Puttakkana Makkalu: ಕಳೆದ ನಾಲ್ಕು ವರ್ಷಗಳಿಂದ ಪ್ರಸಾರವಾಗುತ್ತಿರುವ ಜೀ ಕನ್ನಡದ ಜನಪ್ರಿಯ ಧಾರಾವಾಹಿ, ನಟಿ ಉಮಾಶ್ರೀಯವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಶೂಟಿಂಗ್ ಮುಕ್ತಾಯವಾಗಿದ್ದು, ಧಾರಾವಾಹಿ ಇನ್ನೇನು ಅಂತ್ಯ ಕಾಣಲಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’, ಕಳೆದ ನಾಲ್ಕು ವರ್ಷಗಳಿಂದ ಭರ್ಜರಿ ಮನರಂಜನೆ ನೀಡುತ್ತಾ ಬಂದಿರುವ ಧಾರಾವಾಹಿ ಇದೀಗ ನಾಲ್ಕು ವರ್ಷಗಳ ಬಳಿಕ ಅಂತ್ಯ ಕಾಣಲಿದೆ.
28
ಶೂಟಿಂಗ್ ಮುಗಿಸಿದ ಪುಟ್ಟಕ್ಕ
ಈಗಾಗಲೇ ಪುಟ್ಟಕ್ಕನ ಮಕ್ಕಳು ಸೀರಿಯಲ್ ತಂಡ ಅಂತಿಮ ದಿನದ ಶೂಟಿಂಗ್ ಮುಗಿಸಿದೆ. ಅಂತಿಮ ದಿನದ, ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿವೆ. ಅಂದರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಧಾರಾವಾಹಿ ಮುಕ್ತಾಯಗೊಳ್ಳಲಿದೆ.
38
ಕಥೆ ಏನು ?
ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಪುಟ್ಟಕ್ಕನಾಗಿ ಹಿರಿಯ ನಟಿ ಉಮಾಶ್ರೀಯವರು ನಟಿಸಿದ್ದಾರೆ. ಪುಟ್ಟಕ್ಕ ಹಾಗೂ ಅವರ ಮೂರು ಜನ ಹೆಣ್ಣು ಮಕ್ಕಳಾದ ಸಹನಾ, ಸ್ನೇಹಾ ಮತ್ತು ಸುಮಾ ಪಡುವ ಕಷ್ಟ-ಸುಖದ ಕಥೆಯೇ ಪುಟ್ಟಕ್ಕನ ಮಕ್ಕಳು.
ಮೂವರು ಮಕ್ಕಳಾದ ಮೇಲೆ ಗಂಡ ಬಿಟ್ಟು, ಬೇರೆಯವಳ ಜೊತೆ ಸಂಸಾರ ಮಾಡುತ್ತಾನೆ. ಆ ಸಂದರ್ಭದಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಾ, ಮಕ್ಕಳನ್ನು ಚೆನ್ನಾಗಿ ಸಾಕಿ, ಓದಿಸುತ್ತಾಳೆ ಪುಟ್ಟಕ್ಕ. ಪುಟ್ಟಕ್ಕನ ಕಷ್ಟ, ಸುಃಖ, ಮೆಸ್, ಗೆಳತಿ ಬಂಗಾರಮ್ಮ, ರಾಜಿಯ ದ್ವೇಷ, ಜೀವನದ ಸಮಸ್ಯೆಗಳೇ ಕಥೆಯ ಆಧಾರ.
58
ಸಹನಾ ಕಥೆ ಏನಾಯ್ತು?
ದೊಡ್ಡಮಗಳು ಸಹನಾಳನ್ನು ಮೇಷ್ಟ್ರಿಗೆ ಮದುವೆ ಮಾಡಿ ಕೊಡಲಾಗುತ್ತದೆ. ಆದರೆ, ಗಂಡ ಅಮ್ಮನ ಮಾತು ಕೇಳಿ ಸಹನಾಳನ್ನು ನಂಬದೇ ಇದ್ದಾಗ, ಗಂಡನನ್ನೇ ಬಿಟ್ಟು ಹೊರಟು ಬಿಡುತ್ತಾಳೆ ಸಹನಾ. ಕೊನೆಗೆ ಅಪಘಾತದಲ್ಲಿ ತಾನು ಸತ್ತಂತೆ ಎಲ್ಲರನ್ನೂ ನಂಬಿಸಿ, ಬೆಂಗಳೂರಿನಲ್ಲಿ ನೆಲೆಸಿ ಪುಟ್ಟದಾದ ಮೆಸ್ ಇಟ್ಟುಕೊಂಡು ಸಾಧನೆ ಮಾಡುವ ಗುರಿಹೊತ್ತು, ಬಳಿಕ ಮತ್ತೆ ಊರಿಗೆ ಬಂದು ಅಮ್ಮನಿಗೆ ನೆರವಾಗಿ ಇರುತ್ತಾಳೆ ಸಹನಾ.
68
ಡಿಸಿ ಸ್ನೇಹಾ ಕಥೆ
ಇನ್ನು ನೇರ ಮಾತಿನ, ತಪ್ಪು ಇದ್ದಲ್ಲಿ ಖಂಡಿಸಿ ಹೇಳುವ ಎರಡನೇ ಮಗಳು ಸ್ನೇಹಾ, ಅಮ್ಮನ ಆಸೆಯಂತೆ ಓದಿ ಡಿಸಿಯಾಗುತ್ತಾಳೆ. ತಾನು ವಿದ್ಯಾವಂತನೆಂದು ಹೇಳಿ, ಪ್ರೀತಿಸಿದ ಕಂಠಿಯನ್ನು ಮದುವೆ ಕೂಡ ಆಗುತ್ತಾಳೆ. ಬಳಿಕ ಆತನ ಬಂಗಾರಮ್ಮನ ಮಗ ಅನ್ನೋದನ್ನು ಗೊತ್ತಾದ ಬಳಿಕ ಸಮಸ್ಯೆಗಳು ಬಂದರೂ, ಬಳಿಕ ಎಲ್ಲವೂ ಸರಿಯಾಗಿ, ಬಂಗಾರಮ್ಮ ಕೂಡ ಸ್ನೇಹಾಳನ್ನು ಸೊಸೆ ಎಂದು ಒಪ್ಪಿಕೊಳ್ಳುತ್ತಾಳೆ.
78
ಕಥೆ ಎಲ್ಲಿವರೆಗೂ ಬಂದಿದೆ
ಸ್ನೇಹಾ ಡಿಸಿಯಾಗಿ, ಕಂಠಿ ಜೊತೆ ಪ್ರೀತಿಯಿಂದ ಇದ್ದು ಎಲ್ಲ ಸರಿ ಇದೆ ಎನ್ನುವಾಗಲೇ ಸ್ನೇಹಾ ಆಕ್ಸಿಡೆಂಟಲ್ಲಿ ಸಾವನ್ನಪ್ಪುತ್ತಾಳೆ. ಆಕೆಯ ಹೃದಯವನ್ನು ಹೃದಯ ಸಮಸ್ಯೆ ಇರುವ ಸ್ನೇಹಾಗೆ ನೀಡಲಾಗುತ್ತದೆ. ನಂತರ ಸ್ನೇಹಾ ಮತ್ತು ಕಂಠಿಯ ಮದುವೆ. ಬಳಿಕ ಬಂಗಾರಮ್ಮ ಸಾವು, ಪುಟ್ಟಕ್ಕನ ಸೇಡು, ಅಮ್ಮನ ಸ್ಥಾನವನ್ನು ಕಿತ್ತುಕೊಂಡವರನ್ನು ನಾಶಮಾಡಲು ಪಣತೊಟ್ಟ ಕಂಠಿ. ಇವೆಲ್ಲವುದರ ನಡುವೆ ಸ್ನೇಹಾ ಗರ್ಭಿಣಿ. ಸದ್ಯ ಕಥೆ ಹೀಗೆ ಸಾಗುತ್ತಿದೆ.
88
ಕ್ಲೈಮಾಕ್ಸ್ ಏನಾಗಲಿದೆ?
ಮಗುವಾದರೆ ಸ್ನೇಹಾ ಸಾಯುತ್ತಾಳೆ ಎನ್ನುವ ಸತ್ಯ ಕಂಠಿಗೆ ಗೊತ್ತಾಗಿದೆ, ಹಾಗಾಗಿ ಈಗ ಕಂಠಿ ಏನು ಮಾಡುತ್ತಾನೆ ಎನ್ನುವ ಕುತೂಹಲ ಉಳಿದುಕೊಂಡಿದೆ. ಇನ್ನು ರಾಜಕೀಯದಲ್ಲಿ ನಿಂತು, ಬಂಗಾರಮ್ಮನ ಕುರ್ಚಿಯಲ್ಲಿ ಕುಳಿತುಕೊಳ್ಳಲು ರಾಧ ಹೊಂಚುಹಾಕುತ್ತಿದ್ದಾಳೆ, ಅದನ್ನು ಕಂಠಿ ಹೇಗೆ ತಡೆಯುತ್ತಾನೆ ಅನ್ನೋದನ್ನು ನೋಡಬೇಕು. ಜೊತೆಗೆ ಸಹನಾ ಮತ್ತು ಕಾಳಿ ಒಂದಾಗುತ್ತಾರೆಯೇ? ರಾಜಿಗೆ ಕೊನೆಗಾದ್ರೂ ಬುದ್ದಿ ಬರುತ್ತಾ? ಪುಟ್ಟಕ್ಕ ಈವಾಗಲಾದರೂ ಸಂತೋಷದಿಂದ ಜೀವಿಸ್ತಾಳ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.