಾಲ್ಗೆಜ್ಜೆ ತೊಡಿಸಿದ ಬಳಿಕ ಬೆರಳಿಗೆ ತೊಡಿಸುವ ಮೂಲಕ ಮತ್ತೊಮ್ಮೆ ಎಲ್ಲರ ಮುಂದೆ ಪ್ರಪೋಸ್ ಮಾಡಿದರು.

ಇದನ್ನೂ ಓದಿ: Exclusive Interview: 'ಗೋಲ್ಡನ್​​ ಸ್ಟಾರ್'​ ಗಣೇಶ್​ ದಂಪತಿ ಮಕ್ಕಳನ್ನು ಬೆಳೆಸ್ತಿರೋದು ಹೇಗೆ? ಶಿಲ್ಪಾ ಮಾತಿಗೆ ಫ್ಯಾನ್ಸ್​ ಫಿದಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories