Kannada ಗೊತ್ತಿದ್ದು ಗೊತ್ತಿಲ್ಲ ಎನ್ನುವ Rashmikaಗಿಂತ, ಕಷ್ಟಪಟ್ಟು ಕನ್ನಡ ಕಲಿಯುತ್ತಿರೋ ರಕ್ಷಿತಾನೆ ಬೆಸ್ಟ್ !

Published : Nov 04, 2025, 11:45 AM IST

ಬಿಗ್ ಬಾಸ್ ಶುರುವಾದ ಮೇಲೆ ಟ್ರೋಲ್ ಪೇಜ್ ಗಳ ಹವಾ ಕೂಡ ಜೋರಾಗಿಯೇ ಇದೆ. ಇದೀಗ ರಕ್ಷಿತಾ ಶೆಟ್ಟಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು, ಕನ್ನಡ ಗೊತ್ತಿಲ್ಲದಿದ್ದರೂ ಕನ್ನಡ ಕಲಿತು ಮಾತನಾಡುವ ರಕ್ಷಿತಾರನ್ನು, ರಶ್ಮಿಕಾಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

PREV
16
ಬಿಗ್ ಬಾಸ್ ಕನ್ನಡ

ಕನ್ನಡ ಬಿಗ್ ಬಾಸ್ ಸೀಸನ್ 12  (Bigg Boss Season 12) ಶುರುವಾದ ಮೇಲೆ ಸೋಶಿಯಲ್ ಮಿಡಿಯಾಗಳಲ್ಲಿ ಟ್ರೋಲ್ ಪೇಜ್ ಗಳ ಹವಾ ಜೋರಾಗಿಯೇ ಇದೆ. ಎಲ್ಲಾ ಪೇಜ್ ಗಳಲ್ಲಿ ಬಿಗ್ ಬಾಸ್ ಸ್ಪರ್ಧಿಗಳದ್ದೇ ಮಾತು. ಅದರಲ್ಲೂ ರಕ್ಷಿತಾ ಪರ ಬ್ಯಾಟ್ ಬೀಸೋರೆ ಹೆಚ್ಚು. ಇದೀಗ ರಕ್ಷಿತಾ ಶೆಟ್ಟಿಯನ್ನು ರಶ್ಮಿಕಾ ಮಂದಣ್ಣಗೆ ಹೋಲಿಕೆ ಮಾಡಿದ್ದಾರೆ.

26
ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಾಗ ಎಷ್ಟೆಲ್ಲಾ ನೆಗೆಟಿವ್ ಕಾಮೆಂಟ್ ಗಳು ಹುಟ್ಟಿಕೊಂಡಿದ್ದವೋ, ದಿನ ಕಳೆದಂತೆ ರಕ್ಷಿತಾ ಶೆಟ್ಟಿಗೆ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಾ ಹೋಯಿತು. ಹುಟ್ಟು ಬೆಳೆದದ್ದು ಮುಂಬೈನಲ್ಲಾದರೂ, ಕನ್ನಡ ಕಲಿಯುವ ಅವರ ಶ್ರಮವನ್ನು ಜನ ಮೆಚ್ಚಿಕೊಂಡರು.

36
ಅರ್ಥಮಾಡಿಕೊಂಡು ಕನ್ನಡ ಕಲಿಯುವ ಜಾಣೆ

ರಕ್ಷಿತಾ ಮಾತೃ ಭಾಷೆ ತುಳು, ಆದರೆ ಕರ್ನಾಟಕದಲ್ಲಿ ಇರೋದರಿಂದ ಕನ್ನಡದ ಮೇಲಿನ ಒಲವಿನಿಂದಾಗಿ ರಕ್ಷಿತಾ ಕನ್ನಡದಲ್ಲಿ ವ್ಲೋಗ್ ಮಾಡಲು ಶುರು ಮಾಡಿ, ಇದೀಗ ಬಿಗ್ ಬಾಸ್ ಕನ್ನಡಕ್ಕೂ ಎಂಟ್ರಿ ಕೊಟ್ಟು, ಅಲ್ಲೂ ಕನ್ನಡವನ್ನು ಮುದ್ದಾಗಿ ಮಾತನಾಡುವ ಮೂಲಕ ತನ್ನ ದೇಹದಲ್ಲಿ ಕನ್ನಡದ ರಕ್ತವೂ ಹರಿಯುತ್ತಿದೆ ಅನ್ನೋದನ್ನು ತೋರಿಸಿದ್ದಾರೆ.

46
ರಶ್ಮಿಕಾ ಮಂದಣ್ಣಗೆ ಹೋಲಿಕೆ

ಇದೀಗ ಸೋಶಿಯಲ್ ಮೀಡಿಯಾ ಪೇಜ್ ಗಳು ರಕ್ಷಿತಾ ಶೆಟ್ಟಿಯನ್ನು ರಶ್ಮಿಕಾ ಮಂದಣ್ಣ ಜೊತೆ ಹೋಲಿಕೆ ಮಾಡಿ, ಕನ್ನಡ ಮಾತನಾಡುವ ವಿಷಯವಾಗಿ ಟ್ರೋಲ್ ಮಾಡುತ್ತಿದೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾ ಪೇಜ್ ಗಳು ಹೇಳುತ್ತಿರೋದು ಏನು ನೋಡಿ.

56
ಕನ್ನಡ ಗೊತ್ತಿದ್ದೂ, ಗೊತ್ತಿಲ್ಲ ಎನ್ನುವ ರಶ್ಮಿಕಾ

ಕನ್ನಡ ಗೊತ್ತಿದ್ದೂ, ಗೊತ್ತಿಲ್ಲ ಎನ್ನುವ ರಶ್ಮಿಕಾ ಮಂದಣ್ಣಗಿಂತ, ಶ್ರಮ ಹಾಕಿ ಕನ್ನಡ ಕಲಿತು ಮಾತನಾಡುವ ರಕ್ಷಿತಾ ಶೆಟ್ಟಿನೇ ವಾಸಿ ಎನ್ನುತ್ತಾ ರಕ್ಷಿತಾ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ ಜನರು.

66
ರಶ್ಮಿಕಾಗೆ ಕನ್ನಡ ಬರಲ್ವಾ?

ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಿಂದಲೂ ನಟಿಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ಪರಭಾಷೆಗೆ ಹೋದ ಮೇಲಂತೂ ಕನ್ನಡ ಗೊತ್ತಿರದ ರೀತಿಯಲ್ಲಿ ಮಾತನಾಡಿದ್ದರು. ಹಾಗಾಗಿಯೇ ರಶ್ಮಿಕಾ ವಿರುದ್ಧ ಕನ್ನಡಿಗರು ಕಿಡಿ ಕಾರಿದ್ದರು.

Read more Photos on
click me!

Recommended Stories