ಬಿಗ್ಬಾಸ್ 12 ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿರುವ ರಿಷಾ ಗೌಡ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಶ್ವಿನಿ ಗೌಡರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ ಅವರು, ತಮ್ಮ ಪ್ರಕಾರ ಟಾಪ್-5 ಸ್ಪರ್ಧಿಗಳು ಯಾರು ಮತ್ತು ಈ ಬಾರಿ ಗಿಲ್ಲಿ ನಟ ವಿನ್ನರ್ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಗ್ಬಾಸ್ 12 (Bigg Boss 12) ಮನೆಯಿಂದ ರಿಷಾ ಗೌಡ ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಇದೀಗ ಬಿಗ್ಬಾಸ್ನಲ್ಲಿರುವ ತಮ್ಮ ಅನುಭವಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ಗುಣಗಳನ್ನೂ ಅವರು ವಿವರಿಸಿದ್ದಾರೆ. ವಿನ್ನರ್ ಹಾಗೂ ಟಾಪ್-5 ಸ್ಪರ್ಧಿಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ.
26
ರಿಷಾ-ಅಶ್ವಿನಿ ಬಾಂಡಿಂಗ್
ಅಷ್ಟಕ್ಕೂ ಬಿಗ್ಬಾಸ್ ಮನೆಯಲ್ಲಿ ರಿಷಾ ಗೌಡ ಮತ್ತು ಅಶ್ವಿನಿ ಗೌಡ (Ashwini Gowda) ಅವರ ಬಾಂಡಿಂಗ್ ತುಂಬಾ ಚೆನ್ನಾಗಿತ್ತು. ಈ ಬಗ್ಗೆ ಮಾತನಾಡಿರುವ ಅವರು, ಅಶ್ವಿನಿ ಗೌಡ ಅವರು ತುಂಬಾ ಸಾಫ್ಟ್ ಪರ್ಸನ್. ತುಂಬಾ ಒಳ್ಳೆಯವರು ಎಂದಿದ್ದಾರೆ.
36
ಅಶ್ವಿನಿ ಗೌಡ ಬಗ್ಗೆ..
ಅಶ್ವಿನಿ ಗೌಡ ಅವರು ನನ್ನನ್ನು ಸದಾ ನೀನು ನನ್ನ ಜ್ಯೂನಿಯರ್ ಇದ್ದಂತೆ. ನನ್ನ ಪ್ರತಿಬಿಂಬ ಇದ್ದಂತೆ ಎಂದು ಹೊಗಳುತ್ತಲೇ ಇದ್ದರು. ಅವರಿಂದ ನಾನು ತುಂಬಾ ಕಲಿತಿದ್ದೇನೆ. ನಾನು ನೋವಿನಲ್ಲಿ ಇದ್ದಾಗ ಅವರು ತುಂಬಾ ಸಾಂತ್ವನ ಮಾಡಿದ್ದಾರೆ. ಬದುಕಿನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ ಎಂದು ರಿಷಾ ಹೇಳಿದ್ದಾರೆ.
ಇದೇ ವೇಳೆ ಟಾಪ್-5 ಸ್ಪರ್ಧಿಗಳು ಯಾರು ಎನ್ನುವ ಬಗ್ಗೆ ರಿಷಾ ಗೌಡ (Bigg Boss Risha Gowda) ಅವರು ಹೇಳಿದ್ದಾರೆ. ಅವರ ಪ್ರಕಾರ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಘು, ಧನುಷ್ ಟಾಪ್-5ನಲ್ಲಿ ಇರಬಹುದು ಎಂದಿದ್ದಾರೆ.
56
ಬಿಗ್ಬಾಸ್ 12 ಗೆಲ್ಲುವವರು ಯಾರು?
ಅದೇ ವೇಳೆ ಈ ಬಾರಿ ಬಿಗ್ಬಾಸ್ ಗೆಲ್ಲುವುದು ಯಾರು ಎನ್ನುವ ಬಗ್ಗೆ ಪ್ರಶ್ನಿಸಿದಾಗ, ಬಹುತೇಕ ಎಲ್ಲಾ ಎಲಿಮಿನೇಟೆಡ್ ಸ್ಪರ್ಧಿಗಳು ಹೇಳಿದಂತೆ ರಿಷಾ ಗೌಡ ಅವರ ಬಾಯಲ್ಲಿಯೂ ಗಿಲ್ಲಿ ನಟ (Bigg Boss 12 winner) ಹೆಸರೇ ಬಂದಿದೆ. ಅವರೇ ಬಹುಶಃ ಗೆಲ್ಲುತ್ತಾರೆ. ಅವರಿಗೆ ಗೆಲ್ಲುವ ಎಲ್ಲಾ ಯೋಗ್ಯತೆಗಳೂ ಇದೆ ಎಂದಿದ್ದಾರೆ.
66
ಗಿಲ್ಲಿ ಬಗ್ಗೆ ರಿಷಾ ಗೌಡ
ಇದೇ ವೇಳೆ ಗಿಲ್ಲಿ ನಟನ ಸ್ವಭಾವದ ಬಗ್ಗೆಯೂ ಹೇಳಿರುವ ರಿಷಾ ಗೌಡ., ಗಿಲ್ಲಿ ತುಂಬಾ ಒಳ್ಳೆಯವ. ಸಖತ್ ಫನ್ ಮಾಡ್ತಾನೆ, ರೇಗಿಸ್ತಾ ಇರ್ತಾನೆ. ಎಲ್ಲರ ಜೊತೆನೂ ಅವನು ಹಾಗೆಯೇ ಇರೋದು. ತುಂಬಾ ಕ್ಯೂಟ್ ಪರ್ಸನ್. ಅವನನ್ನು ಮಿಸ್ ಮಾಡಿಕೊಳ್ತಾ ಇದ್ದೇನೆ ಎಂದಿದ್ದಾರೆ.