ಅಮ್ಮನಿಗೆ ನಾನು ಮನುಷ್ಯನಾದರೆ ಸಾಕು ಎಂಬ ಆಸೆ ಇತ್ತು, ಎಷ್ಟೋ ವರ್ಷ ಅಮ್ಮನ ದುಡಿಮೆಯಲ್ಲೇ ಬದುಕಿದೆ : ರಾಜ್ ಬಿ ಶೆಟ್ಟಿ

Published : Jan 25, 2026, 01:09 PM IST

ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟ ರಾಜ್ ಬಿ ಶೆಟ್ಟಿ ತಮ್ಮ ತಾಯಿಯೊಂದಿಗೆ ಭಾಗವಹಿಸಿದ್ದರು. ಈ ವೇಳೆ, ತಮ್ಮ ಹಿಂದಿನ ದಿನಗಳ ಬಗ್ಗೆ ಭಾವುಕರಾಗಿ ಮಾತನಾಡಿದ ರಾಜ್, ತಾಯಿಯ ದುಡಿಮೆಯಲ್ಲೇ ಬದುಕಿದ್ದಾಗಿ ಹೇಳಿದ್ದಾರೆ. ಅವರ ಅಮ್ಮ ಏನು ಹೇಳಿದ್ದಾರೆ ನೋಡಿ..

PREV
16
ರಾಜ್ ಬಿ ಶೆಟ್ಟಿ ಬಗ್ಗೆ ಅಮ್ಮ ಹೇಳಿದ್ದೇನು?

ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ತಮ್ಮದೇ ವಿಭಿನ್ನ ಮ್ಯಾನರಿಸಂನಿಂದ ಮಿಂಚ್ತಿರುವ ವ್ಯಕ್ತಿ ರಾಜ್ ಬಿ ಶೆಟ್ಟಿ, ಕಳೆದ ವರ್ಷದ ಅವರು ಕೊಟ್ಟ ಹಿಟ್ ಸಿನಿಮಾ ಸು ಪ್ರಂ ಸೋ ಅವರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿದೆ. ಇದರ ನಡುವೆ ಈಗ ಉಪ್ರೇಂದ್ರ, ಶಿವರಾಜ್‌ ಕುಮಾರ್ ಜೊತೆ '45'ಸಿನಿಮಾದಲ್ಲೂ ಮಿಂಚ್ತಿರುವ ನಟ ಮತ್ತೊಂದೆಡೆ ದುನಿಯಾ ವಿಜಯ್, ರಚಿತಾ ರಾಮ್ ನಟನೆಯ 'ದಿ ಲ್ಯಾಂಡ್ ಲಾರ್ಡ್‌'ನಲ್ಲಿ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ. ಹೀಗೆ ನಟನೆ, ನಿರ್ಮಾಣ, ನಿರ್ದೇಶನ ಎಲ್ಲದರಲ್ಲೂ ಮಿಂಚ್ತಿರುವ ರಾಜ್ ಶೆಟ್ಟಿ ಅವರು ಮೊದಲು ಹೇಗಿದ್ದರು? ಮಗನ ನಿಭಾಯಿಸುವುದಕ್ಕೆ ಅವರ ತಾಯಿ ಬಳಸುತ್ತಿದ್ದ ಆಯುಧ ಯಾವ್ದು ಈ ಬಗ್ಗೆ ಅವರ ತಾಯಿಯೇ ಹೇಳಿಕೊಂಡಿದ್ದು, ಮಗ ರಾಜ್ ಬಿ ಶೆಟ್ಟಿ ಬಗ್ಗೆ ಅವರು ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾತನಾಡಿದ್ದು, ಆ ವೀಡಿಯೋ ಸಾಕಷ್ಟು ವೈರಲ್ ಆಗ್ತಿದೆ.

26
ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಿದ್ದ ಅಮ್ಮ ಮಗ

ಇತ್ತೀಚೆಗೆ ಮನೋರಂಜನಾ ವಾಹಿನಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ನಟ ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಆಗಮಿಸಿದ್ದರು, ಜೊತೆಗೆ ಅವರ ತಾಯಿಯನ್ನು ಚಾನೆಲ್‌ನವರು ಈ ಕಾರ್ಯಕ್ರಮಕ್ಕೆ ಕರೆಸಿದ್ದರು. ಕಾರ್ಯಕ್ರಮದಲ್ಲಿ ನಿರೂಪಕಿ, ರಾಜ್ ಬಳಿ ಪ್ರಶ್ನೆ ಕೇಳಿದ್ದಾರೆ. ನಿಮ್ಮ ತಾಯಿಗೆ ನೀವು ಏನಾದರು ಮಾಡಬೇಕು ಎಂಬ ಆಸೆ ಇತ್ತಾ ಎಂದು ಕೇಳಿದ್ದಾರೆ.

36
ಹಲವು ವರ್ಷಗಳ ಕಾಲ ತಾಯಿಯ ದುಡಿಮೆಯಲ್ಲೇ ಜೀವನ

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ ಬಿ ಶೆಟ್ಟಿ, ಚಿಕ್ಕವನಿದಾಗ ನಾನು ಹೇಗೆ ಇದ್ದೆ ಅಂದ್ರೆ, ಇವನೊಬ್ಬ ಮನುಷ್ಯನಾದ್ರೆ ಸಾಕು ಎಂಬ ಆಸೆ ನನ್ನ ಅಮ್ಮನಿಗೆ ಇತ್ತು. ಎಷ್ಟೋ ವರ್ಷಗಳ ಕಾಲ ನಾನು ನನ್ನ ತಾಯಿ ದುಡಿದ ದುಡಿಮೆಯಲ್ಲೇ ಜೀವನ ಮಾಡಿದ್ದೇನೆ. ಹೀಗಾಗಿ ಅವರಿಂದಾಗಿ ನಾನು, ನಾನಿವತ್ತು ಏನು ಆಗಿದ್ದೇನೋ ಅದರ ಒಳ್ಳೆಯತನ ನಿಮಗೆ ಹೋಗುತ್ತೆ, ಕೆಟ್ಟತನ ನನಗೆ ಉಳಿಯುತ್ತೆ ಎಂದು ರಾಜ್ ಬಿ ಶೆಟ್ಟಿ ಅವರು ತಾವು ಮೊದಲು ಹೇಗಿದೆ ಎಂಬುದನ್ನು ಭಾವುಕನಾಗಿ ಹೇಳಿದ್ದಾರೆ.

46
ಮಗನ ನಿಭಾಯಿಸಲು ಬಳಸುತ್ತಿದ್ದ ಅಸ್ತ್ರ ಯಾವುದು?

ಇದೇ ವೇಳೆ ರಾಜ್ ಬಿ ಶೆಟ್ಟಿ ಅವರ ತಾಯಿ ಹಿಂದಿನಿಂದ ಬಂದಿದ್ದು, ನಿರೂಪಕಿ ಅನುಪಮಾ ಗೌಡ ಅವರು, ಅವರ ಬಳಿ ಹೌದಾ ರಾಜ್ ಬಿ ಶೆಟ್ಟಿ ಹೇಳಿದ್ದು, ಅಂತ ಕೇಳ್ತಾ, ನಿಮ್ಮ ಮಗನನ್ನು ನಿಭಾಯಿಸಲು ನೀವು ಬಳಸುತ್ತಿದ್ದ ಆಯುಧ ಯಾವುದು ಎಂದು ಅವರು ರಾಜ್ ಬಿ ಶೆಟ್ಟಿ ಅಮ್ಮನ ಬಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅವರು ನಾನು ಕತ್ತಿಯನ್ನೇ ಹಿಡಿಯುತ್ತಿದ್ದೆ ಎಂದು ಹೇಳಿದ್ದಾರೆ. ಸಮಾಜಕ್ಕೆ ಒಳ್ಳೆಯ ಮಗ ಅಲ್ಲದೇ ಹೋದರೆ ಅಂತಹ ಮಗ ಬೇಡವೇ ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. ಈ ವೇಳೆ ರಾಜ್ ಬಿ ಶೆಟ್ಟಿ, ನಮ್ಮಮ್ಮ, ಏನ್ ಮರ್ಯಾದಿ ಕಳೆಯೋದಕ್ಕೆ ಸಾಧ್ಯನೋ ಅದೆಲ್ಲವನ್ನು ಕಳೆಯಬಹುದು. ನಾನು ಮೈಕ್ ಹಿಡಿದುಕೊಂಡು ಪಕ್ಕದಲ್ಲಿ ನಿಲ್ಲುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮಕುಂಜದಲ್ಲಿ ತಂದೆಗೆ ಇರಿದು ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತಿಯೇ ಮಗನ ಕೊಲೆ ಮಾಡಿದ್ದಾರೆ ಎಂದ ಪತ್ನಿ

56
ಅಮ್ಮನ ಮಾತಿಗೆ ನೆಟ್ಟಿಗರ ಮೆಚ್ಚುಗೆ

ರಾಜ್ ಬಿ. ಶೆಟ್ಟಿ ಅವರ ಅಮ್ಮನ ಮಾತಿಗೆ ಅನೇಕ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡ್ತಿದ್ದಾರೆ. ಅನೇಕರು ರಾಜ್ ಬಿ ಶೆಟ್ಟಿ ಅವರ ಅಮ್ಮ ಅವರ ಸೋದರಿಯಂತೆ ಯಂಗ್ ಆಗಿದ್ದಾರೆ ಎಂಬುದನ್ನು ಗಮನಿಸಿದರೆ ಮತ್ತೆ ಅನೇಕರು ಅವರ ಮಾತಿಗೆ ಮಾರು ಹೋಗಿದ್ದಾರೆ. ಒಳ್ಳೆ ಮಾತು ಹೇಳಿದ್ರಿ ಅಮ್ಮ, ಸಮಾಜಕ್ಕೆ ಒಳ್ಳೆ ಮಗ ಅಲ್ದೇ ಹೋದ್ರೆ ಅಂತ ಮಗ ಬೇಡ ಅಂದ್ರಲ್ವಾ ವಾ ಎಂತಾ ಒಳ್ಳೆ ಅಮ್ಮ, ಮಗನಿಗೆ ಒಳ್ಳೆದಾಗ್ಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಮ್ಮನ ಮಾತು ಬಹಳ ಅರ್ಥಪೂರ್ಣವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ತನ್ನ ಯಶಸ್ಸಿನ ಹಿಂದಿನ ರೂವಾರಿಯನ್ನು ಪರಿಚಯಿಸಿದ ಬಿಗ್ಬಾಸ್ ರಕ್ಷಿತಾ ಶೆಟ್ಟಿ

66
ಪ್ರತಿಭೆ ಇರುವವರು ಬೆಳಿಬೇಕು ಗುರು ಎಂದಿದ್ದ ರಾಜ್ ಬಿ ಶೆಟ್ಟಿ

ಇತ್ತೀಚೆಗೆ ರಾಜ್ ಬಿ ಶೆಟ್ಟಿ ಅವರು ಬಡವರ ಮಕ್ಕಳು ಬೆಳ್ಳಿಬೇಕು ಗುರು ಎಂಬ ಮಾತಿಗೆ ತಮ್ಮದೇ ವ್ಯಾಖ್ಯಾನ ನೀಡಿ ಸುದ್ದಿಯಾಗಿದ್ದರು. ಬಡವರ ಮಕ್ಕಳು ದೊಡ್ಡವರ ಮಕ್ಕಳು ಅಂತ ಅಲ್ಲ ಯಾರಿಗೆ ಪ್ರತಿಭೆ ಇದೆಯೋ ಅವರು ಬೆಳೆಯಬೇಕು ಅವಕಾಶ ಸಿಗಬೇಕು ಎಂದು ಅವರು ಹೇಳಿದ್ದರು. 45 ಸಿನಿಮಾದ ಪ್ರಮೋಷನ್ ವೇಳೆ ಮಾತನಾಡಿದ ರಾಜ್ ಬಿ ಶೆಟ್ಟಿ ಬಡವರ ಮಕ್ಕಳು ಬೆಳೆಯಬೇಕಾ ಅಥವಾ ಪ್ರತಿಭೆ ಇರುವ ಮಕ್ಕಳು ಬೆಳೆಯಬೇಕಾ? ಅರ್ಹತೆ ಇರುವರು ಬೆಳೆಯಬೇಕು! ನನಗೆ ಏನೂ ಗೊತ್ತಿಲ್ಲ, ಇನ್ನೂ ಕಲಿಯಬೇಕು ಅನ್ನೋ ಬಡತನ ನಮ್ಮಲ್ಲಿರಬೇಕು. ನಮ್ಮ ಬಡತನ, ನೋವನ್ನು ಟ್ರಂಪ್ ಕಾರ್ಡ್ ಮಾಡಬಾರದು ಎಂದು ಅವರು ಹೇಳಿದ್ದಾರೆ. ಇನ್ನೂ ಅವರ ಸಿನಿಮಾ ಬಗ್ಗೆ ಹೇಳುವುದಾದರೆ ಫೆಬ್ರವರಿ 6ಕ್ಕೆ ಅವರ ರಕ್ಕಸಪುದೊಳ್ ಸಿನಿಮಾ ರಿಲೀಸ್ ಆಗ್ತಿದೆ. ನಂತರ ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಸಿನಿಮಾ ರೀಲೀಸ್ ಆಗಲಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories