ಕಲರ್ಸ್ ಕನ್ನಡದ ಮತ್ತೊಂದು ಸೀರಿಯಲ್ ಶೀಘ್ರದಲ್ಲಿ ಮುಕ್ತಾಯ! ರಾಮಾಚಾರಿ ಅಲ್ಲ!

Published : Apr 24, 2025, 12:29 PM ISTUpdated : Apr 24, 2025, 12:51 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ಇತ್ತಿಚೆಗಷ್ಟೇ ಪ್ರಸಾರ ಆರಂಭಿಸಿದ ಒಂದು ಧಾರಾವಾಹಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.   

PREV
18
ಕಲರ್ಸ್ ಕನ್ನಡದ ಮತ್ತೊಂದು ಸೀರಿಯಲ್ ಶೀಘ್ರದಲ್ಲಿ ಮುಕ್ತಾಯ! ರಾಮಾಚಾರಿ ಅಲ್ಲ!

ಕಲರ್ಸ್ ಕನ್ನಡ (Colors Kannada) ಹೊಸ ಹೊಸ ಧಾರಾವಾಹಿಗಳನ್ನು ನೀಡಿ, ವೀಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿವರೆಗೆ ಹಲವಾರು ರಿಮೇಕ್ ಅಲ್ಲದೇ, ಹೊಸ ಕಥೆಯನ್ನು ಹೊಂದಿದ ಸೀರಿಯಲ್ ಗಳನ್ನು ಕಲರ್ಸ್ ಕನ್ನಡ ನೀಡಿದೆ. 
 

28

ಕಲರ್ಸ್ ಕನ್ನಡದಲ್ಲಿ ಹಲವು ಧಾರಾವಾಹಿಗಳು (serials) 5 ವರ್ಷಕ್ಕಿಂತ ಹೆಚ್ಚಿನ ಅವಧಿವರೆಗೂ ಪ್ರಸಾರವಾದದ್ದು ಇದೆ, ಇನ್ನೂ ಕೆಲವು ಧಾರಾವಾಹಿಗಳು ಪ್ರಸಾರ ಆರಂಭವಾಗಿ ಕೆಲವೇ ತಿಂಗಳುಗಳಲ್ಲಿ ಮುಕ್ತಾಯವಾದದ್ದು ಇದೆ. ಜನರು ಧಾರಾವಾಹಿಗಳನ್ನು ಹೇಗೆ ವೀಕ್ಷಿಸುತ್ತಾರೆ. ಟಿಆರ್ ಪಿ ಎಷ್ಟಿರುತ್ತೆ ಅನ್ನೋದರ ಮೇಲೆ ಧಾರಾವಾಹಿಗಳು ಪ್ರಸಾರವಾಗುತ್ತೆ. 
 

38

ಇತ್ತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯ ಕಂಡಿತ್ತು. ಹೊಸ ಧಾರಾವಾಹಿ ಮುದ್ದು ಸೊಸೆ  (Muddu Sose) ಈಗಾಗಲೇ ಆರಂಭವಾಗಿದ್ದಾಗಿದೆ.ಆದರೆ ಇದೀಗ ಮತ್ತೊಂದು ಸೀರಿಯಲ್ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. 
 

48

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿಯ ಪ್ರಕಾರ ವಧು ಸೀರಿಯಲ್ (Vadhu Serial) ಶೀಘ್ರದಲ್ಲೇ ಮುಕ್ತಾಯ ಕಾಣಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ  ಲಭ್ಯ ಇಲ್ಲ. ಜೊತೆಗೆ ಸೀರಿಯಲ್ ತಂಡದಿಂದ ಕೂಡ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. 
 

58

ವಧು ಸೀರಿಯಲ್, ವಧು ಎನ್ನುವ ಡಿವೋರ್ಸ್ (Divorce Lawyer) ಲಾಯರ್ ಸುತ್ತ ಸುತ್ತುವಂತಹ ಕಥೆಯಾಗಿದೆ. ಸಾರ್ಥಕ್ ಎನ್ನುವ ಶ್ರೀಮಂತ ವ್ಯಕ್ತಿಯ ಡಿವೋರ್ಸ್ ಪ್ರಕರಣವನ್ನು ಕೈಗೆತ್ತಿಕೊಂಡಿರುವ ವಧುವಿಗೆ, ಆತನ ಪತ್ನಿ ಪ್ರಿಯಾಂಕಾಳಿಂದ ಏನೆಲ್ಲಾ ಸಮಸ್ಯೆ ಬರುತ್ತೆ ಅನ್ನೋದು ಕಥೆ. 
 

68

ಸೇಡು ತೀರಿಸಿಕೊಳ್ಳಲು ಸಾರ್ಥಕ್ ನನ್ನು ಮದುವೆಯಾಗಿರುವ ಪ್ರಿಯಾಂಕಾ, ಇದೀಗ ಡಿವೋರ್ಸ್ ಪಡೆದು, ಸಾರ್ಥಕ್ ನ ಆಸ್ತಿಯನ್ನೆಲ್ಲಾ ತಾನೇ ಪಡೆದುಕೊಳ್ಳುವ ಹುನ್ನಾರ ಮಾಡಿದ್ದಾಳೆ. ಆದರೆ ಇದಕ್ಕೆ ಅಡ್ಡಲಾಗಿ ನಿಂತಿರೋದು ಲಾಯರ್ ವಧು. ಹಾಗಾಗಿ ವಧುವಿನ ಲೈಫನ್ನು ಹಾಳು ಮಾಡಲು ಎಲ್ಲಾ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದಾಳೆ ಪ್ರಿಯಾಂಕಾ. 
 

78

ಸಾರ್ಥಕ್ ತಾಯಿಯ ಮುಂದೆ ಸೊಸೆ ಪ್ರಿಯಾಂಕಾ ನಿಜಾ ಬಣ್ಣ ಬಯಲಾಗುತ್ತಾ? ಸಾರ್ಥಕ್ ಗೆ ಪ್ರಿಯಾಂಕಾಳಿಂದ ಡಿವೋರ್ಸ್ ಸಿಗುತ್ತಾ? ವಧು ಬಾಳು ಸರಿಯಾಗುತ್ತಾ? ಅಥವಾ ವಧು ಮತ್ತು ಸಾರ್ಥಕ್ ಒಂದಾಗುತ್ತಾರ ಅನ್ನೋದೆಲ್ಲಾ ಇನ್ನಷ್ಟೇ ಬಯಲಾಗಬೇಕಿದೆ. ಅದಕ್ಕೂ ಮುನ್ನ ಸೀರಿಯಲ್ ಮುಕ್ತಾಯ ಅನ್ನೋ ಸುದ್ದಿ ಬಂದಿದ್ದು ಕಥೆ ಹೇಗೆ ಮುಂದುವರೆಯಲಿದೆ ಕಾದು ನೋಡಬೇಕು. 
 

88

ಅಂದ ಹಾಗೇ ವಧು ಧಾರಾವಾಹಿಯಲ್ಲಿ ವಿನಯ ಪ್ರಸಾದ್ (Vinaya Prasad), ದುರ್ಗಶ್ರೀ, ಸೋನಿ ಮುಲೇವಾ, ಅಭಿಷೇಕ್ ಶ್ರೀಕಾಂತ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್, ರೇಖಾ ಸಾಗರ್ ನಟಿಸುತ್ತಿದ್ದು, ಈ ಧಾರಾವಾಹಿಯನ್ನು ದಿಲೀಪ್ ರಾಜ್ ದಂಪತಿಗಳು ನಿರ್ಮಾಣ ಮಾಡುತ್ತಿದ್ದಾರೆ 
 

Read more Photos on
click me!

Recommended Stories