Bigg Bossಗೆ ಸಂಜನಾ ಬುರ್ಲಿ? ಅಪ್ಪ-ಅಮ್ಮಂಗೆ ಹೇಳ್ದೆ ಮದ್ವೆಯಾಗಿದ್ಯಾಕೆ? ಲೈವ್​ನಲ್ಲಿ ಬಂದು ನಟಿ ಹೇಳಿದ್ದೇನು?

Published : Oct 07, 2025, 06:25 PM IST

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ಇದೀಗ 'ಶ್ರೀಗಂಧದ ಗುಡಿ' ಎಂಬ ಹೊಸ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.  ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡು, ಸೀರಿಯಲ್‌ನ ಕಥೆ ಮತ್ತು ಬಿಗ್ ಬಾಸ್ ಪ್ರವೇಶದ ಬಗ್ಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

PREV
17
ಪುಟ್ಟಕ್ಕನ ಮಕ್ಕಳು ಬಿಟ್ಟ ಸ್ನೇಹಾ

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್​ನಲ್ಲಿ ಸ್ನೇಹಾ ಮಿಸ್​ ಪಾತ್ರದಿಂದ ಸಕತ್​ ಫೇಮಸ್​ ಆಗಿದ್ದವರು ನಟಿ ಸಂಜನಾ ಬುರ್ಲಿ. ಸೀರಿಯಲ್​ ರೋಚಕ ಟ್ವಿಸ್ಟ್​ ಪಡೆದು, ಈಕೆ ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗುತ್ತಾಳೆ ಎನ್ನುವಷ್ಟರಲ್ಲಿಯೇ ಉನ್ನತ ಶಿಕ್ಷಣದ ಕಾರಣ ಕೋಟ್ಟು ಸೀರಿಯಲ್​ ಬಿಟ್ಟುಬಿಟ್ಟರು. ಕೊನೆಗೆ ಸ್ನೇಹಾ ಪಾತ್ರವನ್ನೇ ಸಾಯಿಸಿದ ನಿರ್ದೇಶಕರು ಕಥೆಯನ್ನೇ ಬೇರೆ ರೂಪದಲ್ಲಿ ತೆಗೆದುಕೊಂಡು ಹೋದರು.

27
ಶ್ರೀಗಂಧದ ಗುಡಿಯ ಚಂದನಾ

ಇಂತಿಪ್ಪ ನಟಿ ಸಂಜನಾ ಬುರ್ಲಿ (Sanjana Burli) ಇದೀಗ ಕಲರ್ಸ್​ ಕನ್ನಡ ವಾಹಿನಿಯ ಶ್ರೀಗಂಧದ ಗುಡಿ (Shreegandhada Gudi) ಸೀರಿಯಲ್​ನಲ್ಲಿ ನಾಯಕಿ ಚಂದನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿನ್ನೆ ಅಂದರೆ ಅಕ್ಟೋಬರ್​ 6ರಿಂದ ಈ ಸೀರಿಯಲ್​ ಶುರುವಾಗಿದೆ. ಇದೀಗ ದಿಢೀರ್​ ಎಂದು ಸಂಜನಾ ಅವರು ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡು ವೀಕ್ಷಕರ ಜೊತೆ ಮಾತನಾಡಿದ್ದಾರೆ. ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

37
ಬಿಗ್​ಬಾಸ್​ಗೆ ನಟಿ?

ಮೊದಲಿಗೆ ನಟಿಗೆ ಎದುರಾದ ಪ್ರಶ್ನೆ ನೀವ್ಯಾಕೆ ಬಿಗ್​ಬಾಸ್​ಗೆ ಹೋಗಿಲ್ಲ ಎನ್ನುವುದು. ಮುಂದಿನ ಸಲವಾದ್ರೂ ಹೋಗಿ ಎಂದು ಹೇಳಿದ್ದಾರೆ. ಆ ಪ್ರಶ್ನೆಗೆ ನಯವಾಗಿ ನುಣುಚಿಕೊಂಡು ಉತ್ತರ ಕೊಟ್ಟ ಸಂಜನಾ ಬುರ್ಲಿ ಅವರು ಶ್ರೀಗಂಧದ ಗುಡಿ ಸಾವಿರ ಎಪಿಸೋಡ್​ ಆದರೆ, ಮುಂದಿನ ಸಲ ಹೋಗುವುದೂ ಕಷ್ಟ ಎನ್ನುವ ಮೂಲಕ ಬಿಗ್​ಬಾಸ್​ಗೆ ಹೋಗಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

47
ನೀವು ಮದ್ವೆಯಾಗಿದ್ದು ಸರಿನಾ?

ಈ ವೇಳೆಗೆ ಅಪ್ಪ-ಅಮ್ಮನಿಗೆ ಹೇಳದೇ ನೀವು ಮದ್ವೆಯಾಗಿದ್ದು ಸರಿನಾ? ಅವರಿಗೆ ಹರ್ಟ್​ ಆಗಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ. ಅಷ್ಟಕ್ಕೂ ಈ ಪ್ರಶ್ನೆ ಬಂದಿರುವುದು ಈ ಸೀರಿಯಲ್​ನ ನಾಯಕಿ ಚಂದನಾ ಪಾತ್ರಕ್ಕೆ. ಏಕೆಂದರೆ, ಇದಾಗಲೇ ತೋರಿಸುವ ಪ್ರೊಮೋದಲ್ಲಿ ಚಂದನಾ ಯಾರಿಗೂ ಹೇಳದೇ ಮದುವೆಯಾಗಿ ಬಂದಿದ್ದಾಳೆ. ಶಾಲಾ-ಕಾಲೇಜು ದಿನಗಳಿಂದ ಹಿಡಿದು ಕೊನೆಯವರೆಗೂ ಹೈಯೆಸ್ಟ್​ ಅಂಕ ಪಡೆದು, ವಿದೇಶದ ಕನಸು ಕಾಣುತ್ತಿದ್ದ ಹುಡುಗಿ, ಕೊನೆಗೆ ಯಾವುದೂ ಇಲ್ಲದೇ ತೀರಾ ಬಡವನ ಮನೆಗೆ ಬಂದಿದ್ದಾಳೆ. ಅದಕ್ಕೆ ನಟಿ, ನೀವು ಅದನ್ನೆಲ್ಲಾ ಸೀರಿಯಲ್​ನಲ್ಲಿಯೇ ನೋಡಬೇಕು. ಅದೇ ಮಜಾ ಇರೋದು ಎಂದಿದ್ದಾರೆ.

57
ಶ್ರೀಮಂತರ ಮನೆ ಮಗಳು...

ನಾಲ್ವರು ಅಣ್ಣ-ತಮ್ಮಂದಿರು, ಮುರಿದು ಹೋದ ಮನೆ, ಮನೆಯಲ್ಲಿ ಏನೂ ಸರಿಯಿಲ್ಲ, ಯಾವ ವಸ್ತು ಮುಟ್ಟಿದರೂ ಪಟ ಪಟ ಎಂದು ಉದುರುತ್ತೆ... ಇಂಥ ಮನೆಗೆ ಬಂದಿದ್ದಾಳೆ ಚಂದನಾ. ಶ್ರೀಮಂತ ಮನೆತನದಲ್ಲಿ ಹುಟ್ಟಿ ಯಾವುದಕ್ಕೂ ಕಡಿಮೆ ಇಲ್ಲ ಎಂದು ಬೆಳೆದಿರುವ ಹೆಣ್ಣುಮಗಳ ಸ್ಟೋರಿ ಇದು.

67
ಮುಂದೆ ಚಂದನಾ ಸ್ಥಿತಿ ಏನು?

ಮುಂದೆ ಚಂದನಾ ಸ್ಥಿತಿ ಏನು? ಆ ಮನೆಯನ್ನು ಗಂಧದ ಗುಡಿ ಮಾಡ್ತಾಳಾ? ಹೀಗೆ ಮಾಡುವಲ್ಲಿ ಅವಳ ಸ್ಥಿತಿ ಏನಾಗುತ್ತದೆ ಎನ್ನುವ ಸ್ಟೋರಿ ಇದಾಗಿದೆ. ಈ ಬಗ್ಗೆ ನಟಿ ಸಂಜನಾ ಬುರ್ಲಿ ಮಾತನಾಡಿದ್ದು, ಸೀರಿಯಲ್​ ಅನ್ನು ವೀಕ್ಷಿಸಿ ಆಶೀರ್ವದಿಸುವಂತೆ ಕೋರಿಕೊಂಡಿದ್ದಾರೆ.

77
ಶೂಟಿಂಗ್​ ಬಗ್ಗೆ ಸಂಜನಾ

ಇದೇ ವೇಳೆ ತಮ್ಮ ಡ್ಯೂಟಿ ಟೈಮಿಂಗ್ಸ್​ ಬಗ್ಗೆಯೂ ವೀಕ್ಷಕರ ಪ್ರಶ್ನೆಗೆ ಉತ್ತರಿಸಿದ್ದಾರೆ. ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಷೆಡ್ಯೂಲ್​ ಇರುತ್ತದೆ. ಕೆಲವೊಮ್ಮೆ ಫುಲ್​ ಟೈಮ್​ ಇರುತ್ತದೆ. ಕೆಲವೊಮ್ಮೆ ಶೂಟಿಂಗ್​ ಬೇಗ ಮುಗಿದರೆ ಬೇಗನೇ ಹೋಗಬಹುದು ಎಂದು ಹೇಳಿರುವ ಅವರು ಸೀರಿಯಲ್​ಗಳಲ್ಲಿಯೂ ಹೇಗೆ ಇಡೀ ಟೀಮ್​ ಕಷ್ಟಪಟ್ಟು ದುಡಿಯುತ್ತದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories