ಬಿಗ್‌ಬಾಸ್ ಮನೆಯಲ್ಲಿ 'ಉತ್ತಮ' ಪದಕ ಪಡೆದ ಸೂರಜ್ ಪಕ್ಕ ನಿಂತ 'ಗಿಲ್ಲಿ ನಟ'ನನ್ನು ಜಾನ್ವಿ 'ಗೆದ್ದಿತ್ತಿನ ಬಾಲ ಹಿಡಿಯೋ ಸ್ಪರ್ಧಿ' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ, ಈ ಹಿಂದಿನ ಜಗಳ ಮರೆತು ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಯ ಆಟವನ್ನು ಮೆಚ್ಚಿ 'ಉತ್ತಮ' ಸ್ಪರ್ಧಿ ಎಂದು ಹೇಳಿದ್ದಾರೆ.
ಇಂದಿನ ವೀಕೆಂಡ್ ಸಂಚಿಕೆ ನೋಡಲು ಬಿಗ್‌ಬಾಸ್ ವೀಕ್ಷಕರು ಕಾಯುತ್ತಿದ್ದಾರೆ. ಮತ್ತೊಂದೆಡೆ ಸ್ಪರ್ಧಿಯೊಬ್ಬರ ಕುರಿತು ಜಾನ್ವಿ ಹೇಳಿಕೆಯೊಂದನ್ನು ನೀಡಿದ್ದಾರೆ. ಸ್ಪರ್ಧಿಯ ವರ್ತನೆ ಕುರಿತು ನೇರವಾಗಿ ಹೇಳಿದ್ದಾರೆ. ಜಾನ್ವಿ ಯಾರಿಗೆ ಗೆದ್ದಿತ್ತಿನ ಬಾಲ ಹಿಡಿಯೋ ಸ್ಪರ್ಧಿ ಅಂತ ಹೇಳಿದ್ಯಾರಿಗೆ ಎಂಬುದರ ಬಗ್ಗೆ ನೋಡೋಣ ಬನ್ನಿ.
25
ಸೂರಜ್ ಸಿಂಗ್ ಪಕ್ಕದಲ್ಲಿ ನಿಂತ ಗಿಲ್ಲಿ ನಟ
ಈ ವಾರ ಮನೆಯ ಸದಸ್ಯರ ಬಹುಮತದ ಆಯ್ಕೆಯನುಸಾರ ಸೂರಜ್ ಸಿಂಗ್ 'ಉತ್ತಮ' ಪದಕ ಪಡೆದುಕೊಂಡಿದ್ದಾರೆ. ಅಶ್ವಿನಿ ಗೌಡ, ಕಳಪೆ ಹಣೆಪಟ್ಟಿಯೊಂದಿಗೆ ಜೈಲು ಸೇರಿದ್ದಾರೆ. ಕ್ಯಾಪ್ಟನ್ ಅಭಿಷೇಕ್ ಅವರು ಸೂರಜ್ ಸಿಂಗ್ ಕೊರಳಿಗೆ ಪದಕ ಹಾಕುತ್ತಿರುತ್ತಾರೆ. ಈ ವೇಳೆ ಸೂರಜ್ ಸಿಂಗ್ ಪಕ್ಕದಲ್ಲಿ ಗಿಲ್ಲಿ ನಟ ನಿಂತುಕೊಳ್ಳುತ್ತಾರೆ.
35
ವ್ಯಂಗ್ಯ
ಸೂರಜ್ ಸಿಂಗ್ ಹೆಗಲ್ಮೇಲೆ ಕೈ ಹಾಕಿ ನಿಂತ ಗಿಲ್ಲಿ ನಟ ಅವರನ್ನು ನೋಡಿದ ಜಾನ್ವಿ, ನೀನು ಗೆದ್ದಿತ್ತಿನ ಬಾಲ ಹಿಡಿಯೋ ಸ್ಪರ್ಧಿ ಎಂದು ವ್ಯಂಗ್ಯವಾಗಿ ಹೇಳುತ್ತಾರೆ. ಜಾನ್ವಿ ಮಾತುಗಳಿಗೆ ಗಿಲ್ಲಿ ನಟ ಪ್ರತಿಕ್ರಿಯೆ ನೀಡಿದ್ರಾ ಅಥವಾ ಇಲ್ಲವಾ ಎಂಬುದನ್ನು ತೋರಿಸಿಲ್ಲ. ಸಾಮಾನ್ಯವಾಗಿ ಗಿಲ್ಲಿ ನಟ ತಮ್ಮ ವಿರುದ್ಧದ ಮಾತುಗಳಿಗೆ ಆ ಕ್ಷಣದಲ್ಲಿಯೇ ತಿರುಗೇಟು ನೀಡುತ್ತಾರೆ.
ಮನೆಯಲ್ಲಿಯೇ ಯಾರೇ ಕ್ಯಾಪ್ಟನ್ ಆಗಲಿ ಗಿಲ್ಲಿ ನಟ ನಾನು ವೈಸ್ ಕ್ಯಾಪ್ಟನ್ ಎಂದು ಹೇಳಿಕೊಳ್ಳುತ್ತಾರೆ. ಈ ಹಿಂದೆ ಎರಡು ಬಾರಿ ಕ್ಯಾಪ್ಟನ್ ಆಗಿರುವ ರಘು ಅವರ ನಂತರ ನಾನೇ ಕ್ಯಾಪ್ಟನ್ ಅಂತಾ ಹೇಳಿದ್ದರು. ಈ ಬಾರಿಯೂ ಅಭಿಷೇಕ್ ಕ್ಯಾಪ್ಟನ್ ಆಗುತ್ತಿದ್ದಂತೆಯೇ ನಾನೇ ವೈಸ್ ಕ್ಯಾಪ್ಟನ್ ಎಂದು ಹೇಳಿಕೊಂಡಿದ್ದರು. ಈ ಹಿಂದೆಯೂ ಗಿಲ್ಲಿ ನಟ ಸ್ವಯಂಘೋಷಿತ ಉಪ ನಾಯಕ ಎಂದು ಚರ್ಚೆ ನಡೆಸಿದ್ದರು.
ಈ ಹಿಂದಿನ ಕೆಲವು ವಾರಗಳಿಂದ ರಕ್ಷಿತಾ ಶೆಟ್ಟಿ ವಿರುದ್ದ ಅಶ್ವಿನಿ ಗೌಡ ಹಲವು ಆರೋಪಗಳನ್ನು ಮಾಡಿದ್ದರು. ಇವರಿಬ್ಬರ ನಡುವೆ ನಡೆದ ಜಗಳ ಹೊರಗಡೆ ಸಂಚಲನವನ್ನೇ ಸೃಷ್ಟಿಸಿತ್ತು. ಈ ವಾರವೂ ಅಶ್ವಿನಿ ತಂಡದಲ್ಲಿಯೇ ರಕ್ಷಿತಾ ಆಟವಾಡಿದ್ದರು. ರಕ್ಷಿತಾ ಆಟಕ್ಕೆ ಮೆಚ್ಚುಗೆ ಸೂಚಿಸಿ ಅಶ್ವಿನಿ ಗೌಡ ಈ ವಾರದ ಉತ್ತಮ ಸ್ಪರ್ಧಿ ಎಂದು ಹೇಳಿದ್ದಾರೆ. ಮತ್ತೊಂದೆಡೆ ಜಾನ್ವಿ ಸಹ ರಕ್ಷಿತಾ ಅವರಿಗೆ ಉತ್ತಮ ಎಂದು ಹೇಳಿದ್ದಾರೆ.