Finger Drum Artist: ವೈಕಲ್ಯತೆಯನ್ನ ಮೆಟ್ಟಿನಿಂತು ಚಿಟಿಕೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಾಖಲೆ ಬರೆದ ಕೇರಳದ ‘ಕನ್ನಡಿಗ’

Published : Apr 24, 2025, 11:31 AM ISTUpdated : Apr 24, 2025, 11:56 AM IST

ಈ ಕೇರಳದ ಕನ್ನಡಿಗ ತನ್ನ ವೈಕಲ್ಯತೆಯನ್ನು ಮೆಟ್ಟಿನಿಂತು ಚಿಟಿಕೆಯಲ್ಲಿಯೇ ಸಂಗೀತ ರೂಪಿಸಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ದಾಖಲೆ ನಿರ್ಮಿಸಿದ್ದಾರೆ.     

PREV
110
Finger Drum Artist: ವೈಕಲ್ಯತೆಯನ್ನ ಮೆಟ್ಟಿನಿಂತು ಚಿಟಿಕೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಾಖಲೆ ಬರೆದ ಕೇರಳದ ‘ಕನ್ನಡಿಗ’

ಸಂಗೀತ ಅನ್ನೋದು ಕಂಠದಿಂದ ಮಾತ್ರ ಬರೋದು ಅಲ್ವೇ ಅಲ್ಲ…ಅಲ್ವಾ? ವೀಣೆ, ಪಿಟೀಲು, ತಬಲಾ, ಪಿಯಾನೋ, ಕೊಳಲು ಎಲ್ಲವೂ ಸಂಗೀತವೇ. ಆದರೆ ಇಲ್ಲೊಬ್ಬ ಸಾಧಕ ಯಾವುದೇ ಸಾಧನ, ಉಪಕರಣಗಳು ಇಲ್ಲದೇ ತನ್ನ ಕೈ ಬೆರಳುಗಳಲ್ಲೆ ಸಂಗೀತ ನುಡಿಸುವ ಮೂಲಕ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇವರು ಕೇರಳದ ಕನ್ನಡಿಗ ಅನ್ನೋದು ಹೆಮ್ಮೆ. 
 

210

ಈ ಪ್ರತಿಭೆಯ ಹೆಸರು ಮಣಿಕಂಠ ಎಸ್ (Manikanta S). ಇವರು ಕಾಸರಗೋಡಿನ ಮುಳ್ಳೇರಿಯ ಸಮೀಪದ ಕೋಟೂರಿನವರು. ಆಂಗ್ಲ ಭಾಷೆಯಲ್ಲಿ ಪದವಿ ಪಡೆದು, ಇದೀಗ ಕಾಸರಗೋಡು ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯ ವ್ಯಾಸಂಗ ಮಾಡುತ್ತಿರುವ ಅಪ್ಪಟ ಕನ್ನಡಿಗ.
 

310

ಮಣಿಕಂಠನಿಗೆ ಅಂಗವೈಕಲ್ಯ ಇದೆ. ಈತ ಒಬ್ಬ ಲೋಕೋ ಮೋಟರ್ ದೈಹಿಕ ಅಸಾಮರ್ಥ್ಯ (locomotor disability) ಇರುವ ವ್ಯಕ್ತಿ. ಹಾಗಂತ ತನ್ನ ವೈಕಲ್ಯತೆಗೆ ಬೇಸತ್ತು ಕೊರಗುತ್ತಾ ಸುಮ್ಮನೆ ಕೂತವರಲ್ಲ ಮಣಿಕಂಠ. ಬದಲಾಗಿ, ತಮ್ಮ ವೀಕ್ ನೆಸ್ ಅನ್ನು ಮೆಟ್ಟಿ ನಿಂತು, ಮನಸ್ಸು ಮಾಡಿದ್ರೆ ಏನನ್ನೂ ಬೇಕಾದ್ರೂ ಸಾಧಿಸಬಹುದು ಎಂದು ತೋರಿಸಿಕೊಟ್ಟು ಅಂತಾರಾಷ್ಟ್ರೀಯ ದಾಖಲೆ ಬರೆದ ಧೀಮಂತ ವ್ಯಕ್ತಿ. 
 

410

ಬಾಲ್ಯದಲ್ಲೇ  ಕಲಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಮಣಿಕಂಠ,  ಮಿಮಿಕ್ರಿ (mimicry), ನಾಟಕಗಳಲ್ಲಿ ಸದಾ ಮುಂದು. ಅಷ್ಟೇ ಅಲ್ಲ ಚಿತ್ರರಚನೆಯಲ್ಲೂ ಈತ ಮುಂದು. ಅದರಲ್ಲೂ  ಡಿಜಿಟಲ್  ಆರ್ಟ್ನಲ್ಲೂ ಈತನದು ಎತ್ತಿದ ಕೈ. ಕ್ಯಾರಿ ಕೇಚರ್, ಪೋಟ್ರೈಟ್ ,ಪೆನ್ಸಿಲ್ ಡ್ರಾಯಿಂಗ್ ಹೀಗೆ ಎಲ್ಲಾ ರೀತಿಯ ಕಲೆಗಳಲ್ಲಿ ಇವರು ಸಿದ್ಧಹಸ್ತರು. 
 

510

ಕಲೆ ಮಾತ್ರ ಅಲ್ಲ, ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಈತ ಕೊಳಲು, ಚೆಂಡೆ ವಾದನದಲ್ಲಿ ನಿಸ್ಸೀಮ. ಇದರ ಜೊತೆ ಡ್ರಮ್, ರಿದಮ್ ಪ್ಯಾಡ್ (rhythm pad), ಬ್ಯಾಂಡ್, ಪ್ಲೇ ಬಾಕ್ಸ್ ಮುಂತಾದ ಸಂಗೀತ ಸಾಧನಗಳನ್ನು ನುಡಿಸುವಲ್ಲಿ ಪಳಗಿದ ಕೈ ಎಂದರೆ ತಪ್ಪಾಗಲಾರದು. ಇದೀಗ ಬ್ಯಾಂಡ್ ಮ್ಯೂಸಿಕ್ ಡ್ರಮ್ ಗಳಲ್ಲಿ ಫ್ರೀಲ್ಯಾನ್ಸರ್ ಆಗಿ  ದುಡಿಯುತ್ತಿರುವ ಮಣಿಕಂಠ  ಕೇರಳ ಹಾಗೂ ಕರ್ನಾಟಕ ಎರಡೂ ರಾಜ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯತೆ ಪಡೆದಿದ್ದಾರೆ. 
 

610

ಆದರೆ ಮಣಿಕಂಠರ ಕುರಿತು ಬರೆಯೋದಕ್ಕೆ ಇದು ಮಾತ್ರ ಕಾರಣ ಅಲ್ಲ, ಇವರು ತಮ್ಮ ಎರಡು ಬೆರಳುಗಳನ್ನು ಒಂದಾಗಿಸಿ ಚಿಟಿಕೆ ಬಾರಿಸೋ ಮೂಲಕ ಸಂಗೀತ ಸೃಷ್ಟಿಸುತ್ತಾರೆ. ಹೌದು, ನಾವೆಲ್ಲಾ ಬೇರೆ ಬೇರೆ ವಿಷಯಗಳಿಗೆ ಚಿಟಿಕೆ ಬಾರಿಸಿದ್ರೆ, ಕಾಸರಗೋಡಿನ ಈ ಯುವಕ ಚಿಟಿಕೆಯಲ್ಲಿ ಸಂಗೀತ ಸೃಷ್ಟಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ (international record) ಸಾಧನೆ ಮಾಡಿದ್ದಾರೆ. 
 

710

ಇವರಿಗೆ ಚಿಟಿಕೆಯ ಕ್ರೇಜ್ ಹತ್ತಿದ್ದು ಲಾಕ್ ಡೌನ್ ಟೈಮಲ್ಲಿ. ಏನಾದರೊಂದು ಸಾಧನೆ ಮಾಡಲೇಬೇಕು ಎಂದು ನಿರ್ಧರಿಸಿದ ಮಣಿಕಂಠನಿಗೆ  ಎರಡು ಬೆರಳುಗಳನ್ನು ಸ್ಪರ್ಶಿಸುವಾಗ ಉಂಟಾಗುವ ಚಿಟಿಕೆಯ ಶಬ್ದ ಕೌತುಕವನ್ನು ಸೃಷ್ಟಿಸಿತ್ತು. ಅದನ್ನೇ ಅಭ್ಯಸಿಸಿ, ಚಿಟಿಕೆಯಲ್ಲಿ ಹೊಸತನವನು ಹುಡುಕಿ, ಗರಿಷ್ಟ ಸಂಖ್ಯೆಯಲ್ಲಿ ಚಿಟಿಕೆ ಹೊಡೆಯಲು ನಿರ್ಧರಿಸಿದ್ದರು. ಯಾಕಂದ್ರೆ ಆ ದಾಖಲೆಯನ್ನು ಇಲ್ಲಿವರೆಗೂ ಯಾರೂ ಮಾಡಿಲ್ಲವಾಗಿತ್ತು. ಇದೀಗ ಅತಿ ಹೆಚ್ಚು ಬಾರಿ ಚಿಟಿಕೆ ಬಾರಿಸಿರುವ ಕೀರ್ತಿ ಇವರ ಹೆಸರಲ್ಲಿದೆ. 

810

'ಚಿಟಿಕೆಯ ಮೂಲಕವೇ ದಾಖಲೆಯನ್ನು ಯಾಕೆ ಮಾಡಬಾರದು' ಎನ್ನುವ ಮಣಿಕಂಠನ ಪ್ರಶ್ನೆಗೆ ಉತ್ತರ ಸಿಕ್ಕಿದ್ದು 2022 ರಲ್ಲಿ! ಒಂದು ನಿಮಿಷಗಳಲ್ಲಿ ಗರಿಷ್ಠ 235 ಚಿಟಿಕೆ ಹೊಡೆದು ದಾಖಲೆಯನ್ನು ನಿರ್ಮಿಸಿದ್ದ ಮಣಿಕಂಠ, ಬಳಿಕ 2024ರಲ್ಲಿ ಒಂದು ನಿಮಿಷಗಳಲ್ಲಿ 500 ಚಿಟಿಕೆಗಳನ್ನು ಹೊಡೆದು,'ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್' (Talent Book Of Record) ಮತ್ತು 'ವರ್ಲ್ಡ್ ವೈಡ್ ಬುಕ್', (World Wide Book of Record) ಮತ್ತು 'ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್' (International Book Of Record) ತನ್ನದಾಗಿಸಿಕೊಂಡರು. ಆ ಮೂಲಕ ‘ಫಿಂಗರ್ ಡ್ರಮ್ ಆರ್ಟಿಸ್ಟ್’  (finger drum artist) ಆಗಿ ಜನಪ್ರಿಯತೆ ಪಡೆದರು. 
 

910

ಚಿಟಿಕೆ ಹೊಡೆಯೋದರಿಂದ ಕೈ ಬೆರಳುಗಳ ರಕ್ತ ಹೆಪ್ಪು ಗಟ್ಟಿ ಸಮಸ್ಯೆಗಳಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಅಭ್ಯಸಿಸಿ, ಇಂದು ಸೋಶಿಯಲ್ ಮೀಡೀಯಾದಲ್ಲಿ ತನ್ನ ಚಿಟಿಕೆ ಸಂಗೀತದಿಂದ ಸಿನಿಮಾ ಹಾಡುಗಳು, ಕರ್ನಾಟಕ ಶಾಸ್ತ್ರೀಯ ಸಂಗೀತಗಳನ್ನು ಸೃಷ್ಟಿಸುವ ಮೂಲಕ ಲಕ್ಷಾಂತರ ಫಾಲೋವರ್ಸ್ ಗಳನ್ನು ಪಡೆದು, ಕೇರಳದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ ಈ ಕನ್ನಡದ ಹುಡುಗ. 

1010

‘ಫಿಂಗರ್ ಡ್ರಮ್ ಆರ್ಟಿಸ್ಟ್' ಮಣಿಕಂಠ ಎಂದೆ ಜನಪ್ರಿಯರಾಗಿರುವ ಇವರ ವಿಶಿಷ್ಠ ಕಲೆಯನ್ನು ಗುರುತಿಸಿ ಜನಪ್ರಿಯ ಸಂಗೀತ ಸಂಯೋಜಕ ಅನಿರುದ್ಧ್, ಮಲಯಾಲಂ ಸಿನೆಮಾ ನಿರ್ದೇಶಕ ಜಿತಿನ್ ಲಾಲ್ ,ರೈ ಸ್ಟಾರ್, ಸಿನಿಮಾ ನಟರಾದ ಅರ್ಜುನ್ ಅಶೋಕ, ದುಲ್ಕರ್ ಸಲ್ಮಾನ್ (Dulqur Salman), ತೋವಿನೋ ತೊಮಸ್, ಇಬ್ರಾಹಿಂ, ನಿರ್ಮಲ್ ಪಾಲಾಯಿ ಮುಂತಾದವರು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ ಈತನ ಇನ್ಸ್ಟಾ ಪೇಜ್ ಮುಖಾಂತರ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' (India's Got Talent) ಶೋನಿಂದ ಕರೆ ಬಂದಿದ್ದು,13ನೇ ಸೀಸನ್ ನಲ್ಲಿ ಮಿಂಚಲಿದ್ದಾರೆ ಈ ಕೇರಳದ ಕನ್ನಡಿಗ.

‘ಫಿಂಗರ್ ಡ್ರಮ್ ಆರ್ಟಿಸ್ಟ್' ಮಣಿಕಂಠನ ಚಿಟಿಕೆ ಸಂಗೀತಕ್ಕಾಗಿ ಈ ಲಿಂಕ್ ಒತ್ತಿ ‘ಮಣಿಕಂಠ ಇನ್ಸ್ಟಾಗ್ರಾಂ ವಿಡೀಯೋ 
 

Read more Photos on
click me!

Recommended Stories