ಸ್ಯಾಂಡಲ್​ವುಡ್​ಗೆ Seetarama Serial Sihi ಎಂಟ್ರಿ: ಪುಟಾಣಿ ರಿತು ಸಿಂಗ್​ಗೆ ಸಂಭಾವನೆ ಎಷ್ಟು? ಬಾಲಕಿ ಹೇಳಿದ್ದೇನು?

Published : Oct 24, 2025, 11:47 AM IST

ಸೀತಾರಾಮ ಧಾರಾವಾಹಿ ಖ್ಯಾತಿಯ ಬಾಲನಟಿ ರಿತು ಸಿಂಗ್ ಅಲಿಯಾಸ್ ಸಿಹಿ, ಇದೀಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಆಯೂರ್ ನಿರ್ದೇಶನದ 'ನನ್ನ ಮಗಳೇ ಸೂಪರ್ ಸ್ಟಾರ್' ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ ಪೋಷಕರು ಮತ್ತು ಮಕ್ಕಳ ಕನಸುಗಳ ನಡುವಿನ ಕಥೆಯನ್ನು ಹೇಳಲಿದೆ.

PREV
17
ಸೀತಾರಾಮದಲ್ಲಿ ಸಿಹಿಯ ಹವಾ

ಸೀತಾರಾಮ ಸೀರಿಯಲ್​ (Seeta Rama Serial) ಮುಗಿದು ಹಲವು ತಿಂಗಳುಗಳೇ ಕಳೆದು ಹೋಗಿವೆ. 2-3 ವರ್ಷಗಳವರೆಗೆ ಈ ಸೀರಿಯಲ್​ ಮೂಲಕ ಹವಾ ಸೃಷ್ಟಿಸಿದ್ದ ಪುಟಾಣಿ ಸಿಹಿ ಉರ್ಫ್​ ರಿತು ಸಿಂಗ್ ಸದ್ಯ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲವಲ್ಲ ಎಂದು ಎಷ್ಟೋ ಜನರು ಅಂದುಕೊಳ್ತಿರೋದು ಇದೆ. ಅಮೃತಧಾರೆ ಸೀರಿಯಲ್​ನಲ್ಲಿ ಗೌತಮ್​ ಮತ್ತು ಭೂಮಿಕಾ ಮಗಳಾಗಿ ರಿತು ಸಿಂಗ್​ ಬರುತ್ತಾಳೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಒಂದಿಷ್ಟು ಮಂದಿ ಕಮೆಂಟ್ಸ್​ ಕೂಡ ಹಾಕಿದ್ದರು. ಆದರೆ ಹಾಗಾಗಲಿಲ್ಲ.

27
ಹಿಂದಿನ ಜನ್ಮದ ಗಿಫ್ಟ್​

ಇಂತಿಪ್ಪ ಪುಟಾಣಿ ರಿತು (Ritu Singh), ​ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡವರನ್ನೂ ಮೀರಿಸುವಂಥ ನಟನೆ ಮಾಡಿ, ಅತ್ತ ಶಾಲೆ, ಇತ್ತ ನಟನೆಯನ್ನೂ ಸಮದೂಗಿಸಿಕೊಂಡು ಹೋಗುತ್ತಿದ್ದ ಪುಟಾಣಿ ಈಗ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾಳೆ. ರಿತು ಸಿಂಗ್​ಗೆ ಈಗ ಏಳು ವರ್ಷ ಮುಗಿದಿದೆ. ಆದರೂ ವಯಸ್ಸಿಗೆ ಮೀರಿದ ಮಾತನಾಡಿ ಕೆಲವೊಮ್ಮೆ ಅತಿಯಾಯಿತು ಎನ್ನಿಸುವಂತೆ ಅನ್ನಿಸಿಕೊಳ್ಳುತ್ತಿದ್ದರೂ ಇವಳ ಅಭಿನಯಕ್ಕೆ ಬಂದರೆ, ಅಬ್ಬಾ ಎಂಥವರೂ ತಲೆದೂಗಲೇಬೇಕು. ಅದೆಂಥ ನಟನೆ, ನೋವು, ನಲಿವು, ಹಾಸ್ಯ, ಕಣ್ಣೀರು... ಯಾವುದೇ ಸನ್ನಿವೇಶ ಇರಲಿ, ಆ ದೃಶ್ಯಗಳಿಗೆ ತಕ್ಕಂತೆ ನಟನೆ ಮಾಡುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಹಿಂದಿನ ಜನ್ಮದ ಗಿಫ್ಟ್​ ಈಕೆಯದ್ದು ಎನ್ನುವಂಥ ನಟನೆಯ ಮೂಲಕ ಮನೆ ಮಾತಾಗಿದ್ದವಳು.

37
ಬಿ.ಆರ್‌.ಲಕ್ಷ್ಮಣ್‌ ರಾವ್‌ ಸಾಹಿತ್ಯ

ಈಗ ರಿತು ಸಿಂಗ್​ 'ನನ್ನ ಮಗಳೇ ಸೂಪರ್ ಸ್ಟಾರ್' ಎಂಬ ಚಿತ್ರದಲ್ಲಿ ರಿತು ಸಿಂಗ್ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾಳೆ. ಆಯೂರ್‌ ನಿರ್ದೇಶನದ ‘ನನ್ನ ಮಗಳೇ ಸೂಪರ್‌ ಸ್ಟಾರ್‌’ (Nanna Magale Super Star) ಚಿತ್ರಕ್ಕೆ ಎರಡು ತಿಂಗಳ ಹಿಂದೆ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ವಿಶೇಷ ಎಂದರೆ, ಬಹಳ ವರ್ಷಗಳ ನಂತರ ಸಾಹಿತಿ ಬಿ.ಆರ್‌.ಲಕ್ಷ್ಮಣ್‌ ರಾವ್‌ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ನೀಡುವ ಮೂಲಕ ಚಿತ್ರರಂಗಕ್ಕೆ ಮರಳಿದ್ದಾರೆ.

47
ಸಂಭಾವನೆ ಬಗ್ಗೆ ರಿತು ಸಿಂಗ್​

ಈ ಸಿನಿಮಾದ ಬಗ್ಗೆ ರಿತು ಸಿಂಗ್​ ಮಾತನಾಡಿದ್ದಾಳೆ. ಅದರಲ್ಲಿ ಅವಳಿಗೆ ಸಂಭಾವನೆ ಬಗ್ಗೆ ಕೇಳಲಾಗಿದೆ. ಆದರೆ, ಹೇಳಿಕೇಳಿ ಅವಳು ದೊಡ್ಡವರನ್ನೂ ಮೀರಿಸೋ ಜಾಣ ಹುಡುಗಿ. ಇನ್ನು ಸಂಭಾವನೆ ಬಗ್ಗೆ ಬಾಯಿ ಬಿಡುತ್ತಾಳಾ? ಹೇಳಲ್ಲ ಎಂದು ನೇರವಾಗಿಯೇ ಹೇಳಿಬಿಟ್ಟಿದ್ದಾಳೆ. ಅಲ್ಲಿಗೆ ಈ ವಯಸ್ಸಿನಲ್ಲಿಯೇ ಅಬ್ಬಬ್ಬಾ ಎಂಥ ಜಾಣ್ಮೆ ಎಂದು ಹಲವರು ಹೇಳುತ್ತಿದ್ದಾರೆ.

57
ಲಕ್ಷ್ಮಣ್​ ರಾವ್​ ಮಾತು

ಅಂದ ಹಾಗೆ 'ನನ್ನ ಮಗಳೇ ಸೂಪರ್ ಸ್ಟಾರ್' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ್ದ ಲಕ್ಷ್ಮಣ್‌ ರಾವ್‌, ‘ನಾನು ಸಾಕಷ್ಟು ಭಾವಗೀತೆಗಳನ್ನು ಬರೆದಿದ್ದರೂ ಚಿತ್ರರಂಗಕ್ಕೂ ನನಗೂ ತುಂಬಾ ದೂರ. ಬಹಳಷ್ಟು ಮಂದಿ ಸಿನಿಮಾಗಳಿಗೆ ಹಾಡು ಬರೆಯುವಂತೆ ಕೇಳುತ್ತಿದ್ದರು. ಆದರೆ, ನಾನು ಬರೆದಿರಲಿಲ್ಲ. ನನ್ನ ಮಗಳೇ ಸೂಪರ್‌ ಸ್ಟಾರ್‌ ಚಿತ್ರದ ಕತೆ ಇಷ್ಟವಾಗಿ ಚಿತ್ರದಲ್ಲಿರುವ ಮೂರು ಹಾಡುಗಳಿಗೆ ನಾನೇ ಸಾಹಿತ್ಯ ನೀಡುತ್ತಿದ್ದೇನೆ. ತುಂಬಾ ವರ್ಷಗಳ ನಂತರ ಸಿನಿಮಾ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿರುವ ಖುಷಿ ನನ್ನದು’ ಎಂದು ಹೇಳಿದ್ದರು.

67
ನಿರ್ದೇಶಕ ಹೇಳಿದ್ದೇನು?

ಚಿತ್ರದ ಬಗ್ಗೆ ಹೇಳಿರುವ ನಿರ್ದೇಶಕ ಆಯೂರ್‌, ‘ಹೆತ್ತವರಿಗೆ ತಮ್ಮ ಮಕ್ಕಳನ್ನು ಎಂಜಿನಿಯರ್‌, ಡಾಕ್ಟರ್‌, ಐಎಎಸ್‌ ಮಾಡುವ ಆಸೆ ಇರುತ್ತದೆ. ಆದರೆ, ಮಕ್ಕಳ ಕನಸುಗಳು ಬೇರೆ ಇರುತ್ತವೆ. ಹೆತ್ತವರ ಆಸೆ ಮತ್ತು ಮಕ್ಕಳ ಕನಸುಗಳು ಯಾವುದು ಸರಿ ಎನ್ನುವುದರ ಮೇಲೆ ಸಿನಿಮಾ ಸಾಗುತ್ತದೆ. ಮಕ್ಕಳಿಗೆ ಮತ್ತು ಪೋಷಕರಿಗೆ ಸಂದೇಶ ಕೊಡುವ ಸಿನಿಮಾ ಇದು’ ಎಂದಿದ್ದಾರೆ.

77
ಸಿನಿಮಾದಲ್ಲಿ ಯಾರಿದ್ದಾರೆ?

ಮೇಕಪ್‌ ಕುಮಾರ್‌ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಎನ್‌.ಎ. ಶಿವಕುಮಾರ್‌ ಈ ಚಿತ್ರದ ನಿರ್ಮಾಪಕರು. ರೀತು ಸಿಂಗ್‌ ಜೊತೆಗೆ, ಚೆಲುವರಾಜ್‌, ಸುಬ್ರಮಣಿ, ರಘುರಾಮ್‌, ಮೀನಾಕ್ಷಿ, ಕುಮಾರ್‌, ರಣವೀರ್‌ ನಟಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಿತು ಸಿಂಗ್​ ಈ ಮಟ್ಟಿಗೆ ಫೇಮಸ್​ ಆಗಲು ನನ್ನ ಅಭಿಮಾನಿಗಳೇ ಕಾರಣ ಎಂದಿದ್ದಾಳೆ.

Read more Photos on
click me!

Recommended Stories