BBK 12: ಮಹಿಳಾ ಸ್ಪರ್ಧಿ ಕೊಟ್ಟ ಶಾಕ್‌ಗೆ ಮಕ್ಕರ್ ಆದ ಗಿಲ್ಲಿ ನಟ; ಊಹೆ ಮಾಡಿರಲಿಲ್ಲ ಮಾತಿನ ಮಲ್ಲ

Published : Nov 22, 2025, 04:36 PM IST

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ತಮ್ಮ ವ್ಯಂಗ್ಯ ಮಾತುಗಳಿಂದಲೇ ಸದ್ದು ಮಾಡುತ್ತಿದ್ದಾರೆ. ಇದೀಗ ಸಹ ಸ್ಪರ್ಧಿಯೊಬ್ಬರು, ಗಿಲ್ಲಿ ನಟನಿಗೆ ಹೆದರಿಸಿ ಶಾಕ್ ಕೊಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಕುತೂಹಲ ಮೂಡಿಸಿದೆ.

PREV
15
ವ್ಯಂಗ್ಯ ಮಾತು

ಸೀಸನ್ 12ರ ಬಿಗ್‌ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಎಲ್ಲಾ ಸ್ಪರ್ಧಿಗಳ ಬಗ್ಗೆ ಕಮೆಂಟ್ ಮಾಡುತ್ತಿರುತ್ತವೆ. ಗಿಲ್ಲಿ ನಟ ತಮ್ಮ ವ್ಯಂಗ್ಯ ಮಾತುಗಳಿಂದ ತೇಜೋವಧೆ ಆಗ್ತಿದೆ ಎಂದು ಹಲವು ಸದಸ್ಯರು ಆರೋಪಿಸಿದ್ದಾರೆ. ಇದೀಗ ಗಿಲ್ಲಿ ನಟ ಮಹಿಳಾ ಸ್ಪರ್ಧಿ ಕೊಟ್ಟ ಶಾಕ್‌ಗೆ ಮಕ್ಕರ್ ಆಗಿದ್ದಾರೆ. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

25
ಗಿಲ್ಲಿ ಕೆಲಸ

ಮನೆಯ ಮೈಗಳ್ಳ ಎಂಬ ಪದವಿಯನ್ನು ಗಿಲ್ಲಿ ನಟ ಪಡೆದುಕೊಂಡಿದ್ದಾರೆ. ಕ್ಯಾಪ್ಟನ್‌ಗಳು ಸಹ ಗಿಲ್ಲಿ ಹಿಂದೆಯೇ ನಿಂತು ಕೆಲಸ ಮಾಡಿಸುತ್ತಿರೋದು ಕಂಡು ಬರುತ್ತಿದೆ. ಗಿಲ್ಲಿ ನಟ ಮನೆಯಲ್ಲಿ ಕಸ ಗುಡಿಸುತ್ತಿರುತ್ತಾರೆ. ಗಿಲ್ಲಿ ಕೆಲಸಕ್ಕೆ ಕ್ಯಾಪ್ಟನ್ ಅಭಿಷೇಕ್ ಮೆಚ್ಚುಗೆ ಸೂಚಿಸುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಕಾವ್ಯಾ, ಮೆಟ್ಟಿಲು ಮೇಲೆ ಕಸವಿದೆ ಅಂತ ಹೇಳುತ್ತಾರೆ.

35
ಗಿಲ್ಲಿ ನಟ

ಇದಕ್ಕೆ ಬಂದು ಕೆಲಸ ಮಾಡು ಅಂತ ಗಿಲ್ಲಿ ನಟ ಹೇಳುತ್ತಾರೆ. ಎಲ್ಲಾ ಕಸ ತುಂಬಿಕೊಂಡು ಹೋಗುತ್ತಿರುವಾಗ ತನ್ನೆದುರು ನಿಂತಿರೋ ಕಾವ್ಯಾ ಅವರನ್ನು ಹೆದರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಕಾವ್ಯಾ ಮಾತ್ರ ಹೆದರದೇ ಅಲ್ಲೇ ನಿಂತುಕೊಳ್ಳುತ್ತಾರೆ. ಇದರಿಂದ ಸಪ್ಪೆ ಮುಖ ಹಾಕಿಕೊಂಡು ಕಸ ಎಸೆಯಲು ಬಾತ್‌ರೂಮ್‌ ಒಳಗೆ ಹೋಗುತ್ತಾರೆ.

45
ಹೆದರಿದ ಗಿಲ್ಲಿ ನಟ

ಗಿಲ್ಲಿ ಒಳ ಹೋಗುತ್ತಿದ್ದಂತೆ ಕಾವ್ಯಾ ಬಾತ್‌ರೂಮ್ ಬಾಗಿಲ ಬಳಿಯೇ ಅಡಗಿ ಕುಳಿತುಕೊಳ್ಳುತ್ತಾರೆ. ಗಿಲ್ಲಿ ನಟ ಹೊರಗೆ ಬರುತ್ತಿದ್ದಂತೆ ಜೋರು ಧ್ವನಿ ಮಾಡಿ ಹೆದರಿಸುತ್ತಾರೆ. ಜೋರು ಧ್ವನಿ ಕೇಳುತ್ತಿದ್ದಂತೆ ಗಿಲ್ಲಿ ನಟ ಒಂದು ಕ್ಷಣ ಹೆದರಿಕೊಳ್ಳುತ್ತಾರೆ. ಸದ್ಯ ಈ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Bigg Boss Kannada 12: ಗೆದ್ದಿತ್ತಿನ ಬಾಲ ಹಿಡಿದ ಸ್ಪರ್ಧಿ; ಜಾನ್ವಿಯಿಂದ ಖಡಕ್ ಮಾತು

55
ಕಾವ್ಯಾ ಮತ್ತು ಗಿಲ್ಲಿ ನಟ

ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಕಾವ್ಯಾ ಮತ್ತು ಗಿಲ್ಲಿ ನಟ ಜಂಟಿಯಾಗಿ ಬಂದಿದ್ದರು. ಜಂಟಿ ಆಟ ಮುಕ್ತಾಯವಾದರೂ ಗಿಲ್ಲಿ ನಟ ಮತ್ತು ಕಾವ್ಯಾ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಾರ ಗಿಲ್ಲಿ ನಟ ತೆಗೆದುಕೊಂಡ ನಿರ್ಧಾರಗಳನ್ನು ಕಾವ್ಯಾ ಖಂಡಿಸಿದ್ದರು. ಗಿಲ್ಲಿ ತಮ್ಮ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾಗ ಕಾವ್ಯಾ ಕಣ್ಣೀರು ಹಾಕಿದ್ದರು.

ವೈರಲ್ ವಿಡಿಯೋ ಲಿಂಕ್ ಕೆಳಗೆ ನೀಡಲಾಗಿದೆ

https://www.instagram.com/p/DRVDlQZEhoF/

ಇದನ್ನೂ ಓದಿ: BBK 12: ರಕ್ಷಿತಾಗೆ ಅನ್ಯಾಯ ಮಾಡಿದ್ರಾ ಅಶ್ವಿನಿ ಗೌಡ? ಧನುಷ್ ಅಚ್ಚರಿ ಹೇಳಿಕೆ, ಪುಟ್ಟಿಗೆ ಸಿಗಲಿಲ್ಲ ಮನ್ನಣೆ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories