ಮನೆಯಲ್ಲಿರಲು ಯಾರು ಅರ್ಹರಲ್ಲ ಎಂಬ ಟಾಸ್ಕ್ ನಂತರ, ರಕ್ಷಿತಾ ಶೆಟ್ಟಿ ಹೇಳಿಕೆಯನ್ನು ಅಶ್ವಿನಿ ಗೌಡ ತಿರುಚಿದ್ದಾರೆ ಎಂದು ಜಾನ್ವಿ ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲಿ ಆಪ್ತರಾಗಿದ್ದ ಜಾನ್ವಿ ಮತ್ತು ಅಶ್ವಿನಿ ನಡುವೆ ಅಂತರ ಹೆಚ್ಚಾಗಿದ್ದು, ಜಾನ್ವಿ ತಮ್ಮ ಆಟದ ವೈಖರಿಯನ್ನು ಬದಲಿಸಿಕೊಂಡಿದ್ದಾರೆ.
ಮನೆಯಲ್ಲಿರಲು ಯಾರು ಅರ್ಹರಲ್ಲ ಎಂದು ಹೇಳಿ ಸ್ಪರ್ಧಿಗಳ ಮುಖಕ್ಕೆ ಕಪ್ಪು ಬಣ್ಣ ಬಳಿಯಬೇಕಿತ್ತು. ಈ ಪ್ರಕ್ರಿಯೆ ಮುಗಿದ ಬಳಿಕ ಸ್ಪರ್ಧಿಗಳಲ್ಲಿ ಯಾರು ಯಾವ ಕಾರಣ ನೀಡಿದ್ರು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಕೆಲವರು ತಮಗೆ ನೀಡಿದ ಕಾರಣಕ್ಕೆ ಬೇಸರ ವ್ಯಕ್ತಪಡಿಸಿದರು.
25
ಜಾನ್ವಿ ಚರ್ಚೆ
ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಸೂರಜ್ ಮತ್ತು ಜಾನ್ವಿ ಇದೇ ವಿಷಯವಾಗಿ ಮಾತನಾಡುತ್ತಿರುತ್ತಾರೆ. ಮನೆಯಲ್ಲಿರಲು ಯಾರು ಅರ್ಹರಲ್ಲ ಎಂಬುದಕ್ಕೆ ನೀಡಿದ ಕೆಲವು ಕಾರಣಗಳು ಬಗ್ಗೆ ಸೂರಜ್ ಜೊತೆಯಲ್ಲಿ ಜಾನ್ವಿ ಚರ್ಚೆ ಮಾಡುತ್ತಾರೆ. ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಮಾಡಿದ ಆರೋಪದ ಬಗ್ಗೆ ತಮ್ಮ ಅಭಿಪ್ರಾಯವನ್ನು ಜಾನ್ವಿ ವ್ಯಕ್ತಪಡಿಸಿದ್ದಾರೆ.
35
ರಕ್ಷಿತಾ ಶೆಟ್ಟಿ ಹೇಳಿಕೆ
ರಕ್ಷಿತಾ ಶೆಟ್ಟಿ ಹೇಳಿಕೆಯಲ್ಲಿ ಕಲಾವಿದರನ್ನು ಅವಮಾನಿಸುವ ಉದ್ದೇಶ ಇರಲಿಲ್ಲ. ಸೀರಿಯಲ್‌ನಲ್ಲಿ ಡ್ರಾಮಾ ಮಾಡಿರುತ್ತೀರಿ. ಇದು ಸೀರಿಯಲ್ ಅಲ್ಲ ಡ್ರಾಮಾ ಮಾಡಬೇಡಿ ಎಂದು ರಕ್ಷಿತಾ ಶೆಟ್ಟಿ ಹೇಳಿದರು. ಆದರೆ ಈ ಹೇಳಿಕೆಯನ್ನು ಅಶ್ವಿನಿ ಗೌಡ ತಿರುಚಿದರು. ರಕ್ಷಿತಾ ಚೆನ್ನಾಗಿ ಆಟವಾಡುತ್ತಿದ್ದು, ಮನೆಯಲ್ಲಿರಲು ಅರ್ಹ ಎಂದು ಜಾನ್ವಿ ಹೇಳಿದ್ದಾರೆ.
ಬಿಗ್‌ಬಾಸ್ ಆರಂಭದ ಎರಡು ವಾರ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಒಂಟಿಯಾಗಿ ಎಂಟ್ರಿ ಕೊಟ್ಟಿದ್ರೂ ಇಬ್ಬರು ಸ್ಪರ್ಧಿಗಳು ಜಂಟಿಯಾಗಿ ಆಟ ಆರಂಭಿಸಿದ್ದರು. ವೈಲ್ಡ್ ಕಾರ್ಡ್‌ನಲ್ಲಿ ಬಂದ ರಿಷಾ, ಹೊರಗೆ ಇಬ್ಬರು ಹೇಗೆ ಕಾಣಿಸುತ್ತಿದೆ ಎಂಬುದರ ಬಗ್ಗೆ ಸುಳಿವು ನೀಡಿದ್ದರು. ಕಾಲೇಜಿನ ಟಾಸ್ಕ್ ವೇಳೆಯಲ್ಲಿ ಅಶ್ವಿನಿ ಅವರಿಂದ ಜಾನ್ವಿ ದೂರವಾಗಿದ್ದಾರೆ.
ಈ ವಾರ ಬಿಗ್‌ಬಾಸ್ ಯಾವುದೇ ಟಾಸ್ಕ್ ನೀಡದ ಹಿನ್ನೆಲೆ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವದಿಂದಲೇ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕಿದೆ. ಹಾಗಾಗಿ ಜಾನ್ವಿ ಮತ್ತು ಕಾವ್ಯಾ ಕೊರವಂಜಿ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಂದಿಯನ್ನು ರಂಜಿಸಿದ್ದರು. ಹಿಂದಿನ ವಾರದಲ್ಲಿ ಜಾನ್ವಿ ಮನೆಯ ಎಲ್ಲಾ ಸ್ಪರ್ಧಿಗಳ ಮೆಚ್ಚುಗೆ ಪಡೆದುಕೊಂಡು ಉತ್ತಮ ಪದಕ ತಮ್ಮದಾಗಿಸಿಕೊಂಡಿದ್ದಾರೆ.