ಬಿಗ್‌ಬಾಸ್ 12ರ ವಿಜೇತ ಗಿಲ್ಲಿ ನಟ, ಖ್ಯಾತಿಯಿಂದಾಗಿ ಅಭಿಮಾನಿಗಳ ಒತ್ತಡವನ್ನು ಎದುರಿಸುತ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರದ ಮಾನಸಿಕ ಹೊಂದಾಣಿಕೆಯ ಬಗ್ಗೆ ಸಾಧು ಕೋಕಿಲ ವಿವರಿಸಿದ್ದು, ಎಲ್ಲರನ್ನೂ ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಗಿಲ್ಲಿ ನಟ ಕೂಡ ಕ್ಷಮೆಯಾಚಿಸಿದ್ದಾರೆ.
ಬಿಗ್‌ಬಾಸ್ 12 (Bigg Boss 12)ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಗಿಲ್ಲಿ ನಟನಿಗೆ ಈಗ ಬಿಡುವೇ ಇಲ್ಲ. ಎಲ್ಲಾ ಕಡೆಗಳಲ್ಲಿಯೂ ಸಿಕ್ಕಾಪಟ್ಟೆ ಡಿಮಾಂಡ್. ಇದೇ ಕಾರಣಕ್ಕೆ, ಈಗ ಗಿಲ್ಲಿಯ ಮೇಲೆ ಕೆಲವು ಆರೋಪಗಳೂ ಕೇಳಿಬರುತ್ತಿವೆ!
27
ಅಭಿಮಾನಿಗಳ ಆಸೆ
ಸೆಲೆಬ್ರಿಟಿ ಆದ ಮೇಲೆ ಅಭಿಮಾನಿಗಳು ತಾವು ಹೇಳಿದಂತೆ ಕೇಳಬೇಕು ಎನ್ನುತ್ತಾರೆ. ಆದರೆ ಈಗಷ್ಟೇ ಬಿಗ್ಬಾಸ್ನಿಂದ ಹೊರಕ್ಕೆ ಬಂದಿರುವ ಗಿಲ್ಲಿ ನಟನಿಗೆ ಸಾವಿರಾರು ಅಭಿಮಾನಿಗಳನ್ನು ಭೇಟಿ ಮಾಡುವುದು, ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಅವರು ಹೇಳಿದಂತೆ ಕೇಳುವುದು... ಇದ್ಯಾವುದೂ ಸಾಧ್ಯವಿಲ್ಲದ ಮಾತು. ಸಿಕ್ಕಾಪಟ್ಟೆ ಬಿಜಿ ಇರುವುದು ಒಂದೆಡೆಯಾದರೆ, ವೋಟ್ ಹಾಕಿದ ನಮಗೆ ಹಾಗೆ ಮಾಡಿಲ್ಲ, ಹೀಗೆ ಮಾಡಿಲ್ಲ ಎನ್ನುವ ಆರೋಪಗಳು ಇನ್ನೊಂದೆಡೆ.
37
ಗಿಲ್ಲಿ ನಟ ಸುಸ್ತು
ಇದಾಗಲೇ ಗಿಲ್ಲಿ ನಟ (Bigg Boss Gilli Nata) ಫುಲ್ ಸುಸ್ತಾಗಿರುವ ಹಾಗೆ ಕಾಣಿಸುತ್ತಿದ್ದಾರೆ. ಎಲ್ಲರನ್ನೂ ಮ್ಯಾನೇಜ್ ಮಾಡಿಕೊಂಡು ಹೋಗುವುದು ಸಾಮಾನ್ಯ ಜನರಿಗೆ ಆಗದ ಮಾತು. ಆದರೆ ಎಲ್ಲರನ್ನೂ ಹ್ಯಾಂಡಲ್ ಮಾಡುವ ಅನಿವಾರ್ಯತೆ ಗಿಲ್ಲಿ ನಟನಿಗೆ ಉಂಟಾಗಿದೆ.
ಈಗ ಇದರ ನಡುವೆಯೇ, ಹಾಸ್ಯ ನಟ ಸಾಧು ಕೋಕಿಲ ಅವರು ಗಿಲ್ಲಿ ನಟನ ಮನಸ್ಥಿತಿ ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಏನಾಗಿದೆ ಎನ್ನುವುದನ್ನು ವಿವರಿಸಿದ್ದಾರೆ.
57
ಸಾಧು ಕೋಕಿಲ ಏನಂದ್ರು?
ಬಿಗ್‌ಬಾಸ್ ಮನೆಯೊಳಗಿನ ಪ್ರಪಂಚಕ್ಕೂ, ಹೊರಗಿನ ಪ್ರಪಂಚಕ್ಕೂ ತುಂಬಾ ವ್ಯತ್ಯಾಸ ಇದೆ. ಗಿಲ್ಲಿ ನಟ ಅಷ್ಟೊಂದು ತಿಂಗಳು ಬಿಗ್‌ಬಾಸ್ ಮನೆಯಲ್ಲಿ ಇದ್ದುದರಿಂದ ಅವರು ಹೊರಗೆ ಬಂದ ತಕ್ಷಣ, ಹೊರಗಿನ ಪ್ರಪಂಚಕ್ಕೆ ಕೂಡಲೇ ಅಡ್ಜಸ್ಟ್ ಆಗಬೇಕು ಎಂದರೆ ಅದು ತುಂಬಾ ಕಷ್ಟ. ಅಷ್ಟೂ ತಿಂಗಳು ಹೊರಗಿನ ಪ್ರಪಂಚದ ಗೌಜಿ, ಗದ್ದಲ ಇರುವುದಿಲ್ಲ. ಆದ್ದರಿಂದ ಅವರಿಗೆ ಕೂಡಲೇ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಗಿಲ್ಲಿ ನಟನ ಮಾನಸಿಕ ಸ್ಥಿತಿಯನ್ನು ವಿವರಿಸಿದ್ದಾರೆ.
67
ನಮಗೆ ಅರ್ಥವಾಗ್ತಿಲ್ಲ
ಗಿಲ್ಲಿ ನಟ ಹಾಸ್ಯ ಕಲಾವಿದ. ಸದಾ ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡುವವರು. ಆದರೆ ಗಿಲ್ಲಿ ಹೊರಗಡೆ ಬಂದ ಮೇಲೆ ಫುಲ್ ಸೈಲೆಂಟ್ ಆಗಿದ್ದಾರೆ. ಆದರೆ ನಿಜವಾಗಿ ಹೇಳಬೇಕು ಎಂದರೆ ಅವರ ಮನಸ್ಥಿತಿಯೇ ಹಾಗೆ ಆಗಿ ಬಿಟ್ಟಿರುತ್ತದೆ. ಕೂಡಲೇ ಅಡ್ಜಸ್ಟ್ ಆಗಬೇಕು ಎಂದರೆ ಅದು ಸುಲಭದ ಮಾತಲ್ಲ. ಆದರೆ ಅದು ನಮಗೆ ಅರ್ಥವಾಗದೇ ಇರುವುದು ಬೇಸರದ ಸಂಗತಿ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ಸಾಧು ಕೋಕಿಲ.
77
ಕ್ಷಮೆ ಕೋರಿದ ಗಿಲ್ಲಿ
ಇದಾಗಲೇ ಗಿಲ್ಲಿ ನಟ ಕೂಡ, ನನಗೆ ಎಲ್ಲಾ ಕಡೆಗಳಿಂದಲೂ ಕರೆ ಬರುತ್ತಿರುವ ಕಾರಣ, ಎಲ್ಲಾ ಅಭಿಮಾನಿಗಳನ್ನು ಭೇಟಿಯಾಗಲು ಆಗುತ್ತಿಲ್ಲ ಎಂದಿದ್ದಾರೆ. ಇದಾಗಲೇ ಅಭಿಮಾನಿಯೊಬ್ಬರಿಗೆ ಕ್ಷಮೆಯನ್ನೂ ಕೋರಿದ್ದಾರೆ. ಒಟ್ಟಿನಲ್ಲಿ ಸೆಲೆಬ್ರಿಟಿ ಜೀವನ ಎಂದರೆ ಸುಖ ಮಾತ್ರವಲ್ಲ, ಎಷ್ಟೊಂದು ಕಷ್ಟವೂ ಇರುತ್ತದೆ ಎನ್ನುವುದು ಗಿಲ್ಲಿ ನಟನಿಂದ ಜನರು ತಿಳಿದುಕೊಳ್ಳಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.