'ಬಾರಿಸಿಬಿಡ್ತೀನಿ' ಅಂದ್ರೆ ಹುಡುಗಿ ಬಿದ್ದಿದ್ದಾಳೆ ಎಂದೇ ಅರ್ಥವಂತೆ! Amrutadhaare ಜೈದೇವನ ಲವ್​ ಪಾಠ ಕೇಳಿ

Published : Feb 09, 2026, 12:43 PM IST

ಅಮೃತಧಾರೆ ಧಾರಾವಾಹಿಯಲ್ಲಿ, ಮಲ್ಲಿಯನ್ನು ಪ್ರೀತಿಯ ಬಲೆಗೆ ಬೀಳಿಸಲು ಜೈದೇವ ಕಳುಹಿಸಿದ ಶಿಷ್ಯನೇ ಅವಳ ಪ್ರೀತಿಯಲ್ಲಿ ಬಿದ್ದಂತಿದೆ. ಮಲ್ಲಿಯ ತಿರಸ್ಕಾರವನ್ನೇ ಅವಳ ಒಪ್ಪಿಗೆ ಎಂದು ಜೈದೇವ ಭಾವಿಸಿ, ಪ್ರೇಮಿಗಳಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾನೆ.

PREV
16
ಮಲ್ಲಿಯ ಬಲೆಗೆ ಶಿಷ್ಯ

ಸದ್ಯ ಅಮೃತಧಾರೆ ಸೀರಿಯಲ್​ (Amrutadhaare Serial)ನಲ್ಲಿ ಜೈದೇವ, ಮಲ್ಲಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಲು ಶಿಷ್ಯನನ್ನು ಕಳಿಸಿದ್ದಾನೆ. ಆದರೆ, ಅವನು ನಿಜವಾಗಿಯೂ ಮಲ್ಲಿಯ ಲವ್​ನಲ್ಲಿ ಬಿದ್ದಂತಿದೆ.

26
ಮಲ್ಲಿಗೂ ಶುರುವಾಯ್ತು ಲವ್​

ಆದರೆ, ಹೇಳಿಕೇಳಿ ಅವಳು ಮಲ್ಲಿ. ಈತನ ಲವ್​ ರಿಜೆಕ್ಟ್​ ಮಾಡುತ್ತಿದ್ದಾಳೆ. ಇದಾಗಲೇ ಯುವಕನ ಮೇಲೆ ಅವಳಿಗೆ ಪ್ರೀತಿ ಹುಟ್ಟಿರುವುದು ತಿಳಿಯುತ್ತದೆ. ಆದರೂ ನೇರವಾಗಿ ಅದನ್ನು ಹೇಳಿಕೊಳ್ಳಲು ಆಗುತ್ತಿಲ್ಲ.

36
ಭೂಮಿಕಾಗೆ ಡೌಟ್​

ಆಕೆಯ ಬದಲಾವಣೆಯನ್ನು ಭೂಮಿಕಾ ಗಮನಿಸುತ್ತಿದ್ದಾಳೆ. ಮಲ್ಲಿಗೆ ಯಾರದ್ದೋ ಮೇಲೆ ಲವ್​ ಆಗಿದೆ ಎಂದು ಅವಳಿಗೆ ಡೌಟ್​ ಬರುತ್ತಿದೆ. ಆದರೂ ಅದನ್ನು ತೋರಿಸಿಕೊಂಡಿಲ್ಲ.

46
ಯುವಕನ ಟೆನ್ಷನ್​

ಆದರೆ, ಪದೇ ಪದೇ ಮಲ್ಲಿ ತನ್ನನ್ನು ರಿಜೆಕ್ಟ್​ ಮಾಡುತ್ತಿರುವುದರಿಂದ ಇವನಿಗೆ ಟೆನ್ಷನ್​ ಶುರುವಾಗಿ ಜೈದೇವನ ಬಳಿ ಬಂದು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಾನೆ. ನನ್ನ ಕಾಲ್​ ಅನ್ನು ಪದೇ ಪದೇ ಅವರು ಕಟ್​ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

56
ಲವ್​ ಮಾಡ್ತಿರೋರಿಗೆ ಭರ್ಜರಿ ಟಿಪ್ಸ್​

ಕೊನೆಗೆ, ಅಷ್ಟೇ ಅಲ್ಲ ಬಾಸ್​, ಇನ್ನೊಂದು ಸಲ ಕಾಲ್​ ಮಾಡಿದ್ರೆ ಬಂದು ಬಾರಿಸಿಬಿಡ್ತೀನಿ ಎಂದರು ಎಂದು ಗೋಳು ತೋಡಿಕೊಂಡಿದ್ದಾನೆ. ಆಗ ಜೈದೇವ ಮನಸ್ಸಿನಲ್ಲಿ ಲೋ ಹುಚ್ಚ, ಹುಡುಗಿಯರು ಬಾರಿಸಿಬಿಡ್ತೀನಿ ಎಂದರೆ ಬೀಳ್ತಾ ಇದ್ದಾರೆ ಎಂದೇ ಅರ್ಥ ಎನ್ನುವ ಮೂಲಕ, ಲವ್​ ಮಾಡ್ತಿರೋರಿಗೆ ಭರ್ಜರಿ ಟಿಪ್ಸ್​ ಕೊಟ್ಟಿದ್ದಾನೆ!

66
ಲವರ್ಸ್​ ಖುಷಿ

ನಾನು ತಾಳಿ ಕಟ್ಟಿರೋಳು ಅವಳು. ಅಷ್ಟು ಸುಲಭದಲ್ಲಿ ಬಿದ್ದರೆ ನನಗೂ ಮರ್ಯಾದೆ ಇರಲ್ಲ. ಬಾರಿಸಿಬಿಡ್ತೀನಿ ಎನ್ನೋ ತನಕ ಬಂದಿದ್ದಾಳೆ ಎಂದರೆ ಬೀಳ್ತಾಳೆ ಎಂದು ಅರ್ಥ, ಬೀಳಲಿ ಬೀಳಲಿ ಎಂದು ಅಂದುಕೊಂಡಿದ್ದಾನೆ. ಒಟ್ಟಿನಲ್ಲಿ ತಮ್ಮ ಹುಡುಗಿ ಹೀಗೆ ಹೇಳಿದ್ರೆ ಅವಳು ಲವ್ ಮಾಡ್ತಾ ಇದ್ದಾಳೆ ಅಂತ ಅರ್ಥ ಎಂದು ತಿಳಿದುಕೊಂಡಿರೋ ಲವರ್ಸ್​ ಜೈದೇವನ ಟಿಪ್ಸ್​​ಗೆ ಖುಷಿ ಪಟ್ಟುಕೊಳ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories