Karna Serial: ಮುಂದೆ ನಿಧಿ, ನಿತ್ಯಾ, ಕರ್ಣ ಲೈಫ್‌ನಲ್ಲಿ ಹೀಗೆ ಆಗೋದು; ಬಾಯಿಬಿಟ್ಟ ಸಂಜಯ್!

Published : Nov 05, 2025, 01:50 PM IST

Karna Serial Today Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ಕರ್ಣ ಅವರು ಸುಳ್ಳು ಮದುವೆ ಆಗಿದ್ದಾರೆ. ತೇಜಸ್‌ ಹುಡುಕಾಟದಲ್ಲಿರುವ ಈ ಜೋಡಿಗೆ ನಿಜಕ್ಕೂ ನ್ಯಾಯ ಸಿಗತ್ತಾ ಎನ್ನುವ ಪ್ರಶ್ನೆ ಬಂದಿದೆ. ಸೀರಿಯಲ್‌ನಲ್ಲಿ ಮುಂದೆ ಏನಾಗುವುದು ಎಂದು ಸಂಜಯ್‌ ಸುಳಿವು ಕೊಟ್ಟಿದ್ದಾನೆ. 

PREV
15
ಕರ್ಣ, ನಿತ್ಯಾ ಮದುವೆ ನಾಟಕ

ತೇಜಸ್‌ ಹಾಗು ನಿತ್ಯಾ ಮದುವೆ ಮುರಿದು ಹೋಯ್ತು. ನಿತ್ಯಾ ಮದುವೆ ನಿಂತು ಹೋದರೆ ಅಜ್ಜಿಯಂದಿರು ಬೇಸರ ಮಾಡಿಕೊಳ್ತಾರೆ ಎಂದು ಕರ್ಣ, ನಿತ್ಯಾ ಮದುವೆ ನಾಟಕ ಮಾಡಿದ್ದರು. ಈ ವಿಷಯ ಯಾರಿಗೂ ಗೊತ್ತಿಲ್

25
ರಮೇಶ್‌ ಪ್ಲ್ಯಾನ್‌ ಉಲ್ಟಾ ಹೊಡೀತು

ನಿತ್ಯಾ ಹಾಗೂ ಕರ್ಣನನ್ನು ಮದುವೆ ಮಾಡೋದು, ನಿಧಿ ದೂರ ಆಗಿದ್ದಕ್ಕೆ ಕರ್ಣ ಅಳುತ್ತಾನೆ, ತೇಜಸ್‌ ಇಲ್ಲ ಅಂತ ನಿತ್ಯಾ ಅಳ್ತಾಳೆ ಎಂದು ರಮೇಶ್‌ ಪ್ಲ್ಯಾನ್‌ ಮಾಡಿದ್ದನು. ಹೀಗೆ ಪ್ಲ್ಯಾನ್‌ ಮಾಡಿ ಅವನು ತೇಜಸ್‌ನನ್ನು ಮದುವೆ ದಿನ ಕಿಡ್ನ್ಯಾಪ್‌ ಮಾಡಿಸಿದ್ದನು. ಈಗ ಅವನ ಪ್ಲ್ಯಾನ್‌ ಉಲ್ಟಾ ಹೊಡೆದಿದೆ.

35
ರಮೇಶ್‌ಗೆ ಬೇಸರ ತಂದಿದ್ದೇನು?

ನಿತ್ಯಾ ಹಾಗೂ ಕರ್ಣ ಎಲ್ಲವನ್ನು ಮರೆತು, ಹನಿಮೂನ್‌ಗೆ ಹೋಗುತ್ತಾರೆ ಅಂತ ರಮೇಶ್‌, ನಯನತಾರಾ, ರಮೇಶ್‌ ತಲೆಬಿಸಿಮಾಡಿಕೊಂಡಿದ್ದಾರೆ. ಇದು ಅವರಿಗೆ ಬೇಸರ ತಂದಿದೆ. ಇದೇ ವಿಷಯದ ಬಗ್ಗೆ ಈ ಮೂವರು ಮಾತನಾಡಿಕೊಂಡಿದ್ದಾರೆ.

45
ಸಂಜಯ್‌ ಹೇಳಿದ್ದಾನೆ?

ನಯನತಾರಾ ಬಳಿ ಸಂಜಯ್‌ ಇದೇ ವಿಷಯ ಮಾತನಾಡಿಕೊಂಡಿದ್ದಾನೆ. ಆಗ ಸಂಜಯ್‌, ಅಡುಗೆ ಸುಟ್ಟುಹೋಗತ್ತೆ ಎಂದುಕೊಂಡು ಬೆಂಕಿ ಹಚ್ಚಿದರೆ, ಪಕ್ಕದಲ್ಲಿರುವ ಒಲೆಯಲ್ಲಿ ಹಾಲು ಕುದಿಯುತ್ತಿದೆ. ನಾವು ಯಾಮಾರುತ್ತಿದ್ದೇವೆ. ಲವ್‌ ಮಾಡೋರಿಗಿಂತ ಸ್ಪೀಡ್‌ ಆಗಿ ಹನಿಮೂನ್‌ಗೆ ಹೋಗಿದ್ದಾರೆ. ಕರ್ಣ ನಿತ್ಯಾಳನ್ನು ಲವ್‌ ಮಾಡಿ, ನಮ್ಮ ಕಣ್ಣಿಗೆ ಸುಣ್ಣ ಬಳೆದು ನಿಧಿಗೆ ಕ್ಲೋಸ್‌ ಆಗೋ ಥರ ಮಾಡುತ್ತಿದ್ದಾನಾ? ಎಂದು ಹೇಳಿದ್ದಾನೆ.

55
ಮುಂದೆ ಏನಾಗಲಿದೆ?

ಹಾಗಾದರೆ ಕರ್ಣನಿಗೆ ನಿತ್ಯಾ ಮೇಲೆ ಲವ್‌ ಆಗಲಿದೆಯಾ? ಇಷ್ಟು ಬೇಗ ತೇಜಸ್‌, ನಿತ್ಯಾ ಒಂದಾಗೋದು ಡೌಟ್.‌ ನಾಳೆ ತೇಜಸ್‌ ಸತ್ತು ಹೋದರೂ ಕೂಡ ಆಶ್ಚರ್ಯವಿಲ್ಲ. ಆಮೇಲೆ ನಿತ್ಯಾ, ಕರ್ಣನ ಜೊತೆ ಬದುಕಬೇಕಾಗಿ ಬರುವುದು. ಆಮೇಲೆ ನಿಧಿ ಜೀವನ ಏನಾಗಲಿದೆಯೋ ಏನೋ! ಒಟ್ಟಿನಲ್ಲಿ ಸಂಜಯ್‌ ಹೇಳುವಂತೆ ನಿತ್ಯಾ, ಕರ್ಣ ಲವ್‌ ಮಾಡಲಿದ್ದಾರಾ ಎಂಬ ಪ್ರಶ್ನೆ ಶುರುವಾಗಿದೆ.

Read more Photos on
click me!

Recommended Stories