‘ನಗು, ಜಗತ್ತು ನಿನ್ನ ಜೊತೆ ನಗುತ್ತದೆ’ ಎಂದ ಆ್ಯಂಕರ್ ಅನುಶ್ರೀ: ಫೋಟೋಗಳ ಹಿಂದಿದೆ ಈ ವಿಶೇಷ ಕ್ಯಾಪ್ಶನ್

Published : Aug 23, 2026, 06:54 PM IST

ಹೊಸ ಫೋಟೋಶೂಟ್‌ನಲ್ಲಿ ಅನುಶ್ರೀ ರಾಯಲ್ ಬ್ಲೂ ಬಣ್ಣದ ಕಂಗೊಳಿಸುವ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸರಳತೆ ಹಾಗೂ ಗ್ಲಾಮರ್ ಎರಡನ್ನೂ ಮೇಳೈಸಿರುವ ಅವರ ಈ ಲುಕ್, ಫೋಟೋಗಳಿಗೆ ಮತ್ತಷ್ಟು ಮೆರುಗು ನೀಡಿದೆ.

PREV
16
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಮತ್ತೊಮ್ಮೆ ತಮ್ಮ ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ವಿಭಿನ್ನ ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಅನುಶ್ರೀ, ಇದೀಗ ತಮ್ಮ ಹೊಸ ಫೋಟೋಶೂಟ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

26
ರಾಯಲ್ ಬ್ಲೂ ಲುಕ್‌ನಲ್ಲಿ ಅನುಶ್ರೀ

ಹೊಸ ಫೋಟೋಶೂಟ್‌ನಲ್ಲಿ ಅನುಶ್ರೀ ರಾಯಲ್ ಬ್ಲೂ ಬಣ್ಣದ ಕಂಗೊಳಿಸುವ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸರಳತೆ ಹಾಗೂ ಗ್ಲಾಮರ್ ಎರಡನ್ನೂ ಮೇಳೈಸಿರುವ ಅವರ ಈ ಲುಕ್, ಫೋಟೋಗಳಿಗೆ ಮತ್ತಷ್ಟು ಮೆರುಗು ನೀಡಿದೆ. ಕ್ಯಾಮೆರಾ ಮುಂದೆ ಆತ್ಮವಿಶ್ವಾಸದಿಂದ ಪೋಸ್ ನೀಡಿರುವ ಅನುಶ್ರೀ ಅವರ ಸ್ಟೈಲಿಶ್ ಅವತಾರ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

36
ವಜ್ರದ ನೆಕ್ಲೇಸ್ ಹೆಚ್ಚಿಸಿದ ರಾಯಲ್ ಲುಕ್

ಅನುಶ್ರೀ ತಮ್ಮ ಲುಕ್‌ಗೆ ತಕ್ಕಂತೆ ಕತ್ತಿನಲ್ಲಿ ಮಿನುಗುವ ನೆಕ್ಲೇಸ್ ಧರಿಸಿದ್ದು, ಕೈಯಲ್ಲಿ ಸರಳ ಬಳೆಗಳನ್ನು ತೊಟ್ಟಿದ್ದಾರೆ. ಅತಿಯಾದ ಅಲಂಕಾರವಿಲ್ಲದೆ ಆಭರಣಗಳ ಮೂಲಕವೇ ತಮ್ಮ ಲುಕ್‌ಗೆ ರಿಚ್ ಟಚ್ ನೀಡಿದ್ದಾರೆ. ಅವರ ಹೇರ್‌ಸ್ಟೈಲ್ ಹಾಗೂ ಸಿಂಪಲ್ ಮೇಕಪ್ ಕೂಡ ಈ ಫೋಟೋಶೂಟ್‌ನ ವಿಶೇಷ ಆಕರ್ಷಣೆಯಾಗಿದೆ.

46
ಪ್ರಕೃತಿಯ ನಡುವೆ ಫೋಟೋಶೂಟ್

ದೊಡ್ಡ ಮರ ಹಾಗೂ ಬಿಳಲುಗಳಿರುವ ಪ್ರಕೃತಿಯ ಸುಂದರ ಹಿನ್ನೆಲೆಯ ನಡುವೆ ಅನುಶ್ರೀ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಪ್ರಕೃತಿಯ ಹಸಿರಿನ ನಡುವೆ ರಾಯಲ್ ಬ್ಲೂ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಅವರ ಫೋಟೋಗಳು ವಿಭಿನ್ನ ದೃಶ್ಯಾನುಭವ ನೀಡುತ್ತಿವೆ. ಜೊತೆಗೆ “ನಗು, ಜಗತ್ತು ನಿನ್ನ ಜೊತೆ ನಗುತ್ತದೆ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

56
ಅನುಶ್ರೀ ನಗುವಿಗೆ ನೆಟ್ಟಿಗರು ಫಿದಾ!

ಅನುಶ್ರೀ ಅವರ ಫೋಟೋಶೂಟ್‌ನ ಮತ್ತೊಂದು ಪ್ರಮುಖ ಆಕರ್ಷಣೆ ಅವರ ಮೋಡಿ ಮಾಡುವ ಮುಗುಳುನಗೆ. ಕೆಲವು ಫೋಟೋಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡರೆ, ಮತ್ತೊಂದೆಡೆ ತಮ್ಮ ಸಹಜ ನಗುವಿನ ಮೂಲಕ ಕ್ಯೂಟ್ ಲುಕ್‌ನಲ್ಲೂ ಮಿಂಚಿದ್ದಾರೆ. ಇದೀಗ ಈ ಫೋಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬರುತ್ತಿವೆ.

66
ನಿರೂಪಣೆಯ ಜೊತೆಗೆ ಫ್ಯಾಷನ್‌ನಲ್ಲೂ ಸೈ!

ಅನುಶ್ರೀ ಕೇವಲ ನಿರೂಪಣೆಯಲ್ಲಷ್ಟೇ ಅಲ್ಲದೆ, ತಮ್ಮ ವಿಭಿನ್ನ ಫ್ಯಾಷನ್ ಸ್ಟೈಲ್‌ನಿಂದಲೂ ಆಗಾಗ್ಗೆ ಗಮನ ಸೆಳೆಯುತ್ತಾರೆ. ಸಾಂಪ್ರದಾಯಿಕ ಉಡುಗೆ ಇರಲಿ, ಮಾಡರ್ನ್ ಲುಕ್ ಇರಲಿ, ತಮ್ಮದೇ ಆದ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಈ ಬಾರಿ ರಾಯಲ್ ಬ್ಲೂ ಲುಕ್‌ನಲ್ಲಿ ಅನುಶ್ರೀ ಮಿಂಚಿರುವ ಹೊಸ ಫೋಟೋಶೂಟ್ ಕೂಡ ಅದೇ ಸಾಲಿಗೆ ಸೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories