24 ದಿನ ಶೂಟಿಂಗ್‌ ಮಾಡಿ 30 ಕೋಟಿ ಗಳಿಸಿದ ಸಿನಿಮಾ ಬಗ್ಗೆ ಹೇಳಿದ ನಿರ್ದೇಶಕ ಎಸ್‌.ನಾರಾಯಣ್

Published : Mar 02, 2026, 12:25 PM IST

2007ರಲ್ಲಿ ಬಿಡುಗಡೆಯಾದ  ಸಿನಿಮಾ ಪ್ರೀತಿಗೆ ಹೊಸ ಭಾಷ್ಯ ಬರೆದಿತ್ತು. ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರವು ಕೇವಲ 24 ದಿನಗಳಲ್ಲಿ ಚಿತ್ರೀಕರಣಗೊಂಡಿತ್ತು ಎಂಬ ಸ್ವಾರಸ್ಯಕರ ವಿಷಯವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.

PREV
15
175ಕ್ಕೂ ಅಧಿಕ ದಿನ ಪ್ರದರ್ಶನ ಕಂಡ ಸಿನಿಮಾ

2007ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾವೊಂದು ಯುವ ಸಮುದಾಯಗಳ ಹೃದಯದಲ್ಲಿ ಪ್ರೀತಿಯ ಸಂಚಲನವನ್ನು ಸೃಷ್ಟಿ ಮಾಡಿತ್ತು. ಈ ಚಿತ್ರದ ಪ್ರಮುಖ ದೃಶ್ಯಗಳನ್ನು ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮರುಸೃಷ್ಟಿ ಮಾಡಲಾಗಿತ್ತು. ಈ ಸಿನಿಮಾ ಚಿತ್ರಮಂದಿರಗಳಲ್ಲಿ 175ಕ್ಕೂ ಅಧಿಕ ದಿನ ಪ್ರದರ್ಶನವಾಗಿತ್ತು.

25
ಪ್ರೀತಿಗೆ ಹೊಸ ಭಾಷೆ

ಹೌದು, ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಚೆಲುವಿನ ಚಿತ್ತಾರ (Cheluvina Chittara) ಸಿನಿಮಾ ಪ್ರೀತಿಗೆ ಹೊಸ ಭಾಷೆಯನ್ನು ಬರೆದಿತ್ತು. ಮಾದೇಶ ಮತ್ತು ಐಶ್ವರ್ಯಾಳ ಪ್ರೇಮಕಥೆ ನೋಡುಗರಲ್ಲಿ ಕಳವಳದ ಜೊತೆ ಹೊಸ ಪ್ರೇಮದ ಚಿಲುಮೆಯನ್ನು ಹುಟ್ಟಿಸಿತ್ತು. ಇಂದಿಗೂ ಈ ಸಿನಿಮಾದ ಹಾಡುಗಳು ಟ್ರೆಂಡಿಂಗ್‌ನಲ್ಲಿರುತ್ತವೆ.

35
24 ದಿನ ಶೂಟಿಂಗ್

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ಸ್ಪರ್ಧಿಗಳಾದ ಊರ್ವಿ ಮತ್ತು ಪ್ರೀತಮ್ ಇಬ್ಬರು ಮಾದೇಶ ಮತ್ತು ಐಶ್ವರ್ಯಾ ಆಗಿ ಕ್ಯೂಟ್ ಆಗಿ ನಟಿಸಿದ್ದರು. ಈ ಇಬ್ಬರು ಮಕ್ಕಳ ಅಭಿನಯ ನೋಡಿದ ಎಸ್.ನಾರಾಯಣ್, ಚೆಲುವಿನ ಚಿತ್ತಾರ ಚಿತ್ರದ ಚಿತ್ರೀಕರಣ ಕೇವಲ 24 ದಿನಗಳಲ್ಲಿ ನಡೆದಿತ್ತು ಎಂಬ ವಿಷಯವನ್ನು ಹಂಚಿಕೊಂಡಿದ್ದರು.

45
ಚೆಲುವಿನ ಚಿತ್ತಾರದ ಆರು ಹಾಡುಗಳು

ಮಾದೇಶ ಮತ್ತು ಐಶ್ವರ್ಯಾ ಪಾತ್ರದಲ್ಲಿ ನಟ ಗಣೇಶ್ ಮತ್ತು ನಟಿ ಅಮೂಲ್ಯ ನಟಿಸಿದ್ದರು. ಮನೋಮೂರ್ತಿ ಅವರ ಸಂಗೀತದ ಆರು ಹಾಡುಗಳು ಇಂದಿಗೂ ವೈರಲ್ ಅಗುತ್ತಿರುತ್ತವೆ. ಚೆಲುವಿನ ಚಿತ್ತಾರ ತಮಿಳಿನ ಕಾದಲ್ ಸಿನಿಮಾದ ರಿಮೇಕ್ ಆಗಿತ್ತು.

ಇದನ್ನೂ ಓದಿ: ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಖಳನಾಯಕಿ

55
ಚೆಲುವಿನ ಚಿತ್ತಾರದ ಕಥೆ ಏನು?

ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಮಾದೇಶನಿಗೂ ಮತ್ತು 8ನೇ ಕ್ಲಾಸ್ ಓದುವ ಹುಡುಗಿ ಐಶ್ವರ್ಯಾಯೂ ಲವ್ ಆಗುತ್ತದೆ. ನಂತರ ಇಬ್ಬರು ಮನೆಯಿಂದ ಓಡಿ ಹೋಗಿ ಬೆಂಗಳೂರಿನಲ್ಲಿ ಮದುವೆ ಆಗುತ್ತಾರೆ. ನಂತರ ಐಶ್ವರ್ಯಾಳ ಪೋಷಕರು, ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಇದರಿಂದ ಮಾದೇಶ ಹುಚ್ಚನಾಗುತ್ತಾನೆ.

ಇದನ್ನೂ ಓದಿ: 52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories