Pregnancy in Serials : ಮದ್ವೆಗೂ ಮುನ್ನವೇ ಗರ್ಭಿಣಿಯಾದ ಕನ್ನಡ ಸೀರಿಯಲ್​ ನಾಯಕಿಯರು ಇವ್ರು! ಛೇ ಯಾಕೆ ಹೀಗೆ?

Published : Dec 13, 2025, 05:22 PM IST

ಇತ್ತೀಚಿನ ಕನ್ನಡ ಧಾರಾವಾಹಿಗಳಲ್ಲಿ ನಾಯಕಿಯರು ಮದುವೆಗೂ ಮುನ್ನ ಗರ್ಭಿಣಿಯಾಗುವ ಟ್ರೆಂಡ್ ಹೆಚ್ಚಾಗುತ್ತಿದೆ. ಕರ್ಣ, ಅಮೃತಧಾರೆ, ಮತ್ತು ಮೈನಾದಂತಹ ಸೀರಿಯಲ್‌ಗಳಲ್ಲಿ ಈ ಕಥಾವಸ್ತುವು ರೋಚಕತೆ ಮೂಡಿಸಿದರೂ, ಇದನ್ನು ಅನುಸರಿಸುವ ಸಮಾಜದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತವಾಗಿದೆ.

PREV
19
ಇದೇನಿದು ಟ್ರೆಂಡ್​?

ಮದುವೆಗೂ ಮುನ್ನವೇ ಗರ್ಭಿಣಿ ಆಗೋದಾ? ಕಾರಣ ನೂರೆಂಟು ಇರಬಹುದು. ಆದರೆ ಇಂದಿಗೂ ನಮ್ಮ ಸಮಾಜ ಒಪ್ಪದ ವಿಷಯಗಳಲ್ಲಿ ಇದೂ ಒಂದು. ವಯಸ್ಸಿನ ಮೋಹದಿಂದಲೋ, ಮದುವೆಯಾಗುತ್ತಾನೆ ಎನ್ನುವ ನಂಬಿಕೆಯಿಂದಲೋ ಅಥವಾ ಕೆಲವೊಮ್ಮೆ ಮೋಸದಿಂದಲೋ... ಹೀಗೆ ಕಾರಣ ಏನೇ ಇದ್ದರೂ ಅದರ ನೋವು ಅನುಭವಿಸುವವಳು ಮಾತ್ರ ಹೆಣ್ಣು ಎನ್ನುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಹೆಣ್ಣು ಮೈಯೆಲ್ಲಾ ಕಣ್ಣಾಗಿರಬೇಕು ಎನ್ನುತ್ತಾರೆ ಹಿರಿಯರು.

29
ಮದ್ವೆಗೂ ಮುಂಚೆಯೇ ಗರ್ಭಿಣಿ

ಆದರೆ ಸೀರಿಯಲ್​ಗಳನ್ನೇ ನೆಚ್ಚಿಕೊಂಡು, ಅದನ್ನೇ ಸರ್ವಸ್ವ ಎಂದುಕೊಂಡು, ಅದರಲ್ಲಿ ಬರುವುದನ್ನೇ ಅನುಸರಿಸಿಕೊಂಡು ಹೋಗುವ ದೊಡ್ಡ ವರ್ಗವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿವಿಧ ಚಾನೆಲ್​ಗಳಲ್ಲಿ ಬರುವ ಸೀರಿಯಲ್​ಗಳಲ್ಲಿ ನಾಯಕರಿಗೇ ಮದುವೆಗೂ ಮುನ್ನ ಗರ್ಭಿಣಿಯಾಗ್ತಿರೋ ಟ್ರೆಂಡ್​ ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಸೀರಿಯಲ್​ಗಳಲ್ಲಿ ಇದು ರೋಚಕತೆ ಎನ್ನಿಸಿದರೂ ಅದನ್ನೇ ಫಾಲೋ ಮಾಡುವ ಜನರ ಗತಿ?

39
ಕರ್ಣ ಸೀರಿಯಲ್​ ನಿತ್ಯಾ

ಟಿಆರ್​ಪಿಯಲ್ಲಿ ಟಾಪ್​ ಇರೋ ಜೀ ಕನ್ನಡದ ಕರ್ಣ ಸೀರಿಯಲ್​ (Karna Serial) ಅನ್ನೇ ತೆಗೆದುಕೊಳ್ಳಿ. ಸದ್ಯ ನಿತ್ಯಾ ಗರ್ಭಿಣಿಯಾಗಿದ್ದಾಳೆ. ಇವಳು ಗರ್ಭಿಣಿಯಾಗಿರುವುದು ಲವರ್​ ತೇಜಸ್​ನಿಂದಾಗಿ. ಆದರೆ ಆತ ಕಿಡ್​ನ್ಯಾಪ್​ ಆಗಿರೋ ಕಾರಣ, ಅನಿವಾರ್ಯವಾಗಿ ಕರ್ಣನನ್ನು ಮದುವೆಯಾಗುವ ನಾಟಕವಾಡಿದ್ದಾಳೆ. ಕರ್ಣ ಸದ್ಯ ಆ ಮಗುವಿಗೆ ತಾನೇ ಅಪ್ಪ ಆಗುತ್ತೇನೆ ಎನ್ನುತ್ತಿದ್ದಾನೆ.

49
ಶ್ರಾವಣಿ ಸುಬ್ರಹ್ಮಣ್ಯದ ಸಾವಿತ್ರಿ

ಇನ್ನು, ಜೀ ಕನ್ನಡದ್ದೇ ಆಗಿರುವ ಶ್ರಾವಣಿ ಸುಬ್ರಹ್ಮಣ್ಯದಲ್ಲಿ (Shravani Subramanya) ನಾಯಕಿ ಅಲ್ಲದಿದ್ದರೂ ಸಾವಿತ್ರಿ ಗರ್ಭಿಣಿಯಾಗಿದ್ದಾಳೆ. ಮಾಲೀಕನ ಮಗನನ್ನೇ ನಂಬಿ ಮೋಸ ಹೋಗಿದ್ದಾಳೆ. ಅವನ ಬಣ್ಣ ಬಣ್ಣದ ಮಾತುಗಳನ್ನು ಕೇಳಿ ಮೈ ಕೊಟ್ಟುಬಿಟ್ಟಿದ್ದಾಳೆ. ಇನ್ನೇನು ಅವನು ಕೈಕೊಟ್ಟು ಹೋಗುತ್ತಾನೆ ಎಂದು ತಿಳಿದಾಗ ಶ್ರಾವಣಿ, ಅವನ ಜೊತೆನೇ ಮದುವೆ ಮಾಡಿಸಿದ್ದಾಳೆ. ಮದುವೆಯೇನೋ ಆಗಿದೆ. ಆದರೆ ಒಲ್ಲದ ಮದುವೆಯಿಂದ ಸಾವಿತ್ರಿಯ ಬಾಳು ಹೇಳತೀರದು.

59
ಅಮೃತಧಾರೆ ಮಲ್ಲಿ

ಬಹುತೇಕ ಮಂದಿಯ ನೆಚ್ಚಿನ ಅಮೃತಧಾರೆ (Amruthadhaare) ಸೀರಿಯಲ್​ನಲ್ಲಿಯೂ ಅದೇ ಕಥೆ. ಜೈದೇವನ ಮಾತಿಗೆ ಮನಸೋತು ಮಲ್ಲಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಳು. ಭೂಮಿಕಾ ನೆರವಿನಿಂದ ಜೈದೇವನನ್ನು ಮದುವೆಯಾದರೂ ಅವನ ಮೋಸದಾಟಕ್ಕೆ ಬಲಿಯಾಗಿ ಮಗುವನ್ನು ಕಳೆದುಕೊಂಡಳು. ಈಗ ಗಂಡನಿಂದಲೂ ದೂರವಾಗಿದ್ದಾಳೆ.

69
ಮೈನಾದಲ್ಲೂ ಅದೇ ಕಥೆ

ಇನ್ನು ಉದಯ ಟಿವಿಯ ವಿಷಯಕ್ಕೆ ಬರುವುದಾದರೆ ಮೈನಾ ಸೀರಿಯಲ್​ನಲ್ಲಿ ಮೈನಾಳ ಮೇಲೆ ಫಂಕ್ಷನ್​ ಒಂದರಲ್ಲಿ ನಡೆದ ಮೋಸದಿಂದ ಆಕೆ ಗರ್ಭ ಧರಿಸಿದ್ದಾಳೆ. ಆದರೆ ಆತ ಯಾರು ಎನ್ನುವುದು ತಿಳಿಯದೇ ಅವಳ ಸ್ಥಿತಿ ಅಲ್ಲೋಲ ಕಲ್ಲೋಲ ಆಗಿವೆ.

79
ಸಿಂಧು ಭೈರವಿ

ಅದೇ ಚಾನೆಲ್​ನ ಸಿಂಧು ಭೈರವಿ ಸೀರಿಯಲ್​ನಲ್ಲಿ ಕೂಡ ಲವರ್​ನಿಂದ ನಾಯಕಿ ಮದುವೆಗೂ ಮುನ್ನವೇ ಗರ್ಭ ಧರಿಸಿದ್ದಾಳೆ. ಕೊನೆಗೆ ಹಲವಾರು ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಮದುವೆಯಾಗಿದ್ದಾಳೆ. ಸಾಯುವ ಹಂತಕ್ಕೂ ಹೋಗಿದ್ದ ಈಕೆ ಕೊನೆಗೂ ಮದುವೆಯಾಗಿರುವುದೇ ಸಮಾಧಾನ ಸಂಗತಿ.

89
ಚಿಕ್ಕ ಯಜಮಾನಿ ಸೀರಿಯಲ್​

ಅದೇ ರೀತಿ ಚಿಕ್ಕ ಯಜಮಾನಿ ಸೀರಿಯಲ್​ನಲ್ಲಿ ಕೂಡ ನಾಯಕಿ ಕಾವೇರಿ ಲವರ್ ಮಾಡಿರುವ ಮೋಸದಿಂದ ಪ್ರೆಗ್ನೆಂಟ್​ ಆಗಿದ್ದಾಳೆ. ಆದರೆ ಪರಿಸ್ಥಿತಿಯ ಬೇರೆಯದ್ದೇ ಆಗಿದೆ ಇಲ್ಲಿ. ಪ್ರೆಗ್ನೆಂಟ್​ ಆಗಿದ್ದೇ ಒಬ್ಬನಿಂದ, ಕೊನೆಗೆ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ದೊಡ್ಡವನ ಜೊತೆ ಮದುವೆಯಾಗುವ ಅನಿವಾರ್ಯತೆ ಎದುರಾಗಿದೆ. ಗರ್ಭಪಾತವೂ ಆಗಿದೆ.

99
ಜನರಲ್ಲಿ ಆತಂಕ

ಹೀಗೆ ಲಿಸ್ಟ್​ ಮುಂದುವರೆಯುತ್ತದೆ. ಇದೇ ರೀತಿ ತೋರಿಸುತ್ತಾ ಬಂದರೆ, ಅದನ್ನೇ ನೋಡುವ ಜನರಮನಸ್ಸಿನಲ್ಲಿ ಎಂಥ ಭಾವನೆ ಮೂಡಬಹುದು ಎನ್ನುವ ಆತಂಕ ಕೂಡ ಕೇಳಿಬರುತ್ತಿದೆ.

Read more Photos on
click me!

Recommended Stories