ಬಿಗ್‌ಬಾಸ್ ಕನ್ನಡ ಸೀಸನ್ 12ರ ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ನೀಡಿದ ವಿಶೇಷ ಅಧಿಕಾರಗಳು ಮತ್ತು ಅವರೇ ಕ್ಯಾಪ್ಟನ್ ಆಗುತ್ತಿರುವುದು ಇತರೆ ಸ್ಪರ್ಧಿಗಳು ಹಾಗೂ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಮೂರನೇ ವಾರದ ಮುಕ್ತಾಯಕ್ಕೆ ಐವರು ಸ್ಪರ್ಧಿಗಳು ಹೊರಗೆ ಹೋದ್ರೆ, ಮೂವರು ವೈಲ್ಡ್‌ಕಾರ್ಡ್ ಎಂಟ್ರಿಯಾಗಿ ಬಂದಿದ್ದಾರೆ. ನಾಲ್ಕನೇ ವಾರಕ್ಕೆ ಬಿಗ್‌ಬಾಸ್ ಮನೆಗೆ ಮೊದಲ ಕ್ಯಾಪ್ಟನ್ ಸಿಗಲಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ಗೆ ರಘು ಮತ್ತು ರಿಷಾ ಆಯ್ಕೆಯಾಗಿದ್ದಾರೆ. ಇಬ್ಬರ ಆಟದ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರು ಬೇಸರದಿಂದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
25
ಕ್ಯಾಪ್ಟನ್ಸಿ ಟಾಸ್ಕ್
ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ಬಿಗ್‌ಬಾಸ್ ಮೂರು ತಂಡಗಳನ್ನಾಗಿ ಮಾಡಿ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನೇ ನಾಯಕರನ್ನಾಗಿ ಮಾಡಿದ್ದಾರೆ. ಒಂದು ಹಂತದ ಆಟದ ನಂತರ ಮೂರು ತಂಡದ ನಾಯಕರಾದ ರಘು, ರಿಷಾ ಮತ್ತು ಸೂರಜ್ ಮೂವರಿಗೆ ವಿಶೇಷ ಪವರ್ ಹೊಂದಿರುವ ನಾಣ್ಯ ನೀಡುತ್ತಾರೆ. ರಘು ಮತ್ತು ರಿಷಾ ವಿಶೇಷ ಪವರ್ ಹೊಂದಿರುವ ನಾಣ್ಯ ಪಡೆದು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆರ್ಹತೆ ಪಡೆದುಕೊಂಡಿದ್ದರು. ತಂಡದ ಜೊತೆ ಹೋದ ಸೂರಜ್ ಕ್ಯಾಪ್ಟನ್ಸಿ ಆಟದಿಂದ ಹೊರಗೆ ಬಿದ್ದಿದ್ದಾರೆ.
35
ವೈಲ್ಡ್ ಕಾರ್ಡ್ ಸ್ಪರ್ಧಿಗಳು
ಈ ವಾರ ಎಂಟ್ರಿ ಪಡೆದಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಆದೇಶದಂತೆಯೇ ಸೇವ್ ಆಗಿದ್ದರು. ಇದೀಗ ಮೂವರಲ್ಲಿಯೇ ಒಬ್ಬರು ಮೊದಲ ಕ್ಯಾಪ್ಟನ್ ಆಗುತ್ತಿರೋದಕ್ಕೆ ಇತರೆ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಈ ವಾರ ಸಾಲು ಸಾಲು ವಿಶೇಷ ಅಧಿಕಾರಗಳನ್ನು ನೀಡಿದ್ದಕ್ಕೆ ವೀಕ್ಷಕರು ಸಹ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ವೀಕ್ಷಕರು ಕಮೆಂಟ್ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮೂರು ವಾರಗಳಿಂದ ಮನೆಯಲ್ಲಿರೋ ಸ್ಪರ್ಧಿಗಳ ಪೈಕಿ ಒಬ್ಬರು ಕ್ಯಾಪ್ಟನ್ ಆಗಬೇಕಿತ್ತು. ಒಂದಾದ ನಂತರ ಒಂದರಂತೆ ವಿಶೇಷ ಅಧಿಕಾರಗಳನ್ನು ನೀಡುವ ಮೂಲಕ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಕ್ಯಾಪ್ಟನ್ ಮಾಡಲಾಯಿತೆಯೇ ವಿನಃ ಟಾಸ್ಕ್‌ನಿಂದಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಅಂತಿಮವಾಗಿ ರಿಷಾ ಮತ್ತು ರಘು ಕ್ಯಾಪ್ಟನ್ಸಿ ಟಾಸ್ಕ್ ಆಡಿದ್ದಾರೆ. ಕತ್ತಲೆ ಮನೆಯಲ್ಲಿರುವ ತಮ್ಮ ಹೆಸರಿನ ಅಕ್ಷರಗಳನ್ನು ಹುಡುಕಿ ಸರಿಯಾಗಿ ಜೋಡಿಸುವ ಮೊದಲ ಸ್ಪರ್ಧಿ ಸೀಸನ್ 12ರ ಫಸ್ಟ್ ಕ್ಯಾಪ್ಟನ್ ಆಗಲಿದ್ದಾರೆ. ಸೂರಜ್ ಎಲ್ಲರ ಮೆಚ್ಚುಗೆ ಪಡೆದುಕೊಂಡರೂ ತಂತ್ರಗಾರಿಕೆಯಲ್ಲಿ ಎಡವಿದಂತೆ ಕಾಣಿಸುತ್ತಿದೆ. ರಿಷಾ ಮತ್ತು ರಘು ಇರ್ವರಲ್ಲಿ ಯಾರು ಕ್ಯಾಪ್ಟನ್ ಅಗ್ತಾರೆ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.