Actress Radhika Rao Weight Loss: ರಾಧಾ ಕಲ್ಯಾಣ, ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ ಧಾರಾವಾಹಿ ಸೇರಿದಂತೆ ಕೆಲ ಕನ್ನಡ, ತುಳು ಸಿನಿಮಾದಲ್ಲಿ ನಟಿಸಿದ್ದ ರಾಧಿಕಾ ರಾವ್ ಮದುವೆಯಾಗಿ, ಮಗ ಹುಟ್ಟಿದ ಬಳಿಕ ತೆರೆಯಿಂದ ದೂರ ಇದ್ದರು. ಈಗ ಇವರ ಇನ್‌ಸ್ಟಾಗ್ರಾಮ್ ಪೋಸ್ಟ್ ಎಲ್ಲರ ನಿದ್ದೆಗೆಡಿಸಿದೆ.
ಮಗು ಆದಕೂಡಲೇ ಕೆಲ ಮಹಿಳೆಯರು ದಪ್ಪ ಆಗುತ್ತಾರೆ. ಇದು ಸಹಜ. ಸರಿಯಾದ ನಿದ್ದೆ ಇರೋದಿಲ್ಲ, ಮಗುವಿನ ಆರೋಗ್ಯಕ್ಕೋಸ್ಕರ ಚೆನ್ನಾಗಿ ಊಟ ತಿಂಡಿ ಕೂಡ ಮಾಡಬೇಕಾಗಿರುತ್ತದೆ, ಜಾಸ್ತಿ ವ್ಯಾಯಾಮ ಕೂಡ ಮಾಡೋಕೆ ಆಗೋದಿಲ್ಲ, ಇನ್ನೂ ಕೆಲ ಕಾರಣಗಳಿಂದ ಮಹಿಳೆಯರು ದಪ್ಪ ಆಗ್ತಾರೆ.
26
ತೂಕ ಇಳಿಸಿಕೊಂಡ್ರು
ಅಂದಹಾಗೆ ರಾಧಿಕಾ ರಾವ್ ಕೂಡ ದಪ್ಪಗಾಗಿದ್ದರು. ಈಗ ಅವರು ತೂಕ ಇಳಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದವರಿಗೆ ಇವರು ಮಗುವಿನ ತಾಯಿ ಅಂತ ಕೂಡ ಅನಿಸೋದಿಲ್ಲ.
36
ಜನ ಹೇಗಿದ್ರೂ ಮಾತಾಡ್ತಾರೆ
ದಪ್ಪಗಿದ್ದಾಗ ಜನರು ಕಾಮೆಂಟ್ ಮಾಡಿದ್ದು, ಈಗ ಸಣ್ಣ ಆದ್ಮೇಲೂ ಕೂಡ ಕೆಲವರು ನಂಬೋಕೆ ರೆಡಿ ಇಲ್ಲದ್ದನ್ನು ನೋಡಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಮಗುವಿಗೆ ಜನ್ಮ ನೀಡಿದ ಬಳಿಕ ದಪ್ಪಗಾಗಿದ್ದೆ. ಇದರ ಬಗ್ಗೆ ಅನೇಕರು ಮಾತನಾಡುತ್ತಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರು ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದರು. ಇದು ನನಗೆ ತುಂಬ ಬೇಸರ ತಂದಿತ್ತು. ಎರಡು ವರ್ಷಗಳ ಬಳಿಕ ನಾನು ತೂಕ ಇಳಿಸಿಕೊಂಡೆ ಎಂದು ನಟಿ ರಾಧಿಕಾ ರಾವ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
56
AI ಫೋಟೋ ಅಲ್ಲ
ಇದು ನನ್ನ ಹಾರ್ಡ್ ವರ್ಕ್. ದಪ್ಪ ಇದ್ದೆ ಎಂದು ಹೇಳಲು ನನಗೆ ಯಾವುದೇ ಮುಜುಗರ ಇರಲಿಲ್ಲ. ದಪ್ಪಗಿದ್ದರೂ ಕೂಡ ನಾನು ಚೆನ್ನಾಗಿ ಕಾಣುತ್ತಿದ್ದೆ. ದಪ್ಪ ಇದ್ದರೂ ಪರವಾಗಿಲ್ಲ. ನಿಮಗೆ ಯಾವಾಗ ತೂಕ ಇಳಿಸಿಕೊಳ್ಳಬೇಕು ಎಂದು ಅನಿಸುವುದೋ ಆಗ ನೀವು ಸ್ಟಾಪ್ ಮಾಡೋದಿಲ್ಲ ಎಂದು ಅವರು ಹೇಳಿದ್ದಾರೆ.
66
ಕಾಮೆಂಟ್ ಮೇಲೆ ನಿಮ್ಮ ಖುಷಿ ಇರಬಾರದು
ಜನರು ನಾನು ಸಣ್ಣ ಆಗಿರೋದನ್ನು ಕೂಡ ಒಪ್ಪಿಕೊಳ್ಳೋದಿಲ್ಲ. ಇದನ್ನು ಕೂಡ ಎಐ ತಂತ್ರಜ್ಞಾನದ ಫೋಟೋ ಎಂದು ಹೇಳಿದರು. ಕೆಲವು ಜನರು ಯಾವಾಗಲೂ ಖುಷಿಯಾಗಿರೋದಿಲ್ಲ ಎಂದು ಅರ್ಥ ಆಗಿದೆ. ಅವರಿಗೆ ಹೊಗಳೋದು ಬಿಟ್ಟು ಕಾಮೆಂಟ್ ಮಾಡಬೇಕು ಅಷ್ಟೇ. ಕಾಮೆಂಟ್‌ಗಳ ಮೇಲೆ ನಿಮ್ಮ ಖುಷಿ ನಿರ್ಧರಿತ ಆಗಬಾರದು" ಎಂದು ಹೇಳಿದ್ದಾರೆ.