'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಿಧನರಾದಂತೆ ತೋರಿಸಲಾಗಿದ್ದ ಬಂಗಾರಮ್ಮ ಮತ್ತು ಸ್ನೇಹಾ ಪಾತ್ರಧಾರಿಗಳು ಇದೀಗ ಮತ್ತೆ ಒಂದಾಗಿದ್ದಾರೆ. ನಟಿಯರಾದ ಮಂಜು ಭಾಷಿಣಿ ಮತ್ತು ಸಂಜನಾ ಬುರ್ಲಿ ಅವರು ಹೊಸ ಧಾರಾವಾಹಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಕಥೆಗೆ ಹೊಸ ತಿರುವು ನೀಡಿದ್ದಾರೆ.
ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ನಲ್ಲಿ ಸದ್ಯ ಬಂಗಾರಮ್ಮ ಕೂಡ ಸತ್ತು ಹೋಗಿದ್ದಾಳೆ. ಈ ಪಾತ್ರ ನಿರ್ವಹಿಸುತ್ತಿದ್ದ ಮಂಜು ಭಾಷಿಣಿ ಅವರು ಬಿಗ್ಬಾಸ್ಗೆ ಹೋದ ಬೆನ್ನಲ್ಲೇ ಈ ಪಾತ್ರವನ್ನೂ ಸಾಯಿಸಲಾಯಿತು. ಆದರೆ ವಿಚಿತ್ರ ಎಂದರೆ, ಅದಾಗಲೇ ಮಂಜು ಭಾಷಿಣಿ ಅವರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಾಗಿತ್ತು. ಆದರೆ ಶೂಟಿಂಗ್ ಎಲ್ಲಾ ಮೊದಲೇ ಆಗುವ ಕಾರಣ, ಆ ಪಾತ್ರವನ್ನು ಸಾಯಿಸಲಾಗಿದೆ.
26
ಸ್ನೇಹಾ ಪಾತ್ರವನ್ನೂ ಸಾಯಿಸಲಾಗಿತ್ತು!
ಅದಕ್ಕಿಂತಲೂ ಮುಂಚಿನವಾಗಿ ಸ್ನೇಹಾ ಪಾತ್ರಧಾರಿಯಾಗಿದ್ದ ಸಂಜನಾ ಬುರ್ಲಿ ಅವರು ಉನ್ನತ ಶಿಕ್ಷಣದ ಕಾರಣ ನೀಡಿ ಸೀರಿಯಲ್ ಬಿಟ್ಟು ಹೋದರು. ಈ ಪಾತ್ರಕ್ಕೆ ಬೇರೊಬ್ಬ ನಟಿ ತಂದರೆ ಲೀಡ್ ಪಾತ್ರ ಚೆನ್ನಾಗಿರಲ್ಲ ಎಂದು ಡಿಸಿಯಾಗಿದ್ದ ಸ್ನೇಹಾಳನ್ನೂ ಸಾಯಿಸಲಾಗಿತ್ತು. ಒಟ್ಟಿನಲ್ಲಿ ಎರಡು ಲೀಡ್ ರೋಲ್ಗಳನ್ನು ವಿನಾಕಾರಣ ಸಾಯಿಸಲಾಗಿತ್ತು.
36
ಸತ್ತುಹೋದ ಸ್ನೇಹಾ-ಬಂಗಾರಮ್ಮನ ಮಿಲನ
ಆದರೆ ಇದೀಗ ಪುಟ್ಟಕ್ಕನ ಮಕ್ಕಳುವಿನಲ್ಲಿ ಸತ್ತುಹೋದ ಸ್ನೇಹಾ ಮತ್ತು ಬಂಗಾರಮ್ಮ ಮತ್ತೆ ಒಂದಾಗಿದ್ದಾರೆ. ಆದರೆ ಸ್ವಲ್ಪ ಟ್ವಿಸ್ಟ್ ಇದೆ ಇಲ್ಲಿ. ಜೀ ಕನ್ನಡದಿಂದ ಹಾರಿ ಇಬ್ಬರೂ ಕಲರ್ಸ್ ಕನ್ನಡದಲ್ಲಿ ಒಂದಾಗಿದ್ದಾರೆ!
ಹೌದು. ಕಲರ್ಸ್ ಕನ್ನಡದಲ್ಲಿ ಸ್ನೇಹಾ ಪಾತ್ರಧಾರಿಯಾಗಿದ್ದ ಸಂಜನಾ ಬುರ್ಲಿ (Sanjana Burli) ಅವರು ಗಂಧದ ಗುಡಿ ಸೀರಿಯಲ್ನಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಸೀರಿಯಲ್ಗೆ ಈಗ ಮಂಜು ಭಾಷಿಣಿ ಅವರು ಎಂಟ್ರಿ ಕೊಟ್ಟಿದ್ದಾರೆ!
56
ಬಿಗ್ಬಾಸ್ ಮ್ಯೂಸಿಕ್ ಜೊತೆ ಎಂಟ್ರಿ
ದೊಡ್ಮನೆಯಿಂದ ಸೀದಾ ಗಂಧದ ಗುಡಿಗೆ ಬಂದಿರುವುದಾಗಿ ಹಿನ್ನೆಲೆಯಲ್ಲಿ ಬಿಗ್ಬಾಸ್ ಮ್ಯೂಸಿಕ್ ಜೊತೆ ಮಂಜು ಭಾಷಿಣಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಗಂಧದ ಗುಡಿ (Gandhada Gudi) ಸೀರಿಯಲ್ಗೆ ತಿರುವು ಸಿಕ್ಕಿದೆ.
66
ಇದರಲ್ಲಿ ಯಾವ ರೋಲ್?
ಈ ಸೀರಿಯಲ್ನಲ್ಲಿ ಮಂಜು ಭಾಷಿಣಿ ಅವರು ಪಾತ್ರಧಾರಿಯಾಗಿದ್ದಾರೋ ಅಥವಾ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೋ ಇನ್ನಷ್ಟೇ ನೋಡಬೇಕಿದೆ. ಅಂದಹಾಗೆ ಈ ಸೀರಿಯಲ್ ಕಥೆ ಶ್ರೀಮಂತರ ಮನೆಯ ಹೆಣ್ಣುಮಗಳು ಪರಿಸ್ಥಿತಿಗೆ ಸಿಕ್ಕು ಬಡವನ ಹೆಂಡತಿಯಾಗಿ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಇದೆ.