ಹೆಸರು ಮಾತ್ರ ಬೇರೆ ಬೇರೆ ಆದ್ರೆ ಎಲ್ಲಾ ರಿಯಾಲಿಟಿ ಶೋಗಳಲ್ಲಿ ಮಾಡೋದು ಡ್ಯಾನ್ಸ್ ಮಾತ್ರ… ಯಾಕೀಗೆ?

Published : Sep 01, 2025, 12:00 PM IST

ಕನ್ನಡ ಕಿರುತೆರೆಯಲ್ಲಿ ಬೇರೆ ಬೇರೆ ರೀತಿಯ ರಿಯಾಲಿಟೀ ಶೋಗಳು ಬರುತ್ತಿವೆ, ಆದರೆ ನಿಜವಾದ ಕಾನ್ಸೆಪ್ಟ್ ಬೇರೆ ಇದ್ದರೂ ಸಹ ಕೊನೆಗೆ ಎಲ್ಲಾ ಶೋಗಳು ಬಂದು ನಿಲ್ಲೋದು ಡ್ಯಾನ್ಸ್ ಗೆ ಯಾಕೆ ಹೀಗೆ?

PREV
17

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗೇನು (reality shows) ಕಮ್ಮಿ ಇಲ್ಲ. ಪ್ರತಿಯೊಂದು ವಾಹಿನಿಯಲ್ಲೂ ಒಂದು -ಎರಡರಂತೆ ಹತ್ತು ಹಲವು ರಿಯಾಲಿಟಿ ಶೋಗಳು ಬರುತ್ತಿವೆ. ಪ್ರತಿಯೊಂದು ಶೋ ಕೂಡ ಮನರಂಜನೆ ನೀಡೋದರಲ್ಲಿ ತುಂಬಾನೆ ಮುಂದಿದೆ.

27

ಈ ಹಿಂದೆ ಅಂದರೆ ಹಲವು ವರ್ಷಗಳ ಹಿಂದೆ ಮುಖ್ಯವಾಗಿ ಇದ್ದುದೇ ಡ್ಯಾನ್ಸ್ ಮತ್ತು ಸಿಂಗಿಂಗ್ ರಿಯಾಲಿಟಿ ಶೋಗಳು. ಪ್ರತಿಯೊಂದು ಚಾನೆಲ್ ಗಳಲ್ಲೂ ಬೇರೆ ಬೇರೆ ಡ್ಯಾನ್ಸ್, ಹಾಡಿನ ಶೋಗಳು ನಡೆಯುತ್ತಿದ್ದವು. ಆದರೆ ಸಮಯ ಬದಲಾದಂತೆ, ಬೇರೆ ಬೇರೆ ರೀತಿಯ ಶೋಗಳು ಸಹ ಜನಮನ ಗೆಲ್ಲುತ್ತಾ ಬಂದಿದೆ.

37

ಅದರಲ್ಲೂ ಕಾಮಿಡಿ ಶೋಗಳು (comedy show), ಕಪಲ್ಸ್ ಶೋಗಳು ಹೆಚ್ಚಿನ ಗಮನ ಸೆಳೆಯುತ್ತಿವೆ. ರಾಜಾ ರಾಣಿ, ಜೋಡಿ ನಂ 1, ಈವಾಗ ನಾವು ನಮ್ಮವರು ಎನ್ನುವ ಫ್ಯಾಮಿಲಿ ಶೋ ಕೂಡ ಆರಂಭವಾಗಿದೆ. ಆದರೆ ಈ ಎಲ್ಲಾ ರಿಯಾಲಿಟಿ ಶೋಗಳ ಜನರನ್ನು ಸೆಳೆಯಲು ಮಾಡೋದು ಡ್ಯಾನ್ಸ್ ಅನ್ನೋದು ಮಾತ್ರ ಸಾಮಾನ್ಯ ವಿಷಯವಾಗಿದೆ.

47

ನೀವೆ ನೋಡಿ, ಹಿಂದೆ ಸರಿಗಮಪದಂತಹ  (Saregamapa)ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಹಾಡುಗಳೇ ಪ್ರಮುಖ ಪಾತ್ರ ವಹಿಸುತ್ತಿತ್ತು, ಆದರೆ ಇತ್ತೀಚೆಗೆ ಡ್ಯಾನ್ಸ್ ಕೂಡ ಅದರಲ್ಲಿ ಒಂದು ಮುಖ್ಯ ಭಾಗವಾಗಿದೆ. ಒಂದು ಎಪಿಸೋಡ್ ಪರ್ಫಾರ್ಮೆನ್ಸ್ ರೌಂಡ್ ಅಂತಾನೆ ನಡೆಯುತ್ತೆ, ಮತ್ತೊಂದು ರೌಂಡ್ ಫ್ಯಾಮಿಲಿ ರೌಂಡ್ ಅಂತ ನಡೆದು, ಅಲ್ಲೂ ಕುಟುಂಬದ ಜೊತೆ ಡ್ಯಾನ್ಸ್ ಮಾಡ್ತಾರೆ.

57

ರಾಜಾ ರಾಣಿ (Raja Rani) ಕಪಲ್ಸ್ ರಿಯಾಲಿಟಿ ಶೋನಲ್ಲಿ ಆರಂಭದಲ್ಲಿ ವಿವಿಧ ರೀತಿಯ ಕಾನ್ಸೆಪ್ಟ್ ನಲ್ಲಿ ಬರುತ್ತಿತ್ತು, ಆದರೆ ಕಳೆದ ಬಾರಿ ನಡೆದ ರಾಜಾ ರಾಣಿ ಶೋನಲ್ಲಿ ಡ್ಯಾನ್ಸ್ ನದ್ದೇ ಕಾರುಬಾರಾಗಿತ್ತು. ಆರಂಭದಿಂದ ಹಿಡಿದು, ಕೊನೆಯವರೆಗೆ ಡ್ಯಾನ್ಸ್ ಮಾಡುತ್ತಲೇಮುಗಿಸಿಬಿಟ್ಟರು. ಆವಾಗ ಇದು ಡ್ಯಾನ್ಸ್ ಶೋನ ಅಥವಾ ಕಪಲ್ ಶೋನ ಅನ್ನೋದೇ ನೋಡುಗರಿಗೆ ಕನ್ ಫ್ಯೂಸ್ ಆಗಿತ್ತು.

67

ಇದೀಗ ನಾವು ನಮ್ಮವರು ಎನ್ನುವ ಶೋ ಬಂದಿದೆ. ಆರಂಭದಲ್ಲಿ ಇದು ಸಂಬಂಧಗಳನ್ನು ಬೆಸೆಯುವ ರಿಯಾಲಿಟಿ ಶೋಗಳು. ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಇದರಲ್ಲೂ ಡ್ಯಾನ್ಸ್. ಹಾಗಿದ್ರೆ ಹಳೆಯ ಸಂಬಂಧಗಳನ್ನು ಮತ್ತೆ ನೆನಪಿಗೆ ತರುವ ಕತೆಹ್ ಏನಾಯ್ತು?

77

ಎಲ್ಲಾ ರಿಯಾಲಿಟಿ ಶೋಗಳು ಬೇರೆ ಬೇರೆ ಹೆಸರುಗಳನ್ನಿಟ್ಟುಕೊಂಡು ಕೊನೆಗೆ ಡ್ಯಾನ್ಸನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡು, ಅದನ್ನೆ ತೋರಿಸುತ್ತಿದ್ದರೆ, ಬೇರೆ ಬೇರೆ ಶೋಗಳನ್ನು ಮಾಡುವ ಅವಶ್ಯಕತೆ ಏನಿದೆ? ಡ್ಯಾನ್ಸ್ ರಿಯಾಲಿಟಿ ಶೋನೆ ಮಾಡಬಹುದು ಅಲ್ವಾ? ಎಂದು ಜನ ಕೇಳುತ್ತಿದ್ದಾರೆ? ನಿಮಗೂ ಹಾಗೆ ಅನಿಸುತ್ತಿದೆಯೇ?

Read more Photos on
click me!

Recommended Stories