ಗಿಲ್ಲಿ ನಟ, ಧನುಷ್ ಸತ್ಯ ದರ್ಶನ ಮಾಡಿಸಿದ್ರೂ ಒಪ್ಪಿಕೊಳ್ತಿಲ್ಯಾಕೆ ಅಶ್ವಿನಿ ಗೌಡ? ರಕ್ಷಿತಾ ಚಪ್ಪಲಿ ತೋರಿಸಿದ್ದು ನಿಜವೇ?

Published : Nov 04, 2025, 10:55 AM IST

Bigg Boss Kannada 12: ರಕ್ಷಿತಾ ಶೆಟ್ಟಿ ತನಗೆ ಚಪ್ಪಲಿ ತೋರಿಸಿದರೆಂಬ ಅಶ್ವಿನಿ ಗೌಡರ ಆರೋಪಕ್ಕೆ ಸಹ ಸ್ಪರ್ಧಿಗಳಾದ ಧನುಷ್ ಮತ್ತು ಗಿಲ್ಲಿ ನಟ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ, ಅಶ್ವಿನಿ ಗೌಡ ಮನೆಯಿಂದ ಹೊರಬಂದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ

PREV
15
ಸತ್ಯ ದರ್ಶನ!

ಶನಿವಾರದ ಸಂಚಿಕೆಯಲ್ಲಿ ಸುದೀಪ್ ಮುಂದೆಯೇ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಕೆಲವು ಗಂಭೀರವಾದ ಆರೋಪಗಳನ್ನು ಮಾಡಿದ್ದರು. ಜಗಳದ ಸಂದರ್ಭದಲ್ಲಿ ರಕ್ಷಿತಾ ಶೆಟ್ಟಿ ನನಗೆ ಮೂರ್ನಾಲ್ಕು ಬಾರಿ ಚಪ್ಪಲಿ ತೋರಿಸಿದರು ಮತ್ತು ಕಲಾವಿದರ ಬಗ್ಗೆ ಕೀಳಾಗಿ ಮಾತನಾಡಿದರು ಎಂದು ಹೇಳಿದ್ದರು. ಕಲಾವಿದರ ಕುರಿತ ಹೇಳಿಕೆ ಬಗ್ಗೆ ಸುದೀಪ್ ಅವರ ಮುಂದೆಯೇ ಕಾವ್ಯಾ ಶೈವ ಸ್ಪಷ್ಟನೆ ನೀಡಿ ಅಶ್ವಿನಿ ಗೌಡರ ಮುಖವಾಡ ಕಳಚಿದ್ದರು.

25
ಧನುಷ್ ಮತ್ತು ಗಿಲ್ಲಿ ನಟ

ಸೋಮವಾರದ ಸಂಚಿಕೆಯಲ್ಲಿಯೂ ಅಶ್ವಿನಿ ಗೌಡ ಇದೇ ಆರೋಪಗಳನ್ನು ಮಾಡಿದರು. ಮುಖಕ್ಕೆ ಮಸಿ ಬಳೆಯುವ ಪ್ರಕ್ರಿಯೆಯಲ್ಲಿಯೇ ಇದೇ ಆರೋಪಗಳನ್ನು ಅಶ್ವಿನಿ ಗೌಡ ಪುನರುಚ್ಚಾರ ಮಾಡಿದರು. ನಿಜವಾಗಿಯೂ ಅಂದು ನಡೆದಿದ್ದು ಏನು ಎಂಬುದನ್ನು ಧನುಷ್ ಮತ್ತು ಗಿಲ್ಲಿ ನಟ ಹೇಳಿದರು. ರಕ್ಷಿತಾ ನಿಮಗೆ ಚಪ್ಪಲಿ ತೋರಿಸಿಲ್ಲ ಮತ್ತು ಕಲಾವಿದರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ ಎಂದು ಗಿಲ್ಲಿ ನಟ ಸ್ಪಷ್ಟಪಡಿಸಿದರು.

35
ಅಂದು ರಕ್ಷಿತಾ ಹೇಳಿದ್ದೇನು?

ಶನಿವಾರದ ಸಂಚಿಕೆಯಲ್ಲಿ ಚಪ್ಪಲಿ ತೋರಿಸಿದರು ಎಂದು ಹೇಳಿದ್ದ ಅಶ್ವಿನಿ ಗೌಡ, ಸೋಮವಾರ ಕಾಲು ತೋರಿಸಿದರು ಅಂತಾ ಅಂದ್ರು. ಗಿಲ್ಲಿ ನಟ ಮತ್ತು ಧನುಷ್ ಇಬ್ಬರು ಅಶ್ವಿನಿ ಗೌಡ ಅವರನ್ನು ಮುಖಕ್ಕೆ ಮಸಿ ಬಳೆಯಲು ಆಯ್ಕೆ ಮಾಡಿಕೊಳ್ಳುತ್ತಾರೆ. ಅಶ್ವಿನಿ ಗೌಡ ಅವರು ಬೇರೆಯವರ ಹೇಳಿಕೆಗೆ ತಪ್ಪು ಅರ್ಥ ಕಲ್ಪಿಸುತ್ತಾರೆ. ರಕ್ಷಿತಾ ಶೆಟ್ಟಿ ನಿಮಗೆ ಚಪ್ಪಲಿ ತೋರಿಸಿಲ್ಲ. ನಿಮ್ಮ ವೋಟ್‌ ಏನಾದ್ರು ನನಗೆ ಕೊಟ್ರೆ ಅದನ್ನು ಕಾಲಿನಲ್ಲಿ ತುಳಿದು ಹಾಕ್ತೀನಿ ಅಂತ ಹೇಳಿದರು. ಇದಕ್ಕೆ ಬೇರೆ ಅರ್ಥ ನೀಡುವುದು ಬೇಕಾಗಿರಲಿಲ್ಲ ಎಂದು ಹೇಳಿದರು.

45
ವ್ಯಕ್ತಿತ್ವ ಕುಂದಿಸುವ ಪ್ರಯತ್ನ ಆಗ್ತಿದೆಯಾ?

ಮುಖಕ್ಕೆ ಕಪ್ಪು ಬಳಿಯುವ ಪ್ರಕ್ರಿಯೆ ಎದುರಾಳಿಗಳ ವ್ಯಕ್ತಿತ್ವ ಕುಂದಿಸುವ ಪ್ರಯತ್ನಗಳು ನಡೆಯಿತಾ ಎಂಬ ಅನುಮಾನ ಮೂಡಿತು. ಕಾವ್ಯಾ ಶೈವ ಅವರನ್ನು ತಂಗಿ ಅಂತಾ ಕರೆದು ಮುಖಕ್ಕೆ ಮಸಿ ಬಳೆಯಲು ಚಂದ್ರಪ್ರಭಾ ನೀಡಿದ ಕಾರಣ ವೀಕ್ಷಕರ ಬೇಸರಕ್ಕೂ ಕಾರಣವಾಯ್ತು. ಇದಕ್ಕೆ ಕಾವ್ಯಾ ಸಹ ಬೇಸರ ವ್ಯಕ್ತಪಡಿಸಿದರು. ಅದೇ ರೀತಿ ರಕ್ಷಿತಾ ಶೆಟ್ಟಿ ವಿರುದ್ಧವೂ ಇಂತಹದೇ ಆರೋಪವನ್ನು ಅಶ್ವಿನಿ ಗೌಡ ಮಾಡಿದರು.

ಇದನ್ನೂ ಓದಿ: ಕ್ಯಾರೆಕ್ಟರ್ ಬಗ್ಗೆ ಗಂಭೀರ ಆರೋಪ ಮಾಡಿದ್ದ ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ರಕ್ಷಿತಾ ಶೆಟ್ಟಿ

55
ಅಶ್ವಿನಿ ಗೌಡ ಔಟ್ ಆದ್ರಾ?

ಮತ್ತೊಂದೆಡೆ ಅಶ್ವಿನಿ ಗೌಡ ಮನೆಯಿಂದ ಹೊರಗೆ ಹೋಗುತ್ತಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. 24/7 ಲೈವ್ ಸ್ಟ್ರೀಮ್‌ನಲ್ಲಿ ಸೀಕ್ರೆಟ್ ರೂಮ್ ಸೆಟ್ ತೋರಿಸಿಲ್ಲ. ಆದ್ರೆ ಇಂದಿನ ಪ್ರೋಮೋದಲ್ಲಿ ಸ್ಪರ್ಧಿಗಳೊಂದಿಗೆ ಅಶ್ವಿನಿ ಗೌಡ ನಿಂತಿರೋದನ್ನು ತೋರಿಸಲಾಗಿದೆ. ಹಾಗಾದ್ರೆ ಅಶ್ವಿನಿ ಗೌಡ ನಿಜಕ್ಕೂ ಮನೆಯಿಂದ ಹೊರ ಬಂದ್ರಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಇದನ್ನೂ ಓದಿ: BBK 12: ಅಶ್ವಿನಿ ಗೌಡ ಹೊರಬಂದ್ರೂ ಎಲಿಮಿನೇಟ್‌ ಆಗಿಲ್ಲ, ಸೀಕ್ರೇಟ್‌ ರೂಮ್‌ಗೂ ಹೋಗಿಲ್ಲ; ಅಸಲಿ ಸತ್ಯ ರಿವೀಲ್

Read more Photos on
click me!

Recommended Stories