ರಕ್ಷಿತಾ ಶೆಟ್ಟಿ ನಿಷ್ಕಲ್ಮಶ ನಗುವಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಂಡ ಅಭಿಮಾನಿಗಳು

Published : Jan 15, 2026, 06:58 PM IST

Rakshitha Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಕೊನೆಯಾಗಲು ಇನ್ನೇನು ಬೆರಳೆಣಿಕೆ ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಸ್ಪರ್ಧಿಗಳ ಮೇಲಿನ ಕ್ರೇಜ್ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇದೀಗ ರಕ್ಷಿತಾ ಶೆಟ್ಟಿಯವರ ನಗುವನ್ನು ಫ್ಯಾನ್ಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಗುವಿಗೆ ಹೋಲಿಕೆ ಮಾಡಿದ್ದಾರೆ.

PREV
16
ಬಿಗ್ ಬಾಸ್ ಕನ್ನಡ ಸೀಸನ್ 12

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಈಗಾಗಲೇ 100 ದಿನ ಕಳೆದಿದ್ದು, ಇನ್ನೇನು ಗೆಲುವಿನ ಪಟ್ಟ ಪಡೆದುಕೊಳ್ಳಲು ಕೆಲವೇ ದಿನಗಳು ಬಾಕಿಯಿದೆ. ಬಿಗ್ ಬಾಸ್ ಮನೆಯೊಳಗೆ ಇದೀಗ ಟಾಪ್ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ, ಹೊರಗಡೆ ಅಭಿಮಾನಿಗಳಿಂದ ಪ್ರಚಾರ ಕಾರ್ಯ ಭಾರಿ ಜೋರಾಗಿಯೇ ನಡೆಯುತ್ತಿದೆ.

26
ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಈ ಬಾರಿ ಹೆಚ್ಚು ಗಮನ ಸೆಳೆದ ಸ್ಪರ್ಧಿ ಅಂದ್ರೆ ಅದು ಗಿಲ್ಲಿ ಮತ್ತು ರಕ್ಷಿತಾ ಶೆಟ್ಟಿ. ರಕ್ಷಿತಾ ಶೆಟ್ಟಿ ಆರಂಭದಲ್ಲಿ ತಮ್ಮ ವ್ಲೋಗ್ ನಿಂದಾಗಿ ನೆಗೆಟಿವ್ ಪ್ರಚಾರದಿಂದಲೇ ಮನೆಯೊಳಗೆ ಕಾಲಿಟ್ಟವರು, ಇದೀಗ ಕರ್ನಾಟಕ ಮಂದಿ ಮೆಚ್ಚಿಕೊಂಡಿರುವ ಸ್ಪರ್ಧಿಯಾಗಿ, ಮೋಸ್ಟ್ ಫೇವರಿಟ್ ಕಂಟೆಸ್ಟಂತ್ ಆಗಿ ಹೊರಹೊಮ್ಮಿದ್ದಾರೆ.

36
ರಕ್ಷಿತಾ ಮುಗ್ಧತೆ ಇಷ್ಟ

ಜನರು ರಕ್ಷಿತಾ ಮುಗ್ಧತೆಯನ್ನು, ಯಾವುದೇ ಕಪಟ ಇಲ್ಲದ ನೇರ ಮಾತುಗಳನ್ನು ಜನರು ಇಷ್ಟಪಟ್ಟಿದ್ದಾರೆ, ಜೊತೆಗೆ ಎಲ್ಲರೊಂದಿಗೆ ಬೆರೆಯುವ ರೀತಿ, ಜೀವನದ ಬಗ್ಗೆ ಹೇಳುವಂತಹ ಮಾತುಗಳು ವೀಕ್ಷಕರಲ್ಲಿ ಭಾರಿ ಕುತೂಹಲವನ್ನು ಮೂಡಿಸಿದೆ. ಹಾಗಾಗಿಯೇ ಜನರು ರಕ್ಷಿತಾ ಶೆಟ್ಟಿಯನ್ನು ತುಂಬಾನೆ ಇಷ್ಟಪಡುತ್ತಿದ್ದಾರೆ.

46
ಪುನೀತ್ ರಾಜಕುಮಾರ್ ಜೊತೆ ಹೋಲಿಕೆ

ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತಾ ಅವರ ನಗುವನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮುಗ್ಧ ನಗುವಿನೊಂದಿಗೆ ಹೋಲಿಕೆ ಮಾಡಿದ್ದು, ಇಬ್ಬರದು ಒಂದೇ ರೀತಿಯ ನಗು, ಆ ನಗುವಿನಲ್ಲಿ ಯಾವುದೇ ಕಪಟ, ಮೋಸ ಇಲ್ಲ. ಇಂತಹ ನಿಷ್ಕಲ್ಮಶ ನಗು ನೋಡೋಕೆ ಸಿಗುವುದೇ ಅಪರೂಪ ಎಂದು ಹೇಳಿದ್ದಾರೆ.

56
ಅಪ್ಪುವಿನಂತೆ ಸಮಾಜ ಸೇವೆ ಮಾಡಿ

ಹೆಚ್ಚಿನ ಅಭಿಮಾನಿಗಳು ರಕ್ಷಿತಾಗೆ ನಿಮ್ಮ ನಗು ಅಪ್ಪುವಿನಂತೆ ಇದೆ, ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನೀವು ಅವರಂತೆ ಸಮಾಜ ಸೇವೆ ಮಾಡಿ ಎಂದಿದ್ದಾರೆ. ಇನ್ನು ಕೆಲವರು ರಕ್ಷಿತಾ ಈಗಾಗಲೇ ಜನ ಸೇವೆ ಮಾಡುತ್ತಾ ಬಂದಿದ್ದಾರೆ. ಅವರು ಬೆಸ್ಟ್ ಈ ಸಲ ವಿನ್ನರ್ ಅವರೇ ಅನ್ನುತ್ತಿದ್ದಾರೆ.

66
ಏನಂದ್ರು ಅಭಿಮಾನಿಗಳು

ರಕ್ಷಿತಾ ಅನ್ನೋದು ಬರೀ ಒಂದು ಹೆಸರಲ್ಲ ಅದು ಸ್ವಾಭಿಮಾನದ ಪ್ರತಿಬಿಂಬ... ಬಿಗ್ ಬಾಸ್ ಮನೆಯ ರಾಜಕುಮಾರಿ.. ಬ್ಲಾಗಿಂಗ್ ನಲ್ಲೇ ಸಾಧನೆ ಮಾಡಿ, ಕನ್ನಡ ಕಲಿತು ಕರ್ನಾಟಕದ ಜನರ ಮನಸ್ಸನ್ನ ಸೂರೆಗೈದ ಬಿಗ್ ಬಾಸ್ ಮನೆಯ ಏಕೈಕ ಮಹಿಳಾ ಸ್ಪರ್ಧಿ ರಕ್ಷಿತಾ. ಈ ಬಾಗಿ ಬಿಗ್ ಬಾಸ್ ಮನೆಯಲ್ಲಿ ಆಕೆಯೇ ವಿನ್ನರ್ ಆಗಿ ಹೊರಹೊಮ್ಮಲಿ ಎಂದು ಹಾರೈಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories