Bigg Bossಗೆ ವೋಟ್​ ಮಾಡುವ ಅಭಿಮಾನಿಗಳಿಗೆ 'ಲಕ್ಷ್ಮೀ ನಿವಾಸ' ನಟಿ ಹೇಳಿರೋ ಕಿವಿಮಾತೇನು?

Published : Jan 15, 2026, 06:08 PM IST

ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ನಟಿ ಅಶ್ವಿನಿ ಆರ್, ಬಿಗ್‌ಬಾಸ್‌ ವೋಟಿಂಗ್ ಕುರಿತು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ದೇಶದ ಚುನಾವಣೆಗಳಲ್ಲೂ ಇದೇ ರೀತಿ ಮತ ಚಲಾಯಿಸಲು ಪ್ರೇರೇಪಿಸಿದ್ದು, ಅವರ ನಟನಾ ವೃತ್ತಿ ಮತ್ತು ಬ್ಯೂಟಿ ಸಲೂನ್ ವ್ಯವಹಾರದ ಬಗ್ಗೆಯೂ ಈ ಲೇಖನ ಮಾಹಿತಿ ನೀಡುತ್ತದೆ.

PREV
17
ಬಿಗ್​ಬಾಸ್​ ​ವೋಟಿಂಗ್​ ಭರಾಟೆ

Bigg Bossನಲ್ಲಿ ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ವೋಟಿಂಗ್​ ಮೇಲೆ ಅಭಿಮಾನಿಗಳ ಒಲವು ಹೆಚ್ಚಾಗಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಚಲಾಯಿಸಲು ಸೋಷಿಯಲ್​ ಮೀಡಿಯಾದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ ಅಭಿಮಾನಿಗಳು. ಇದರ ನಡುವೆ ಲಕ್ಷ್ಮೀ ನಿವಾಸ ಚೆಲ್ವಿ ಮಾತೀಗ ವೈರಲ್​ ಆಗಿದೆ.

27
ಲಕ್ಷ್ಮೀ ನಿವಾಸ ಚೆಲ್ವಿ ಕಿವಿಮಾತು

 ಲಕ್ಷ್ಮೀ ನಿವಾಸ ಚೆಲ್ವಿ ಅರ್ಥಾತ್​ ನಟಿ ಅಶ್ವಿನಿ ಆರ್. (ಅವರ ಹೆಸರು ಈಗ ಚೆರಿಕಾ ರಾಮಮೂರ್ತಿ) ಅವರು ಸೋಷಿಯಲ್​ ಮೀಡಿಯಾದಲ್ಲಿ ವೋಟ್​ ಮಾಡುವ ಅಭಿಮಾನಿಗಳಿಗೆ ಒಂದು ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಅವರು ಜನರಿಗೆ ಕಿವಿಮಾತನ್ನೂ ಹೇಳಿದ್ದಾರೆ.

37
ನಟಿ ಹೇಳಿದ್ದೇನು?

ಅವರು ಹೇಳಿದ್ದೇನೆಂದರೆ, ಬಿಗ್​ಬಾಸ್​ ವೀಕ್ಷಕರೇ, ಇದೋಂದು 100 + ದಿನಗಳ ಆಟ. ಈ ಆಟಕ್ಕೆ ಅವರಿಗೆ ವೋಟ್​ ಮಾಡಿ, ಇವರಿಗೆ ವೋಟ್​ ಮಾಡಿ ಎನ್ನುತ್ತಿರುವಿರಲ್ಲ. ಅದೇ ರೀತಿ ನಮ್ಮ ರಾಜ್ಯಕ್ಕಾಗಲಿ, ದೇಶಕ್ಕಾಗಲೀ ಇದೇ ಉತ್ಸಾಹದಿಂದ ಎಲ್ಲಾ ಚುನಾವಣೆಗಳಲ್ಲಿ ಯೋಗ್ಯರಿಗೆ ವೋಟ್​ ಮಾಡಿ ರಾಜ್ಯ, ದೇಶದ ಅಭಿವೃದ್ಧಿಯಾಗುವಂತೆ ಮಾಡಿ ಎಂದಿದ್ದಾರೆ.

47
ನಟಿಯ ಕುರಿತು

ಇನ್ನು ಅಶ್ವಿನಿ ಅವರ ಕುರಿತು ಹೇಳುವುದಾದರೆ, ಇವರು ಕನ್ನಡ ಮತ್ತು ತೆಲುಗು ಸೀರಿಯಲ್​ಗಳಲ್ಲಿ ನಟಿಸ್ತಿದ್ದಾರೆ. ಸ್ಟೈಲಿಷ್​ ಸುಂದರಿ ಇವರು. ಅಶ್ವಿನಿಯವರಿಗೆ ಲಕ್ಷ್ಮೀ ನಿವಾಸ ಏನು ಮೊದಲ ಸೀರಿಯಲ್ ಅಲ್ಲ, ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ಅಶ್ವಿನಿ ಮಿಂಚಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಅಕ್ಕ ಆಗಿ ಇವರು ನಟಿಸಿದ್ದರು, ಅಷ್ಟೇ ಅಲ್ಲ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲೂ ಅಶ್ವಿನಿ ನಟಿಸಿದ್ದರು.

57
ಚೆಲ್ವಿಯ ಚೆಲುವು

ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದರೂ ಅಶ್ವಿನಿಗೆ ಹೆಸರು ತಂದು ಕೊಟ್ಟಿದ್ದು ಸದ್ಯ ಅಭಿನಯಿಸುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa). ವೆಂಕಿ ಮತ್ತು ಚೆಲ್ವಿ ಜೋಡಿಯನ್ನು ನೋಡಲೆಂದೇ ಅಭಿಮಾನಿಗಳು ಕಾಯ್ತಿರ್ತಾರೆ. ಅಷ್ಟೊಂದು ಇಷ್ಟ ಪಡ್ತಾರೆ ವೀಕ್ಷಕರು ಈ ಪಾತ್ರಗಳನ್ನು.

67
ಬ್ಯುಸಿನೆಸ್ ವುಮೆನ್

ನಟಿಯಾಗೋಕೂ ಮುನ್ನ ಅಶ್ವಿನಿಯವರೊಬ್ಬ ಬ್ಯುಸಿನೆಸ್ ವುಮೆನ್ ಹೌದು. ಇವರೊಬ್ಬ ಕಾಸ್ಮಟಾಲಜಿಸ್ಟ್ (Cosmetologist). ಇವರು ತಮ್ಮದೇ ಆದ ಬ್ಯೂಟಿ ಸಲೂನ್ ಕೂಡ ಹೊಂದಿದ್ದಾರೆ. ರಾಜಾಜಿನಗರದಲ್ಲಿ ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ಮಾಲೀಕರು ಇವರು. ಹೇರ್, ಸ್ಕಿನ್, ನೈಲ್ ಆರ್ಟ್, ಮೇಕಪ್ ಎಲ್ಲವನ್ನೂ ಇಲ್ಲಿ ಮಾಡಿ ಕೊಡ್ತಾರೆ.

77
ಬ್ಯೂಟಿ ಸಲೂನ್

ಇನ್ನು ಇವರ ಬ್ಯೂಟಿ ಸಲೂನ್ (beauty salon) ಕೂಡ ಸಿಕ್ಕಾಪಟ್ಟೆ ಫೇಮಸ್. ಈಗಾಗಲೇ ಇವರ ಸಲೂನ್‌ಗೆ ನಟಿಯರಾದ ವಿಜಯಲಕ್ಷ್ಮೀ, ಸ್ವಾತಿ, ಅಭಿಜ್ಞಾ ಭಟ್, ರುಹಾನಿ ಶೆಟ್ಟಿ, ಪೂಜಾ ದುಗ್ಗಣ್ಣ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಭೇಟಿ ನೀಡಿ, ಸೇವೆ ಪಡೆದು ಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories