Bigg Boss: ಅಶ್ವಿನಿ ಗೌಡಗೆ ರಕ್ಷಿತಾ ಶೆಟ್ಟಿ ಚಪ್ಪಲಿ ತೋರಿಸಿದ್ರಾ? ಪ್ರತ್ಯಕ್ಷದರ್ಶಿ ಮಲ್ಲಮ್ಮ ಕಂಡ ಸತ್ಯವೇನು?

Published : Nov 04, 2025, 11:24 AM IST

BB Kannada 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಜಾಹ್ನವಿ ಹಾಗೂ ರಕ್ಷಿತಾಗೆ ಅಶ್ವಿನಿ ಗೌಡ ಕಂಡರೆ ಆಗಿ ಬರೋದಿಲ್ಲ. ರಕ್ಷಿತಾ ಶೆಟ್ಟಿ ನನಗೆ ಚಪ್ಪಲಿ ತೋರಿಸಿದರು ಎಂದು ಅಶ್ವಿನಿ ಗೌಡ ಸಾಕಷ್ಟು ಬಾರಿ ಹೇಳಿದ್ದಾರೆ. ಈ ಬಗ್ಗೆ ಮಲ್ಲಮ್ಮ, ಧನುಷ್‌ ಪ್ರತಿಕ್ರಿಯೆ ನೀಡಿದ್ದಾರೆ.

PREV
16
ರಕ್ಷಿತಾ ಮತ ಕೇಳಲೇ ಇಲ್ಲ

ರಕ್ಷಿತಾ ಅವರು ಅಶ್ವಿನಿ, ರಾಶಿಕಾ ಬಳಿ ಮತ ಕೇಳುವ ಪ್ರಸಂಗ ಬಂದಿತ್ತು. ಆದರೆ ರಕ್ಷಿತಾ, “ಅವರಿಗೆ ನನಗೆ ಮತ ಹಾಕುವ ಮನಸ್ಸು ಇಲ್ಲ. ನಾನು ಕೇಳೋದಿಲ್ಲ” ಎಂದು ಹೇಳಿದ್ದರು.

26
ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ನಡುವೆ ಜಗಳ ಆಯ್ತು

ಅದಾದ ನಂತರ ಇವರ ಮಧ್ಯೆ ಜಗಳ ನಡೆದಿದೆ. ಆ ವೇಳೆ ರಕ್ಷಿತಾ ಅವರು ಕಾಲಿನಲ್ಲಿ ಮತ ಹಾಕಿ ತುಳಿಯುತ್ತೇನೆ ಎನ್ನುವ ಅರ್ಥದಲ್ಲಿ ಆಕ್ಷನ್‌ ಮಾಡಿದ್ದರು. ಇದನ್ನೇ ಅಶ್ವಿನಿ ಗೌಡ ಅವರು ರಕ್ಷಿತಾ ಐದು ಬಾರಿ ಚಪ್ಪಲಿ ತೋರಿಸಿದರು ಎಂದು ಹೇಳಿದರು.

36
ರಕ್ಷಿತಾ ಶೆಟ್ಟಿ ಏನು ಮಾಡಿದ್ರು?

“ನೀವು ಕೆಳಗಡೆ ಹಾಕ್ತೀರಿ ಅಲ್ವಾ? ನಾನು ಬ್ರೇಕ್‌ ಮಾಡ್ತೀನಿ” ಎಂದು ಹೇಳಿ ರಕ್ಷಿತಾ ಅವರು ಕೂತಿದ್ದ ಚೇರ್‌ನಿಂದ ಎದ್ದು ಮುರಿಯುವ ಥರ ಕಾಲಿನಿಂದ, ನೆಲವನ್ನು ಸಣ್ಣದಾಗಿ ಗುದ್ದಿದ್ದರು.

46
ಕಿಚ್ಚ ಸುದೀಪ್‌ ಮುಂದೆ ಆರೋಪ ಮಾಡಿದ್ರು

ಕಿಚ್ಚ ಸುದೀಪ್‌ ಮುಂದೆ ಕೂಡ ಚಪ್ಪಲಿ ತೋರಿಸಿದರು ಎಂದು ಹೇಳಿದ್ದಾರೆ. ಇದರ ಬಗ್ಗೆ ಸುದೀಪ್‌ ಮತ್ತೆ ಪ್ರಶ್ನೆ ಹಾಕಿ, ಸ್ಪಷ್ಟನೆ ನೀಡಲಿಲ್ಲ. ಈ ವಿಷಯ ವೀಕ್ಷಕರ ಮನಸ್ಸಿನಲ್ಲಿ ಗೊಂದಲವಾಗಿಯೇ ಉಳಿದುಕೊಂಡಿದೆ.

56
ಧನುಷ್‌ ಕೂಡ ಸ್ಪಷ್ಟನೆ ನೀಡಿದ್ರು

ಈ ಘಟನೆ ಬಗ್ಗೆ ಧನುಷ್‌ ಸ್ಪಷ್ಟನೆ ನೀಡಿದ್ದಾರೆ. "ರಕ್ಷಿತಾ ಶೆಟ್ಟಿ ಅವರು ಹೇಳಿದ್ದನ್ನು ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ. ನಿಮ್ಮ ಮತವನ್ನು ನನಗೆ ಕೊಟ್ಟರೆ ಅದನ್ನು ನಾನು ಕಾಲಿನಿಂತ ತುಳಿಯುತ್ತೀನಿ ಅಂತ ಹೇಳಿದ್ರು. ನೀವು ಕಲಾವಿದರು, ಇದು ಸೀರಿಯಲ್‌ ಅಲ್ಲ ಆಕ್ಟ್‌ ಮಾಡೋಕೆ ಅಂತಷ್ಟೇ ಹೇಳಿದ್ದಾರೆ” ಎಂದು ಧನುಷ್‌ ಹೇಳಿದ್ದಾರೆ. ಆಗ ಅಶ್ವಿನಿ ಅವರು, ಒಂದು ಸಲ ರಕ್ಷಿತಾ ಕಾಲನ್ನು ಎಸೆಯೋ ಥರ ಮಾಡ್ತಾರೆ, ಆಮೇಲೆ ಕಾಲಿನಲ್ಲಿ ಹಾಕಿ ತುಳಿಯೋ ಥರ ಮೂರು ಸಲ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

66
ಎಲಿಮಿನೇಟ್‌ ಆದ ಮಲ್ಲಮ್ಮ ಹೇಳಿದ್ದೇನು?

“ಬಿಗ್‌ ಬಾಸ್‌ ಮನೆಯಲ್ಲಿ ವೋಟ್‌ ಹಾಕೋದಿತ್ತು. ಆಗ ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ಗೌಡ ಬಳಿ ಮತ ಕೇಳಬೇಕಿತ್ತು. ಆದರೆ ರಕ್ಷಿತಾ ಕೇಳಲಿಲ್ಲ. ಆದರೆ ನಿನ್ನ ಮತವನ್ನು ಚಪ್ಪಲಿಯಲ್ಲಿ ಹಾಕಿ ತುಳಿಯುತ್ತೀನಿ ಎಂದು ಹೇಳಿದ್ದಳು. ಅವಳು ಚಪ್ಪಲಿ ತೋರಿಸಲಿಲ್ಲ. ಏನೋ ಒಂದು ಕಾರಣ ಬೇಕು ಅಂತ ಅಶ್ವಿನಿ ಗೌಡ ಹೇಳಿದರು. ನಮಗೆ ಇದಷ್ಟೇ ಕಂಡಿದ್ದು, ನಮಗೆ ಏನೇನೋ ಕಟ್ಕೊಂಡು ಹೇಳೋಕೆ ಬರೋದಿಲ್ಲ” ಎಂದು ಮಲ್ಲಮ್ಮ ಸ್ಪಷ್ಟನೆ ನೀಡಿದ್ದಾರೆ.

Read more Photos on
click me!

Recommended Stories