Karna Serial Today Episode Update: ಕರ್ಣ ಧಾರಾವಾಹಿಯಲ್ಲಿ ಸಂಜಯ್‌ಗೆ ನಿಧಿ ಕಂಡರೆ ಆಗೋದಿಲ್ಲ. ಹೀಗಾಗಿ ಅವನು ಈ ಬಾರಿ ಅವಳ ಮರ್ಯಾದೆ ತೆಗೆಯೋ ಕೆಲಸ ಮಾಡಿದ್ದಾನೆ. ಆದರೆ ಕರ್ಣ ಸುಮ್ಮನೆ ಬಿಡಬೇಕಲ್ವಾ? ಬಿಡೋದಿಲ್ಲ. ಕರ್ಣ ಈಗ ಸಿಡಿದೆದ್ದಿದ್ದಾನೆ, ಅವನಿಂದ ಸಂಜಯ್ ಬಚಾವ್ ಆಗಬೇಕಿದೆ.
ನಿಧಿ ಮನೆ ಸುಟ್ಟು ಹೋಗಿದೆ. ಹೀಗಾಗಿ ಅವಳು ಕರ್ಣನ ಮನೆಯಲ್ಲಿದ್ದಾಳೆ. ಕರ್ಣನ ಮನೆಯವರು ಅಜ್ಜಿಗೆ ಹಾಗೂ ನಿಧಿಗೆ ಮನಸ್ಸಿಗೆ ಬಂದಂತೆ ಅವಮಾನ ಮಾಡುತ್ತಿದ್ದಾರೆ. ಈಗ ನಿಧಿ ಪಾರ್ಟ್ ಟೈಮ್ ಜಾಬ್ ಎನ್ನೋ ಥರ ಮೋಟರ್‌ಸೈಕಲ್ ಟ್ಯಾಕ್ಸಿ ಓಡಿಸಲು ಯೋಚನೆ ಮಾಡಿದಳು. ಇದನ್ನೇ ಸಂಜಯ್ ಪ್ರಯೋಜನ ಪಡೆದುಕೊಂಡನು.
25
ಪೊಲೀಸರ ಎಂಟ್ರಿ ಆಯ್ತು
ಕಣ್ಣಿಲ್ಲದ ಹುಡುಗಿಯೊಬ್ಬಳು ನಿಧಿ ಬಳಿ ಬಂದು ಡ್ರಾಪ್ ಮಾಡಲು ಹೇಳಿದಳು. ನಿಧಿ ಅವಳನ್ನು ಸರಿಯಾದ ಅಡ್ರೆಸ್‌ಗೆ ಡ್ರಾಪ್ ಮಾಡಿದಳು. ಆದರೆ ಆ ಹುಡುಗಿ ನಿಧಿಯನ್ನು ಮನೆಯೊಳಗಡೆ ಕರೆದುಕೊಂಡು ಹೋಗಲು ನೋಡಿದಳು. ಅಲ್ಲಿ ಪೊಲೀಸರ ಎಂಟ್ರಿ ಆಯ್ತು, ಆ ಹುಡುಗಿಗೆ ಕಣ್ಣಿದೆ, ಇದೆಲ್ಲ ನಾಟಕ ಎನ್ನೋದು ಗೊತ್ತಾಯ್ತು.
35
ಊರೂರು ತಿರುಗಿದ ಕರ್ಣ
ವೇಶ್ಯಾವಾಟಿಕೆ ಎಂದು ನಿಧಿಯನ್ನು ಪೊಲೀಸರು ಕರೆದುಕೊಂಡು ಹೋದರು. ನಿಧಿ ಮನೆಗೆ ಬಂದಿಲ್ಲ ಎಂದು ಕರ್ಣ ಇಡೀ ಊರು ತಿರುಗಾಡಿದ್ದಾನೆ, ಪೊಲೀಸ್ ಸ್ಟೇಶನ್‌ಗೆ ಬಂದು ಕಂಪ್ಲೆಂಟ್ ಕೊಡೋಕೆ ನೋಡಿದರೂ ಕೂಡ ಪ್ರಯೋಜನ ಆಗಿಲ್ಲ. ಬೆಳಗ್ಗೆ ನಿಧಿಯನ್ನು ಪೊಲೀಸರು ಮನೆಗೆ ಕಳಿಸಿದ್ದಾರೆ.
ನನ್ನ ಬಗ್ಗೆ ತಪ್ಪು ತಿಳಿದುಕೊಂಡು, ಈ ರೀತಿ ಅವಮಾನ ಮಾಡಿದ್ದಾರೆ ಎಂದು ನಿಧಿ ಬೇಸರ ಮಾಡಿಕೊಂಡಿದ್ದಳು. ಈ ಬಗ್ಗೆ ಏನೂ ತಿಳಿಯದ ಕರ್ಣ ಕೂಡ ಅಲ್ಲಿಗೆ ಬಂದನು. ಆಮೇಲೆ ಕರ್ಣನನ್ನು ನೋಡಿ ತಬ್ಬಿಕೊಂಡು ಅತ್ತ ನಿಧಿ, ಎಲ್ಲ ವಿಷಯವನ್ನು ಹೇಳಿದ್ದಾಳೆ. ಸಂಜಯ್ ಮೊದಲ ಬಾರಿಗೆ ಈ ರೀತಿ ಮಾಡಿಲ್ಲ, ಈ ಹಿಂದೆಯೂ ತಪ್ಪಾಗಿ ಇಂಜೆಕ್ಷನ್ ಕೊಟ್ಟು, ಅದನ್ನು ನಿಧಿ ತಲೆಗೆ ಹಾಕಿ ಕಾಲೇಜಿನಿಂದ ಸಸ್ಪೆಂಡ್ ಆಗೋ ಥರ ಮಾಡಿದ್ದನು.
55
ಸಂಜಯ್‌ಗೆ ಬಿತ್ತು ಧರ್ಮದೇಟು
ಈ ಬಾರಿ ಸಂಜಯ್ ಮಾಡಿರೋ ಕೆಲಸ ಎಂದು ಗೊತ್ತಾದ ಬಳಿಕ ಕರ್ಣ, ಈಗ ಅವನಿಗೆ ಬಾಕ್ಸಿಂಗ್ ಗ್ಲೋಸ್ ಹಾಕಿಕೊಂಡು ಹೊಡೆದಿದ್ದಾನೆ. ಸಂಜಯ್ ಪುನಃ ಕರ್ಣನಿಗೆ ಹೊಡೆದರೂ ಪ್ರಯೋಜವಿಲ್ಲದಂತಾಗಿದೆ. ಈಗ ನನ್ನ ಜೊತೆ ಕರ್ಣ ಇದ್ದಾನೆ ಎಂದು ನಿಧಿ, ಸಂಜಯ್ ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾಳೆ. ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.