ನರಸಿಂಹನ ಮುಂದೆ ಬಯಲಾಗುತ್ತಾ ಜಾಹ್ನವಿ ಅಸಲಿ ಮುಖ; ಪೇಪರ್‌ನಲ್ಲಿಯೇ ಬಂತು ಸುದ್ದಿ!

Published : Apr 24, 2025, 08:16 AM ISTUpdated : Apr 24, 2025, 08:18 AM IST

Lakshmi Nivasa Serial: ಜಾಹ್ನವಿ ನರಸಿಂಹನ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಜಾನು ತಿಥಿ ಕಾರ್ಯಕ್ಕೆ ಶ್ರೀನಿವಾಸ್ ಮತ್ತು ಲಕ್ಷ್ಮೀ ಮುಂದಾಗಿದ್ದಾರೆ. ವಿಶ್ವನಿಗೆ ಜಾನು ಸಾವಿನ ಸುದ್ದಿ ತಿಳಿದಿದೆ. ನರಸಿಂಹನಿಗೆ ಸತ್ಯ ಗೊತ್ತಾಗುತ್ತಾ?

PREV
15
ನರಸಿಂಹನ ಮುಂದೆ ಬಯಲಾಗುತ್ತಾ ಜಾಹ್ನವಿ ಅಸಲಿ ಮುಖ; ಪೇಪರ್‌ನಲ್ಲಿಯೇ ಬಂತು ಸುದ್ದಿ!

ಸೈಕೋ ಗಂಡನ ಅತಿಯಾದ ಪ್ರೇಮಕ್ಕೆ ನೊಂದ ಜಾಹ್ನವಿ ಸದ್ಯ ನರಸಿಂಹನ ಮನೆಯಲ್ಲಿಯೇ ಆಶ್ರಯ ಪಡೆದುಕೊಂಡಿದ್ದಾಳೆ. ಆದ್ರೆ ಇದುವರೆಗೂ ವಿಶ್ವ ಮತ್ತು ಜಾನು ಮುಖಾಮುಖಿಯಾಗಿಲ್ಲ. ಇತ್ತ ನರಸಿಂಹನಿಗೂ ತನ್ನ ಮನೆಯಲ್ಲಿರೋದು ತಂಗಿ ಲಕ್ಷ್ಮೀ ಮಗಳು ಎಂಬ ವಿಷಯ ಗೊತ್ತಿಲ್ಲ. 

25

ಇತ್ತ ಮಗಳು ಸಾವನ್ನಪ್ಪಿದ್ದಾಳೆ ಎಂದು ನಂಬಿರುವ ಶ್ರೀನಿವಾಸ್ ಮತ್ತು ಲಕ್ಷ್ಮೀ ಜಾನು ತಿಥಿ ಕಾರ್ಯಕ್ಕೆ ಮುಂದಾಗಿದ್ದಾರೆ. ಹಾಗಾಗಿ ಬಂಧುಗಳು ಮತ್ತು ಆಪ್ತರಿಗೆ ತಿಥಿ ಕಾರ್ಯಕ್ಕೆ ಆಗಮಿಸುವಂತೆ ಕಾರ್ಡ್ ವಿತರಿಸುತ್ತಿದ್ದಾರೆ. ಮಗಳು ಜಾನು ತಿಥಿ ಕಾರ್ಯದ ಮಾಹಿತಿಯನ್ನು ನ್ಯೂಸ್ ಪೇಪರ್‌ನಲ್ಲಿಯೂ ಪ್ರಕಟಿಸಿದ್ದಾರೆ. 

35

ನರಸಿಂಹನ ಮನೆಯಲ್ಲಿ ಚಂದನಾ ಎಂದು ಹೇಳಿಕೊಂಡು ಜಾನು ಆಶ್ರಯ ಪಡೆದುಕೊಂಡಿದ್ದಾಳೆ. ಇದೀಗ ನರಸಿಂಹನ ಮನೆಗೆ ಬಂದಿರೋ ದಿನಪತ್ರಿಕೆಯನ್ನು ಜಾನು ತಿಥಿಕಾರ್ಯದ ಮಾಹಿತಿಯುಳ್ಳ ಸುದ್ದಿ ಪ್ರಕಟವಾಗಿದೆ. 

45

ಮನೆ ಗೇಟ್ ಬಳಿಯಲ್ಲಿದ್ದ ನ್ಯೂಸ್ ಪೇಪರ್ ತೆಗೆದುಕೊಂಡು ಬರಲು ಹೋದ ವಿಶ್ವನಿಗೆ ಈ ವಿಷಯ ಗೊತ್ತಿದೆ. ತನ್ನ ಆಪ್ತ ಗೆಳತಿಯ ಫೋಟೋ ನೋಡಿ ವಿಶ್ವ ಭಾವುಕನಾಗಿದ್ದಾನೆ. ಇದೀಗ ಅದೇ ಪೇಪರ್ ನರಸಿಂಹನ ಕೈಗೆ ಸೇರಿದೆ. ಒಂದು ವೇಳೆ ಜಾನು ಫೋಟೋ ನೋಡಿದ್ರೆ ನರಸಿಂಹನಿಗೆ ಎಲ್ಲಾ ವಿಷಯ ಗೊತ್ತಾಗುತ್ತದೆ. 

55

ನರಸಿಂಹ ಪೇಪರ್‌ನಲ್ಲಿರುವ ಜಾನು ಫೋಟೋ ನೋಡ್ತಾನಾ ಅನ್ನೋದು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬಹುದು. ಮತ್ತೊಂದೆಡೆ ನರಸಿಂಹ ಮತ್ತು ಜಯಂತ್ ಇಬ್ಬರು ಪರಿಚಯಸ್ಥರು ಎಂಬ ವಿಷಯ ಜಾನುಗೆ ಗೊತ್ತಾಗಿದೆ. 

Read more Photos on
click me!

Recommended Stories