ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಪದ್ಮಾಪತಿ ಧಾರಾವಾಹಿಯ ತುಳಸಿ ನೆನಪಿದೆಯೇ? ಆ ಪಾತ್ರಕ್ಕೆ ಜೀವ ತುಂಬಿದ ನಟಿ ದೀಪ್ತಿ ಮಾನೆ ಇದೀಗ ಹಸೆಮಣೆ ಏರಲು ತಯಾರಿ ನಡೆಸಿದ್ದು, ಭಾವಿ ಪತಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿ YES, I’m IN LOVE ಎಂದಿದ್ದಾರೆ ನಟಿ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಪದ್ಮಾಪತಿ(Padmavathi serial). ಐತಿಹಾಸಿಕ ಮತ್ತು ಪ್ರಸ್ತುತ ಕಾಲಘಟ್ಟದ ಕಥೆಯನ್ನು ಸೇರಿಸಿ ಮಾಡಿದಂತಹ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ಪದ್ಮಾವತಿ ಮತ್ತು ತುಳಸಿ ಪಾತ್ರಕ್ಕೆ ಜೀವ ತುಂಬಿದವರು ನಟಿ ದೀಪ್ತಿ ಮಾನೆ.
27
ದೀಪ್ತಿ ಮಾನೆ
ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರ ಮತ್ತು ತುಳಸಿ ಮತ್ತು ಸಾಮ್ರಾಟ್ ಜೋಡಿ ಎಲ್ಲವನ್ನು ಜನರು ಇಷ್ಟಪಟ್ಟಿದ್ದರು. ಈ ಧಾರಾವಾಹಿಯಲ್ಲಿ ನಾಯಕನಾಗಿ ಸದ್ಯ ಮುದ್ದು ಸೊಸೆ ನಾಯಕನಾಗಿರುವ ತ್ರಿವಿಕ್ರಮ್ (Trivikram) ಅಭಿನಯಿಸಿದ್ದರು.
37
ತೆಲುಗು ಕಿರುತೆರೆಯಲ್ಲಿ ಬ್ಯುಸಿ
ಕನ್ನಡದಲ್ಲಿ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದ ದೀಪ್ತಿ ಮಾನೆ (Deepthi Manne), ನಂತರ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟು, ಅಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ತೆಲುಗಿನಲ್ಲಿ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಸದ್ಯ ಶುಭ ಸುದ್ದಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ದೀಪ್ತಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಂಗಾತಿ ಜೊತೆಗಿನ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದು, And YES, I’m IN LOVE ಎಂದು ಬರೆದುಕೊಂಡಿದ್ದಾರೆ. ಹುಡುಗನ ಮುಖ ರಿವೀಲ್ ಮಾಡದೆ ಕೈ ಕೈ ಹಿಡಿದಿರುವ ಒಂದಷ್ಟು ಫೋಟೊಗಳನ್ನು ಮಾತ್ರ ಶೇರ್ ಮಾಡಿದ್ದಾರೆ ದೀಪ್ತಿ.
57
ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ ನಟಿ
ದೀಪ್ತಿ ಮಾನೆ ಇಲ್ಲಿವರೆಗೂ ತಮ್ಮ ಪ್ರೀತಿಯ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ದಿಢೀರ್ ಆಗಿ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ನಟಿ ಶೀಘ್ರದಲ್ಲೆ ಹಸೆಮಣೆ ಏರಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಮದುವೆ ಯಾವಾಗ? ಎಲ್ಲಿ? ಹುಡುಗ ಯಾರು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
67
ಫ್ಯಾಷನ್ ಡಿಸೈನರ್ ಆಗಿರುವ ದೀಪ್ತಿ
ಮೂಲತಃ ದಾವಣಗೆರೆಯವರಾದ ದೀಪ್ತಿ, ಬೆಂಗಳೂರಿನ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಡಿಗ್ರಿ ಪಡೆದರು. ಬಳಿಕ ನಟನೆಯಲ್ಲಿ ಆಸಕ್ತಿ ಮೂಡಿದ್ದರಿಂದ ಆಡಿಶನ್ ಕೊಡಲು ಆರಂಭಿಸಿದರು. ಇವರು ನಟಿಸಿದ ಮೊದಲ ಸಿನಿಮಾ ತಮಿಳಿನ ಎವನ್. ನಂತರ ಕನ್ನಡ, ತೆಲುಗು ಸಿನಿಮಾಗಳಲ್ಲೂ ಅವಕಾಶ ಪಡೆದುಕೊಂಡರು.
77
ನಟಿಸಿದ ಸಿನಿಮಾಗಳು
'ನಮ್ಮೂರ ಹೈಕ್ಳು' ಕನ್ನಡ ಸಿನಿಮಾದ ಜೊತೆಗೆ ತೆಲುಗಿನ 'ಇಕ್ ಸೇ ಲವ್ ' ಹಾಗೂ ತಮಿಳಿನ 'ದೇವದಾಸ್ ಬ್ರದರ್ಸ್' ಸಿನಿಮಾದಲ್ಲಿ ಅಭಿನಯಿಸಿದರು. ನಂತರ ಕಿರುತೆರೆಗೆ ಕಾಲಿಟ್ಟ ದೀಪ್ತಿ ಮೊದಲಿಗೆ ಪದ್ಮಾವತಿ ಧಾರಾವಾಹಿಯಲ್ಲಿ ನಟಿಸಿದರ. ಬಳಿಕ ತೆಲುಗು ಇಂಡಷ್ಟ್ರಿಗೆ ಕಾಲಿಟ್ಟ ನಟಿ, ರಾಧಮ್ಮ ಕೂತುರು, ಜಗಧಾತ್ರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.