ದೃಷ್ಟಿಬೊಟ್ಟು ಸೀರಿಯಲ್ ನಟ ವಿಜಯ್ ಸೂರ್ಯ ಮನೆಯಲ್ಲಿ ಪ್ರತಿವರ್ಷದಿಂದ ಈ ವರ್ಷವೂ ಅದ್ಧೂರಿಯಾಗಿ ಈ ಶುಕ್ರವಾರ ಲಕ್ಷ್ಮೀ ಪೂಜೆ ನಡೆಸಿದ್ದು, ಕಿರುತೆರೆಯ ಮಹಾಲಕ್ಷ್ಮಿಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಅಗ್ನಿ ಸಾಕ್ಷಿಯಲ್ಲಿ ಡಿಂಪಲ್ ಹುಡುಗ, ಚಾಕಲೇಟ್ ಬಾಯ್ ಸಿದ್ಧಾರ್ಥ್ ಆಗಿ ಗಮನ ಸೆಳೆದ ನಟ ವಿಜಯ್ ಸೂರ್ಯ, ಇದೀಗ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ದತ್ತ ಭಾಯ್ ಆಗಿ ಮಿಂಚುತ್ತಿದ್ದಾರೆ. ನಟನೆಯಲ್ಲಿ ಬ್ಯುಸಿಯಾಗಿರುವ ವಿಜಯ್ ಅದರ ಜೊತೆಗೆ ತಮ್ಮ ಶಾಸ್ತ್ರ, ಸಂಪ್ರದಾಯ ಮತ್ತು ಹಬ್ಬಗಳನ್ನು ಮರೆತಿಲ್ಲ.
27
ವಿಜಯ್ ಸೂರ್ಯ ಮನೆಯಲ್ಲಿ ಪ್ರತಿವರ್ಷ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಅದರಂತೆ ಈ ವರ್ಷ ಕೂಡ ಅದ್ಧೂರಿಯಾಗಿ ಲಕ್ಷ್ಮೀ ಪೂಜೆ ಇತ್ತೀಚೆಗೆ ನಡೆದಿತ್ತು, ಕಿರುತೆರೆಯ ಮಹಾಲಕ್ಷ್ಮೀಯರು ಸೇರಿ, ದೃಷ್ಟಿ ಬೊಟ್ಟು ತಂಡದ ಎಲ್ಲಾ ನಟ-ನಟಿಯರು ಕೂಡ ವಿಜಯ್ ಮನೆಯಲ್ಲಿ ನಡೆದ ಹಬ್ಬದಲ್ಲಿ ಭಾಗಿಯಾಗಿದ್ದರು.
37
ಹಬ್ಬದ ಸಂಭ್ರಮದಲ್ಲಿ ಕಿರುತೆರೆಯ ನಟಿಯರಾದ ಹಿರಿಯ ನಟಿ ವಾಣಿಶ್ರೀ, ಅನುಪಮಾ ಗೌಡ, ಕೃಷಿ ತಾಪಂಡ, ಇಶಿತಾ ವರ್ಷ, ಮುರುಗಾ, ಹಾಗೂ ದೃಷ್ಟಿ ಬೊಟ್ಟು ಧಾರಾವಾಹಿಯ ನಟ-ನಟಿಯರಾದ ಅರ್ಪಿತಾ ಮೋಹಿತೆ, ತನ್ಮಯಾ ಕಷ್ಯಪಾ, ಮೋಕ್ಷಿತಾ ವಷಿಷ್ಟ, ಧನ್ಯಾ ಪಾಟೀಲ್, ಗೌತಮಿ ಜಯರಾಮ್, ಅಮೃತಾ ಮೂರ್ತಿ ಭಾಗವಹಿಸಿದ್ದರು.
ಹಿರಿಯ ನಟಿ ವಾಣಿಶ್ರೀ ಅವರು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಬ್ಬದ ಸಂಭ್ರಮದ ಫೋಟೊಗಳನ್ನು ಸೆರೆ ಹಿಡಿದು, ಶೇರ್ ಮಾಡಿದ್ದಾರೆ. ಹಬ್ಬದಲ್ಲಿ ಭಾಗಿಯಾದ ನಟಿಯರ ಜೊತೆಗಿನ ಫೋಟೊ, ಬಳೆ ಶಾಸ್ತ್ರದ ಫೋಟೊ ಹಾಗೂ ಇತರ ಸಂಭ್ರಮದ ಫೋಟೊಗಳನ್ನು ಹಂಚಿಕೊಂಡು ಅದರ ಜೊತೆಗೆ ನಟ ವಿಜಯ್ ಸೂರ್ಯಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
57
ಕುಟುಂಬ ಎಂದರೆ ಒಂದು ಮನೆಯನ್ನು ಮೀರಿ ವಿಸ್ತರಿಸಬಹುದು. ಅದು ಯಾವಾಗಲೂ ನಾವು ನಮ್ಮ ಮನೆಗೆ ಬರುತ್ತಿದ್ದೇವೆ ಎನ್ನುವ ಭಾವನೆಯನ್ನು ಸಹ ನೀಡುತ್ತದೆ. ವಿಜಯ್ ನೀವು ಲಕ್ಷ್ಮಿ ಪೂಜೆಗೆ ಆಹ್ವಾನಿಸಿದಾಗ ನಮ್ಮದೇ ಕುಟುಂಬ ಎಂದೇ ಅನಿಸಿತು.
67
ನಾನು ಈ ಉದ್ಯಮದಲ್ಲಿ ಸಂಪರ್ಕದಲ್ಲಿರೋದು ಬಹಳ ಕಡಿಮೆ ಜನರೊಂದಿಗೆ. ನಾವು ದಶಕದಿಂದ ಒಬ್ಬರಿಗೊಬ್ಬರು ಪರಿಚಿತರು. ನೀವು ನನಗೆ ತಿಳಿದಿರುವ ಅತ್ಯಂತ ಅದ್ಭುತ ಮನುಷ್ಯ. ತುಂಬಾ ವೃತ್ತಿಪರ, ಸಮಯಪ್ರಜ್ಞೆ, ಪ್ರತಿಭಾನ್ವಿತ. ನಿಮ್ಮ ಭವಿಷ್ಯಕ್ಕೆ ನನ್ನ ಎಲ್ಲಾ ಶುಭಾಶಯಗಳು. ಆದರೆ ಇನ್ನೂ ಮುಂದೆ ನಿಮ್ಮ ತಾಯಿಯನ್ನು ಪ್ರೀತಿಸುತ್ತೇನೆ. ಈ ಎಲ್ಲಾ ಮೌಲ್ಯಗಳನ್ನು ನಿಮಗೆ ನೀಡಿದ್ದಕ್ಕಾಗಿ ಮತ್ತು ನಿಮಗೆ ರಕ್ಷಣೆಯಾಗಿರುವುದಕ್ಕೆ. ಥ್ಯಾಂಕ್ಯೂ ಎಂದು ವಾಣಿಶ್ರೀ ಬರೆದುಕೊಂಡಿದ್ದಾರೆ.
77
ವರಮಹಾಲಕ್ಷ್ಮೀ ಪೂಜೆಯೂ ಕಳೆದು ಹಲವು ದಿನಗಳೇ ಆಗಿದೆ. ಆದರೆ ವಿಜಯ್ ಸೂರ್ಯ ಮನೆಯಲ್ಲಿ ಯಾವಾಗಲೂ ಅದನ್ನು ಬೇರೆ ದಿನದಲ್ಲಿಯೇ ಆಚರಿಸುತ್ತಾರೆ. ಜೊತೆಗೆ ಕನ್ನಡ ಕಿರುತೆರೆಯ ಎಲ್ಲಾ ತಾರೆಯರನ್ನು, ತಾವು ನಟಿಸುತ್ತಿರುವ ಸೀರಿಯಲ್ ತಂಡವನ್ನು ಸಹ ಆಹ್ವಾನಿಸಿ ಸತ್ಕರಿಸುತ್ತಾರೆ. ಕಳೆದ ವರ್ಷವೂ ಬಹಳ ಸಂಭ್ರಮದಿಂದ ಹಬ್ಬ ನಡೆದಿತ್ತು.