ಬಿಗ್ಬಾಸ್ ಅಗ್ನಿಪರೀಕ್ಷೆ ತೀರ್ಪುಗಾರ್ತಿಯಾಗಿರುವ ಸಂಗೀತಾ ಶೃಂಗೇರಿ, ಟಿಆರ್‌ಪಿಗಾಗಿ ಸ್ಪರ್ಧಿಗಳಿಗೆ ಅವಮಾನ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ನಿಮಗೆ ಇಷ್ಟವಿದ್ದರೆ ನೋಡಿ, ಇಲ್ಲದಿದ್ದರೆ ಬಿಡಿ ಎಂಬ ಅವರ ಉತ್ತರಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್ಬಾಸ್ ಮೂಲಕ ಖ್ಯಾತಿ ಪಡೆದವರು ಸಂಗೀತಾ ಶೃಂಗೇರಿ. ಬಿಗ್ಬಾಸ್ನಿಂದ ಅಪಾರ ಜನಪ್ರಿಯತೆಯನ್ನೂ ಗಳಿಸಿದ ಅವರು ಇದೀಗ ಬಿಗ್ಬಾಸ್ 13ನೇ ಸೀಸನ್ನಲ್ಲಿ ಜಡ್ಜ್ ಆಗಿದ್ದಾರೆ. ಜನ ಸಾಮಾನ್ಯರಿಗೆ ಬಿಗ್ಬಾಸ್ ಮನೆಯೊಳಕ್ಕೆ ಹೋಗುವ ಅವಕಾಶ ನೀಡುವ ಸಲುವಾಗಿ ನಡೆದ ಅಗ್ನಿಪರೀಕ್ಷೆಯಲ್ಲಿ (Bigg Boss Agni Pareekshe) ಅವರು ತೀರ್ಪುಗಾರರಲ್ಲಿ ಒಬ್ಬರು.
26
ಅಗ್ನಿಪರೀಕ್ಷೆಯ ಬಗ್ಗೆ ಟೀಕೆ
ಬಿಗ್ಬಾಸ್ ಅಗ್ನಿ ಪರೀಕ್ಷೆಯಲ್ಲಿ ಜನರನ್ನು ತೀರ್ಪುಗಾರರು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ತೀರ್ಪುಗಾರರು ಹೇಳುವ ಮಾತುಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಇದು ದುರಹಂಕರಾದ ಮಾತುಗಳು, ಖುದ್ದು ಸುದೀಪ್ ಅವರೇ ಇಂಥ ದುರಹಂಕಾರದ ಮಾತುಗಳನ್ನು ಆಡುವುದಿಲ್ಲ ಎಂದೆಲ್ಲಾ ಟೀಕೆ ಮಾಡಲಾಗುತ್ತಿದೆ.
36
ಸ್ಪರ್ಧಿಗಳಿಗೆ ಅವಮಾನ
ಕೆಲವರು, ಈ ಅಗ್ನಿ ಪರೀಕ್ಷೆ ಅಂತ ಮಾಡಿರೋದೇ ಟಿಆರ್‌ಪಿಗಾಗಿ. ಅದಕ್ಕಾಗಿ, ಸ್ಪರ್ಧಿಗಳನ್ನು ಕೀಳಾಗಿ ನೋಡಲಾಗುತ್ತಿದೆ ಎಂದೆಲ್ಲಾ ಹೇಳಲಾಗುತ್ತಿದ್ದು, ಇದೀಗ ಅದೇ ಪ್ರಶ್ನೆಯನ್ನು ಸಂಗೀತಾ ಶೃಂಗೇರಿ ಅವರಿಗೂ ಕೇಳಲಾಗಿತ್ತು.
ಇವೆಲ್ಲಾ ಮಾಡ್ತಿರೋದು ಟಿಆರ್‌ಪಿಗಾಗಿ ಅಂತಾರೆ. ನಿಜವಾಗಿಯೂ ಸಾಮಾನ್ಯ ಜನರನ್ನು ಕಳಿಸೋದು ಹೌದಾ? ಹೀಗೆ ಅವರನ್ನು ಅವಮಾನ ಮಾಡ್ತಿರೋದೆಲ್ಲಾ ಯಾಕೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ.
56
ಇಷ್ಟ ಇದ್ರೆ ನೋಡಿ, ಇಲ್ಲಾಂದ್ರೆ...
ಅದಕ್ಕೆ ಗರಂ ಆದ ಸಂಗೀತಾ, ಟಿಆರ್ಪಿ ಟಿಆರ್ಪಿ ಅಂತೀರಾ. ಅದೆಲ್ಲಾ ನಿಮಗೆ ಯಾಕೆ? TRPನೋ ಇನ್ನೇನೋ, ಅದನ್ನು ಹೇಳಿ ಹೇಳಿನೇ ನೀವು ಟಿಆರ್ಪಿ ಹೆಚ್ಚು ಮಾಡ್ತಿರೋದು, ಅದನ್ನೆಲ್ಲಾ ಕಟ್ಟಿಕೊಂಡು ನಿಮಗೆಲ್ಲಾ ಏನು ಆಗಬೇಕಿದೆ ಎಂದರು. ನಿಮಗೆ ಇಷ್ಟವಿದ್ದರೆ ಬಿಗ್ಬಾಸ್ ನೋಡಿ, ಇಲ್ಲದಿದ್ದರೆ ಬಿಡಿ. ಸುಮ್ಮನೇ ಟಿಆರ್ಪಿ ವಿಷ್ಯ ಎಲ್ಲಾ ಮಾತನಾಡಲು ಹೋಗಬೇಡಿ ಎಂದು ಕಿಡಿ ಕಾರಿದರು.
66
ನೆಟ್ಟಿಗರ ಆಕ್ರೋಶ
ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿರುದ್ಧ ಅವರ ಅಭಿಮಾನಿಗಳೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಸಂಗೀತಾ ಹೇಳಿದ್ದು, ಟಿಆರ್ಪಿ ವಿಷ್ಯ ಬಿಡಿ. ನಿಮಗೆ ಮನರಂಜನೆ ಸಾಕಲ್ವಾ? ಇಷ್ಟ ಆದ್ರೆ ನೋಡಿ, ಇಲ್ಲಾಂದ್ರೆ ಇಲ್ಲ ಎಂದು. ಆದರೆ ಹೀಗೆ ಹೇಳಿದ್ದು, ಅತಿಯಾಯ್ತು, ಇದು ಅಹಂಕಾರದ ಪರಮಾವಧಿ ಎಂದೆಲ್ಲಾ ಕಮೆಂಟ್ನಲ್ಲಿ ನಟಿಯ ಟ್ರೋಲ್ ಮಾಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.