ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ಮಾತಿನ ಸಮರ ಮುಂದುವರೆದಿದೆ. ತನ್ನನ್ನು 'ವಂಶದ ಕುಡಿ' ಎಂದು ಕರೆದಿದ್ದ ಗಿಲ್ಲಿ ನಟರನ್ನೇ ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡಿದ್ದಕ್ಕೆ, ಅಶ್ವಿನಿ ಗೌಡ ಗಿಲ್ಲಿಗೆ ಅವರದೇ ರೀತಿಯಲ್ಲಿ ಮಾತನಾಡಿ ಚಮಕ್ ನೀಡಿದ್ದಾರೆ.
ಮಳೆ ನಿಂತ್ರೂ ಮಳೆಹನಿ ನಿಲ್ಲಲ್ಲ ಎಂಬ ಮಾತಿನಂತೆ ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ಟಾಕ್ ವಾರ್ ನಿಲ್ಲೋದೇ ಇಲ್ಲ. ಅವಕಾಶ ಸಿಕ್ಕಾಗೆಲ್ಲಾ ಕಾಲೆಳೆಯೋದನ್ನು ಇಬ್ಬರು ಸ್ಪರ್ಧಿಗಳು ಮಿಸ್ ಮಾಡಿಕೊಳ್ಳುವುದಿಲ್ಲ. ಇದೀಗ ಗಿಮಿಕ್ ಮಾತನಾಡಿ ಗಿಲ್ಲಿ ನಟನಿಗೆ ಚಮಕ್ ನೀಡಿದ್ದಾರೆ.
25
ಬೆಂಬಲ ಮತ್ತು ಮೆಚ್ಚುಗೆ
ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಾನ್ವಿ ನೀಡಿದ ಕಾರಣಗಳನ್ನೇ ಹೇಳಿ ಗಿಲ್ಲಿ ನಟ ಅವರನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡುತ್ತಾರೆ. ರಕ್ಷಿತಾ ಶೆಟ್ಟಿ ಕಾರಣಗಳನ್ನು ನೀಡುವಾಗ ಜಾನ್ವಿ ಚಪ್ಪಾಳೆ ಮೂಲಕ ಬೆಂಬಲ ಮತ್ತು ಮೆಚ್ಚುಗೆಯನ್ನು ಸೂಚಿಸುತ್ತಾರೆ. ಗಿಲ್ಲಿ ವಿರುದ್ಧ ರಕ್ಷಿತಾ ತಿರುಗಿ ಬಿದ್ದಿದ್ದಕ್ಕೆ ಅಶ್ವಿನಿ ಗೌಡ ಮತ್ತು ಜಾನ್ವಿ ಮುಖದಲ್ಲಿ ಸಂತೋಷ ಕಾಣಿಸುತ್ತದೆ.
35
ವಂಶದ ಕುಡಿಯಿಂದಲೇ ನಾಮಿನೇಟ್
ಎರಡು ವಾರದ ಹಿಂದೆ ರಕ್ಷಿತಾ ಶೆಟ್ಟಿಯವರನ್ನು ತನ್ನ ವಂಶದ ಕುಡಿ ಅಂತಾ ಗಿಲ್ಲಿ ಕರೆದುಕೊಂಡಿದ್ದರು. ವಂಶದ ಕುಡಿಯಿಂದಲೇ ನಾಮಿನೇಟ್ ಆಗಿರುವ ಗಿಲ್ಲಿ ನಟ ಅವರಿಗೆ ಅಶ್ವಿನಿ ಗೌಡ ಚಮಕ್ ನೀಡುವ ಕೆಲಸವನ್ನು ಮಾಡಿದ್ದಾರೆ. ಅಶ್ವಿನಿ ಗೌಡ ಮಾತುಗಳು ಕೇಳಿಸಿದ್ರೂ ಕೇಳಿಸದಂತೆಯೇ ಇರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ನಾಮಿನೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಗಿಲ್ಲಿ ಮುಂದೆಯೇ ರಕ್ಷಿತಾ ಅವರನ್ನು ಮನೆಯೊಳಗೆ ಕರೆದುಕೊಂಡು ಬಂದ ಅಶ್ವಿನಿ ಗೌಡ, ಬೇಗ ಬಾ ಕಂದ, ಬೇಗ ಬಾ, ಊಟ ಮಾಡೋಣ ಎಂದು ಕರೆಯುತ್ತಾರೆ. ಇಷ್ಟು ದಿನ ರಕ್ಷಿತಾ ಶೆಟ್ಟಿಯವರನ್ನು ಗಿಲ್ಲಿ ನಟ ತನ್ನ ಕಂದ ಎಂದು ಕರೆಯುತ್ತಿದ್ರು. ಇದೀಗ ಅದೇ ರೀತಿಯ ಮಾತುಗಳನ್ನಾಡುವ ಮೂಲಕ ಗಿಲ್ಲಿಗೆ ಚಮಕ್ ನೀಡಿದ್ದಾರೆ ಅಶ್ವಿನಿ ಗೌಡ.
ನಾಮಿನೇಷನ್ ಪ್ರಕ್ರಿಯೆಗೂ ಮೊದಲು ಅಶ್ವಿನಿ ಗೌಡ ಇತರೆ ಸ್ಪರ್ಧಿಗಳೊಂದಿಗೆ ಸೊಪ್ಪು ಬಿಡಿಸುತ್ತಿರುತ್ತಾರೆ. ಇದನ್ನು ನೋಡಿದ ಗಿಲ್ಲಿ ನಟ, ಏನ್ರಿ ಇದೇನಾ ನಿಮ್ಮ 2.ಓ, ಸೊಪ್ಪು ಬಿಡಿಸೋದು, ಅಡುಗೆ ಮಾಡೋದು, ಪೂಜೆ ಮಾಡೋದು ಅಷ್ಟೆನಾ ಎಂದು ವ್ಯಂಗ್ಯ ಮಾಡ್ತಾರೆ. ನನ್ನನ್ನು ಕೆಣಕೋದು ಗಿಲ್ಲಿ ಕೆಲಸ. ಕೋಪ ಬರ್ತಿದೆ ಎಂದು ಅಶ್ವಿನಿ ಗೌಡ ಹೇಳುತ್ತಾರೆ.