Naa Ninna Bidalaare: ಅಪ್ಪ-ಮಗಳು ಒಂದಾಗ್ತಿದ್ದಂತೆಯೇ ಟ್ವಿಸ್ಟೋ ಟ್ವಿಸ್ಟ್​! ದೃಷ್ಟಿ ತೆಗೆದ ನೆಟ್ಟಿಗರು

Published : Oct 04, 2025, 11:41 AM IST

'ನಾನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ತಾಯಿಯ ಸಾವಿಗೆ ಅಪ್ಪನೇ ಕಾರಣ ಎಂದು ದ್ವೇಷಿಸುತ್ತಿದ್ದ ಮಗಳು ಹಿತಾ, ಇದೀಗ ದುರ್ಗಾಳ ತಂತ್ರದಿಂದಾಗಿ ಅಪ್ಪ ಶರತ್‌ನನ್ನು ಸೇರಿಕೊಂಡಿದ್ದಾಳೆ. ಇಂತಿಪ್ಪ ಅಪ್ಪ-ಮಗಳು ಈಗ ಜೀ ಕುಟುಂಬ ಅವಾರ್ಡ್​ನಲ್ಲಿ ಹೇಗೆ ಕ್ಯಾಟ್​ವಾಕ್​ ಮಾಡಿದ್ದಾರೆ ನೋಡಿ… 

PREV
16
ಅಪ್ಪ-ಮಗಳ ಮಿಲನ

ಸದ್ಯ ನಾನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ನಲ್ಲಿ ವೀಕ್ಷಕರು ಬಹಳ ತಿಂಗಳುಗಳಿಂದ ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿದೆ. ತನ್ನ ಅಮ್ಮನ ಸಾವಿಗೆ ಅಪ್ಪನೇ ಕಾರಣ ಎಂದುಕೊಂಡಿದ್ದ ಹಿತಾ ಅಪ್ಪನನ್ನು ದ್ವೇಷಿಸುತ್ತಿದ್ದಳು. ಆದರೆ ಇದೀಗ ದುರ್ಗಾಳ ದೆಸೆಯಿಂದಾಗಿ ಅಪ್ಪ-ಮಗಳು ಒಂದಾಗಿದ್ದಾರೆ.

26
ಒಂದು ಮಾಡಿದ ದುರ್ಗಾ

ಅವರನ್ನು ಒಂದು ಮಾಡಬಾರದು ಎಂದುಕೊಂಡಿದ್ದ ಮಾಯಾ ಪ್ಲ್ಯಾನ್​ ಬುಡಮೇಲಾಗಿದೆ. ದುರ್ಗಾಳಿಗೆ ತನ್ನ ಅಮ್ಮ ಕಾಣಿಸುತ್ತಾಳೆ ಎಂದುಕೊಂಡಿದ್ದಾಳೆ ಹಿತಾ. ಅದನ್ನೇ ಬಂಡವಾಳ ಮಾಡಿಕೊಂಡಿರೋ ದುರ್ಗಾ ಅಪ್ಪ-ಮಗಳನ್ನು ಒಂದು ಮಾಡಿದ್ದಾಳೆ. ನಿನಗೆ ಅಮ್ಮ ಕಾಣಿಸ್ತಾಳಲ್ವಾ ಹಾಗಿದ್ರೆ ಅಮ್ಮ ಈಗ ಏನು ಹೇಳಿದಳು ಅಮ್ಮ ಎಂದು ಹಿತಾ ದುರ್ಗಾಗೆ ಕೇಳಿದಾಗ, ಅಪ್ಪ-ಮಗಳನ್ನು ಒಂದು ಮಾಡಲು ಇದೇ ಒಳ್ಳೆಯ ಟೈಮ್​ ಎಂದುಕೊಂಡ ದುರ್ಗಾ, ನಿನ್ನ ಅಪ್ಪ ನಿನಗೆ ಹುಟ್ಟುಹಬ್ಬದ ಗಿಫ್ಟ್​ ಕೊಡಲು ಕಾಯುತ್ತಿದ್ದು, ಅದನ್ನು ತೆಗೆದುಕೊಳ್ಳುವಂತೆ ಅಮ್ಮ ಹೇಳಿದ್ದಾಳೆ ಎನ್ನುತ್ತಾಳೆ.

36
ಹಿತಾಳಿಗೆ ಅಪ್ಪನ ಗಿಫ್ಟ್​

ಇದನ್ನು ಕೇಳಿ ಹಿತಾಗೆ ಖುಷಿಯಾಗುತ್ತದೆ. ಓಡೋಡಿ ಅಪ್ಪನ ಬಳಿ ಬರುತ್ತಾಳೆ. ಹುಟ್ಟುಹಬ್ಬಕ್ಕೆ ತಂದ ಕಾಲ್ಗೆಜ್ಜೆಯನ್ನು ಅವಳಿಗೆ ಹೇಗೆ ಕೊಡುವುದು ಎಂದು ಶರತ್​ ಚಿಂತಾಕ್ರಾಂತನಾಗಿ ಕುಳಿತಿರುತ್ತಾನೆ. ಆಗ ಅಲ್ಲಿಗೆ ಬಂದ ಹಿತಾ, ಒಂದು ಕಥೆಯನ್ನು ಹೇಳುತ್ತಾ, ಗಿಫ್ಟ್​ ಕೊಡುವಂತೆ ಹೇಳಿದಾಗ ಶರತ್​ಗೆ ಆಶ್ಚರ್ಯ ಖುಷಿ ಎಲ್ಲವೂ ಆಗುತ್ತದೆ. ಕೊನೆಗೆ ತನ್ನ ಮಗಳಿಗೆ ತಾನು ತಂದ ಗೆಜ್ಜೆಯನ್ನು ತೊಡಿಸಿದಾಗ ಹಿತಾಳಿಗೆ ಇನ್ನಿಲ್ಲದ ಖುಷಿ. ಅಲ್ಲಿಗೆ ದುರ್ಗಾಳ ಪ್ಲ್ಯಾನ್​ ಸಕ್ಸಸ್​ ಆಗಿದ್ದು, ಅಪ್ಪ-ಮಗಳನ್ನು ಸದಾ ದೂರ ಮಾಡಲು ಹೊಂಚು ಹಾಕ್ತಿರೋ ಮಾಯಾ ಪ್ಲ್ಯಾನ್​ ಠುಸ್​ ಆಗುತ್ತದೆ.

46
ಅವಾರ್ಡ್​ ಫಂಕ್ಷನ್​ನಲ್ಲಿ ಅಪ್ಪ-ಮಗಳು

ಇದು ಸೀರಿಯಲ್​ ಸ್ಟೋರಿಯಾದ್ರೆ ಇತ್ತ ಈ ಸೀರಿಯಲ್​ ಅಪ್ಪ-ಮಗಳು ಜೀ ಕುಟುಂಬ ಅವಾರ್ಡ್​ ಫಂಕ್ಷನ್​ನಲ್ಲಿ ಕ್ಯಾಟ್​ವಾಕ್​ ಮಾಡಿದ್ದಾರೆ. ಇಬ್ಬರೂ rampನಲ್ಲಿ ಹೆಜ್ಜೆ ಹಾಕಿದ್ದಾರೆ. ಇವರ ಕ್ಯೂಟ್​ ಜೋಡಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಅಪ್ಪ-ಮಗಳಿಗೆ ಯಾರ ಕಣ್ಣೂ ಬೀಳದಿರಲಪ್ಪಾ ಎನ್ನುತ್ತಿದ್ದಾರೆ.

56
ಸೀರಿಯಲ್​ ಸ್ಟೋರಿ ಹೀಗಿದೆ

ಇನ್ನು ನಾನಿನ್ನ ಬಿಡಲಾರೆ ಸೀರಿಯಲ್ ವಿಷ್ಯಕ್ಕೆ ಬರುವುದಾದರೆ, ಪಾರು ಸೀರಿಯಲ್‌ ಮೂಲಕ ಮನೆಮಾತಾಗಿದ್ದ ಶರತ್ ಪದ್ಮನಾಭ್ ಶರತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ನೀತಾ ಅಶೋಕ್, ಹಿತಾ ಅಮ್ಮ ಅಂಬಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ದುರ್ಗಾಗಳಾಗಿ ರಿಷಿಕಾ ಕಾಣಿಸಿಕೊಂಡಿದ್ದಾರೆ. ರುಹಾನಿ ಶೆಟ್ಟಿ ಈ ಸೀರಿಯಲ್‌ನ ಖಳನಾಯಕಿ. ಉಳಿದಂತೆ ಕುಟುಂಬದ ಯಜಮಾನಿಯ ಪಾತ್ರದಲ್ಲಿ ವೀಣಾ ಸುಂದರ್ ಕಾಣಿಸಿಕೊಂಡಿದ್ದು, ಅವರದ್ದು ಕೂಡ ನೆಗೆಟಿವ್ ರೋಲ್. ರಂಗಭೂಮಿ ಕಲಾವಿದ ಹಾಗೂ ನಟ ಬಾಬು ಹಿರಣ್ಯ ಕೂಡ ಪ್ರಮುಖ ನಟಿಸಿದ್ದಾರೆ.

66
ಹಿತಾ ಪುಟ್ಟಿ ಕುರಿತು

ಪುಟಾಣಿ ಹಿತಾ ಪಾತ್ರ ಮಾಡ್ತಿರೋ ಬಾಲೆ ಮಹಿತಾ. ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾಳಿಗೆ ಇದೀಗ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories