BBK 12: ಜಾನ್ವಿ-ಅಶ್ವಿನಿ ಗೌಡ ಸ್ನೇಹದ ಬಗ್ಗೆ ಇದೆಂಥಾ ಮಾತು? ಧ್ರುವಂತ್ ಸ್ಫೋಟಕ ವಿಶ್ಲೇಷಣೆ!

Published : Nov 25, 2025, 09:42 AM IST

ಬಿಗ್‌ಬಾಸ್ ಮನೆಯಲ್ಲಿ, ಗಾರ್ಡನ್ ಏರಿಯಾದಲ್ಲಿ ಗಿಲ್ಲಿ ನಟನ ಬಳಿ ಧ್ರುವಂತ್ ಅವರು ಜಾನ್ವಿ ಮತ್ತು ಅಶ್ವಿನಿ ಗೌಡರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಧ್ರುವಂತ, 'ದೊಡ್ಡವನು' ಮತ್ತು 'ಚಿಕ್ಕವನು' ಎಂಬ ಕೋಡ್ ವರ್ಡ್ ಬಳಸಿ ಗಿಲ್ಲಿ ಜೊತೆ ಚರ್ಚಿಸಿದ್ದಾರೆ.

PREV
15
ಧ್ರುವಂತ್ ಅಭಿಪ್ರಾಯ

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಎದುರಾಳಿ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿರುತ್ತಾರೆ. ಈ ಟೀಕೆ ಟಿಪ್ಪಣಿಗಳು ಆಟ ಮತ್ತು ಬಿಗ್‌ಬಾಸ್ ಮನೆಗೆ ಮಾತ್ರ ಸೀಮಿತವಾಗಿದ್ದರೆ ಚೆನ್ನಾಗಿ ಕಾಣಿಸುತ್ತದೆ. ಈ ಟೀಕೆ ಟಿಪ್ಪಣಿ ವೈಯಕ್ತಿಕ ವಿಷಯಗಳಿಗೆ ಹೋದಾಗ ಬಿಗ್‌ಬಾಸ್ ಮನೆ ಅನ್ನೋದು ರಣರಂಗವಾಗಿ ಬದಲಾಗುತ್ತದೆ. ಇದೀಗ ಇಂತಹವುದು ಒಂದು ಟಿಪ್ಪಣಿಯನ್ನು ಜಾನ್ವಿ ಬಗ್ಗೆ ಧ್ರುವಂತ್ ಮಾಡಿದ್ದಾರೆ.

25
ಜಾನ್ವಿ ಮತ್ತು ಅಶ್ವಿನಿ ಗೌಡ ಬಾಂಧವ್ಯ

ಬಿಗ್‌ಬಾಸ್ ಮನೆಯೊಳಗೆ ಒಂಟಿಯಾಗಿ ಬಂದ್ರೂ ಜಾನ್ವಿ ಮತ್ತು ಅಶ್ವಿನಿ ಗೌಡ ಜಂಟಿಯಾಗಿಯೇ ಆಟವಾಡುತ್ತಿದ್ದಾರೆ ಅನ್ನೋದು ಹಲವರ ಅಭಿಪ್ರಾಯವಾಗದೆ. ಇಬ್ಬರ ನಡುವಿನ ಬಾಂಧವ್ಯದ ಬಗ್ಗೆ ಧ್ರುವಂತ್ ಮಾತನಾಡಿದ್ದಾರೆ. ಗಿಲ್ಲಿ ಮುಂದೆ ಯಾಕೆ ಅಶ್ವಿನಿ ಗೌಡ ಪರವಾಗಿ ಜಾನ್ವಿ ಮಾತನಾಡ್ತಾರೆ ಅಂತಾ ತಮ್ಮದೇ ಆದ ಒಂದು ಅಭಿಪ್ರಾಯವನ್ನು ಧ್ರುವಂತ್ ಹಂಚಿಕೊಂಡಿದ್ದಾರೆ.

35
ಕೋಡ್ ವರ್ಡ್ ಬಳಸಿ ಮಾತು

ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದ ಧ್ರುವಂತ್ ಮತ್ತು ಗಿಲ್ಲಿ ನಟ ಮಾತನಾಡುತ್ತಾರೆ. ಇದೇ ವೇಳೆ ಅಲ್ಲಿಗೆ ಅಶ್ವಿನಿ ಗೌಡ ಬರುತ್ತಿದ್ದಂತೆ ಇಬ್ಬರು ಕೋಡ್ ವರ್ಡ್ ಬಳಸಿ ಮಾತನಾಡಲು ಆರಂಭಿಸುತ್ತಾರೆ. ಇಬ್ಬರ ಹೆಸರು ಹೇಳದೇ ಅಶ್ವಿನಿ ಅವರನ್ನು 'ದೊಡ್ಡವನು' ಮತ್ತು ಜಾನ್ವಿ ಅವರನ್ನು'ಚಿಕ್ಕವನು' ಎಂದು ಕರೆಯುತ್ತಾ ಗಿಲ್ಲಿ ಜೊತೆ ಧ್ರುವಂತ್ ಮಾತನಾಡುತ್ತಾರೆ. 

ಇಬ್ಬರು ತಮ್ಮ ಬಗ್ಗೆಯೇ ಮಾತಾಡುತ್ತಿದ್ದಾರೆ ಅನ್ನೋದು ಅಶ್ವಿನಿ ಗೌಡ ಅವರ ಗಮನಕ್ಕೆ ಬರುತ್ತದೆ. ಈ ಕುರಿತು ಜಾನ್ವಿ ಜೊತೆಯಲ್ಲಿಯೂ ಚರ್ಚಿಸುತ್ತಾರೆ.

45
ದ್ರುವಂತ್ ಹೇಳಿದ್ದೇನು?

ಜಾನ್ವಿ ಅವರು ತುಂಬಾ ಜಾಣೆ. ಅಶ್ವಿನಿ ಗೌಡ ಅವರು ಆರಂಭದಲ್ಲಿಯೇ ಸಿಕ್ಕಾಪಟ್ಟೆ ರಾಯಲ್ ಬಿಲ್ಡಪ್ ಕೊಟ್ಟಿದ್ದಾರೆ. ನಾನು ದೊಡ್ಡ ಹೋರಾಟಗಾರ್ತಿ, ಚಿನ್ನದ ಸ್ಪೂನ್, ತಂದೆ ಸಿಕ್ಕಾಪಟ್ಟೆ ಹಣ ಮಾಡಿಟ್ಟಿದ್ದೀರಾ. ನನಗೆ ಕಷ್ಟ ಅಂದ್ರೆ ಗೊತ್ತಿಲ್ಲ ಅಂತ ಅಶ್ವಿನಿ ಮೇಡಂ ಬಿಲ್ಡಪ್ ಕೊಟ್ಟಿದ್ದಾರೆ. ಬಿಗ್‌ಬಾಸ್ ಇನ್ನು ಒಂದು ತಿಂಗಳು ಇರುತ್ತೆ. ಇಲ್ಲಿಂದ ಹೋದ್ಮೇಲೆ ಹೊರಗೆ ಒಬ್ಬರು ಬಿಗ್‌ಬಾಸ್ ಬೇಕು ಅಲ್ಲವಾ? ಹಾಗಾಗಿ ಅಶ್ವಿನಿ ಗೌಡ ಅವರ ಸ್ನೇಹ ಉಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BBK 12 ನಾಮಿನೇಷನ್: ರಣಕಹಳೆ ಮೊಳಗಿಸಿದ ಧ್ರುವಂತ್, ಬೆಕ್ಕಿನ ಹೆಜ್ಜೆ ಇಟ್ಟ ರಕ್ಷಿತಾ ಶೆಟ್ಟಿ

55
ನಾವು ದಡ್ಡರು

ಜಾನ್ವಿ ಅವರ ಯೋಚನೆ ಮನೆಯಿಂದಾಚೆಗೆ ಹೋಗ್ತಿದೆ. ನಿಜವಾಗಲೂ ಈ ಮನೆಯಲ್ಲಿ ನಾವು ದಡ್ಡರು ಎಂದು ಧ್ರುವಂತ್ ಒಪ್ಪಿಕೊಂಡಿದ್ದಾರೆ. ಈ ವೇಳೆ ಇವರಿಬ್ಬರ ಸಮೀಪ ಅಶ್ವಿನಿ ಗೌಡ ಬರುತ್ತಿದ್ದಂತೆ ಮಾತಿನ ವೈಖರಿಯನ್ನು ಧ್ರುವಂತ್ ಬದಲಿಸಿದರು. ಈ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡ ಗಿಲ್ಲಿ ನಟ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲಿಲ್ಲ.

ಇದನ್ನೂ ಓದಿ: Bigg Boss Kannada 12 ಮನೆಗೆ ಬಂದ ಐವರು ಮಾಜಿ ಸ್ಪರ್ಧಿಗಳು:ಯಾರಿಗೆಲ್ಲಾ ಕಾದಿದೆ ಶಾಕ್?

Read more Photos on
click me!

Recommended Stories