‘Lakshmi Baramma’ ಖ್ಯಾತಿಯ ಲಕ್ಷ್ಮೀ, ತೆಲುಗು ಕಿರುತೆರೆಯಲ್ಲಿ ಮಾಡರ್ನ್ ಮಹಾಲಕ್ಷ್ಮಿ

Published : Nov 05, 2025, 01:47 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಭೂಮಿಕಾ ರಮೇಶ್, ಸದ್ಯ ತೆಲುಗು ಕಿರುತೆರೆಯಲ್ಲಿ ಮೇಘ ಸಂದೇಶಂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಿಂಪಲ್ ಆಗಿ ಮಹಾಲಕ್ಷ್ಮೀಯಂತೆ ಇದ್ದ ಭೂಮಿಕಾ, ಇದೀಗ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿದ್ದಾರೆ. 

PREV
16
ಭೂಮಿಕಾ ರಮೇಶ್

ಭೂಮಿಕಾ ರಮೇಶ್ ಎನ್ನುವ ಹೆಸರಿಗಿಂತ ಜನರನ್ನು ಈ ನಟಿಯನ್ನು ಒಪ್ಪಿಕೊಂಡಿದ್ದೇ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಲಕ್ಷ್ಮೀಯಾಗಿ, ಭಾಗ್ಯನ ಲಡ್ಡು ಹಾಗೂ ವೈಷ್ಣವ್ ನ ಮಹಾಲಕ್ಷ್ಮೀ ಆಗಿ. ಸಿಂಪಲ್ ಆಗಿ ಸೀರೆಯುಟ್ಟು ಮಿಂಚುತ್ತಿದ್ದ ಲಕ್ಷ್ಮೀ ಈವಾಗ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿದ್ದಾರೆ.

26
ತೆಲುಗು ಕಿರುತೆರೆಯಲ್ಲಿ ಭೂಮಿಕಾ

ಲಕ್ಷ್ಮಿ ಬಾರಮ್ಮ ಧಾರಾವಾಹಿ ನಟಿ ಭೂಮಿಕಾ ಸದ್ಯ ತೆಲುಗು ಕಿರುತೆರೆಯಲ್ಲಿ ಮೇಘ ಸಂದೇಶಂ ಧಾರಾವಾಹಿಯಲ್ಲಿ ಭೂಮಿಯಾಗಿ ಮಿಂಚುತ್ತಿದ್ದಾರೆ. ಭೂಮಿ ಮತ್ತು ಗಗನ್ ಜೋಡಿ ಜೀ ಕುಟುಂಬಂ ಅವಾರ್ಡ್ ಅಲ್ಲಿ ಮೆಚ್ಚಿನ ಜೋಡಿ ಪ್ರಶಸ್ತಿ ಕೂಡ ಪಡೆದಿದೆ. ಸದ್ಯಕ್ಕಂತೂ ಭೂಮಿಕಾ ತೆಲುಗು ಕಿರುತೆರೆ ವೀಕ್ಷಕರ ಫೇವರಿಟ್ ಆಗಿದ್ದಾರೆ.

36
ಸಖತ್ ಸ್ಟೈಲಿಶ್ ಲುಕ್

ಭೂಮಿಕಾ ರಮೇಶ್ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಾಗಲೆಲ್ಲಾ ತುಂಬಾನೆ ಸಿಂಪಲ್ ಆಗಿ, ಸೀರೆಯುಟ್ಟು, ತೆಲೆತುಂಬಾ ಹೂವು ಮುಡಿದು ಮಿಂಚುತ್ತಿದ್ದರು. ಆದರೆ ತೆಲುಗು ಇಂಡಷ್ಟ್ರಿಗೆ ಹೋಗುತ್ತಿದ್ದಂತೆ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿದ್ದಾರೆ ಭೂಮಿಕಾ.

46
ಸ್ಟನ್ನಿಂಗ್ ಲುಕ್ ಮೆಚ್ಚಿಕೊಂಡ ಫ್ಯಾನ್ಸ್

ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಹಸಿರು ಬಣ್ಣದ ಲಂಗ ಹಾಗೂ ಕ್ರಾಪ್ ಟಾಪ್ ಧರಿಸಿ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸಿಕೊಂಡ ಭೂಮಿಕಾ ಲುಕ್ ನ್ನು ಜನ ಮೆಚ್ಚಿಕೊಂಡಿದ್ದಾರೆ. ಮಾಡರ್ನ್ ಅವತಾರದಲ್ಲಿ ಭೂಮಿಕಾ ಸ್ಟನ್ನಿಂಗ್ ಆಗಿ ಕಾಣಿಸುತ್ತಿದ್ದಾರೆ,

56
ಮಾಡರ್ನ್ ಮಹಾಲಕ್ಷ್ಮೀ

ಕನ್ನಡಿಗರು ಲಕ್ಷ್ಮೀಯ ಹೊಸ ಅವತಾರವನ್ನು ನೋಡಿ ಶಾಕ್ ಆಗಿದ್ದಾರೆ. ನಮ್ ಲಕ್ಷ್ಮೀ ಮಾಡರ್ನ್ ಮಹಾಲಕ್ಷ್ಮೀ ಆಗಿದ್ದಾಳೆ ಎಂದು ಹೇಳುತ್ತಿದ್ದಾರೆ. ನಮ್ಮ ಮನೆಮಗಳು ಸಖತ್ ಸ್ಟ್ರಾಂಗ್ ಮತ್ತು ಸ್ಟೈಲಿಶ್ ಎಂದು ಹಾಡಿ ಹೊಗಳಿದ್ದಾರೆ ಜನ.

66
ಪಡ್ಡೆ ಹುಡುಗರ ಮನಸು ಕದ್ದ ಬೆಡಗಿ

ಇನ್ನು ಭೂಮಿಕಾರನ್ನು ಮಾಡರ್ನ್ ಅವತಾರದಲ್ಲಿ ನೋಡಿ ಪಡ್ಡೆಗಳು ಫಿದಾ ಆಗಿದ್ದಾರೆ. ನಿಮ್ಮನ್ನು ಈ ಗೆಟಪ್ ಅಲ್ಲಿ ನೋಡಿ ಕಳೆದು ಹೋದೆ. ನಿನ್ನ ಅಂದ ನೋಡಿ ಕವಿಯಾದೆ, ಯಾರು ಕೆತ್ತಿದ ಶಿಲ್ಪ ನೀನು, ನಿನ್ನಂದಕ್ಕೆ ಸರಿ ಯಾರು ಎಂದು ಕಾಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories