ಸಿಎಂ ಆಗುವ ಕನಸು ಕಂಡಿದ್ದ ನರ್ಸ್‌ ಜಯಲಕ್ಷ್ಮೀ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದೇಕೆ, ಹೇಗಿದ್ದಾರೆ? ಹೆಂಗಿದ್ದಾರೆ?

Published : Jun 15, 2026, 05:44 PM IST

ಬಿಗ್‌ಬಾಸ್‌ನ ಮೊದಲ ಸೀಸನ್‌ನಲ್ಲಿ ಮಿಂಚಿದ್ದ ನರ್ಸ್‌ ಜಯಲಕ್ಷ್ಮೀ, ರಾಜಕೀಯ ಮತ್ತು ನಟನಾ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷಿಸಿದ್ದರು. 2018ರ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅವರು, ಇದೀಗ ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಅವರ ಈಗಿನ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

PREV
15

ಬಿಗ್‌ಬಾಸ್‌ನ 13ನೇ ಸೀಸನ್‌ ಆರಂಭವಾಗುವ ಹಂತದಲ್ಲಿದೆ. ಆದರೆ, ಬಿಗ್‌ಬಾಸ್‌ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿ ಮಿಂಚಿದ್ದ ನರ್ಸ್‌ ಜಯಲಕ್ಷ್ಮೀ ಮಾತ್ರ ಈಗ ಎಲ್ಲೂ ಕಾಣಿಸಿಕೊಳ್ಳುತ್ತಲೇ ಇಲ್ಲ. ದೊಡ್ಡ ರಾಜಕೀಯ ವಿವಾದದ ಬಳಿಕ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ನರ್ಸ್‌ ಜಯಲಕ್ಮೀ ಅದಾದ ಬಳಿಕ ಸಿನಿಮಾ ಹಾಗೂ ಟಿವಿಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

25

ಅವನು ಮತ್ತು ಶ್ರಾವಣಿ ಸೇರಿದಂತೆ ಕೆಲ ಕನ್ನಡ ಸೀರಿಯಲ್‌ಗಳಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ನರ್ಸ್‌ ಜಯಲಕ್ಷ್ಮೀ ಬಳಿಕ ಕೆಲವು ಸಿನಿಮಾಗಳಲ್ಲೂ ನಟಿಸಿದ್ದರು. 2016ರಲ್ಲಿ ರಿಲೀಸ್‌ ಆದ ಗಣೇಶ್‌ ಹಾಗೂ ರಾಧಿಕಾ ಪಂಡಿತ್‌ ನಟನೆಯ ಜೂಮ್‌ ಸಿನಿಮಾದಲ್ಲೂ ಕಾಣಿಸಿಕೊಡಿದ್ದರು. ಅದಾದ ಬಳಿಕ ಅವರು ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ.

35

ರಾಜಕೀಯ ವಿವಾದದ ಬಳಿಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ನರ್ಸ್‌ ಜಯಲಕ್ಮೀ 2013ರಲ್ಲಿ ಬಿಆರ್‌ಎಸ್‌ ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದರು. ಚುನಾವಣೆಯಲ್ಲಿ ಹೊನ್ನಾಳಿ ಅಥವಾ ರಾಜಾಜಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇರಾದೆಯನ್ನೂ ವ್ಯಕ್ತಪಡಿಸಿದ್ದರು. ಈ ಹಂತದಲ್ಲಿ ಮಾಧ್ಯಮಗಳು ಕೇಳಿದ್ದ ಪ್ರಶ್ನೆಗೆ, ಮುಂದೊಂದು ದಿನ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ಆಗುವ ಇರಾದೆಯನ್ನೂ ವ್ಯಕ್ತಪಡಿಸಿದ್ದರು. ಆದರೆ, ಇದಾವುದೂ ಆಗಲಿಲ್ಲ. 2018ರಲ್ಲಿ ಆಕೆ ಅಖಿಲ ಭಾರತ ಮಹಿಳಾ ಅಭಿವೃದ್ಧಿ ಪಕ್ಷ (ಎಂಇಪಿ) ಸೇರಿದ್ದರು. ಆ ನಂತರ ಅವರ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ.

45

ತಮ್ಮ ಸ್ವಂತ ನರ್ಸಿಂಗ್‌ ಕಾಲೇಜು ಇದೆ ಎಂದು ಹೇಳಿದ್ದ ಜಯಲಕ್ಷ್ಮೀ 2018ರಲ್ಲಿ ಕೊನೆಯ ಬಾರಿಗೆ ಮಾಧ್ಯಮದಲ್ಲಿ ಸುದ್ದಿಯಾಗಿದ್ದರು. ತಿಲಕ್‌ನಗರದಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಪೊಲೀಸ್‌ ಕೇಸ್‌ ಮಾಡಿ ಸುದ್ದಿಯಾಗಿದ್ದರು. ಅದಾದ ಬಳಿಕ ಅವರ ಬಗ್ಗೆ ಮಾಧ್ಯಮದಲ್ಲಾಗಲಿ, ಸೋಶಿಯಲ್‌ ಮೀಡಿಯಾದಲ್ಲಾಗಲಿ ಯಾವುದೇ ಅಪ್‌ಡೇಟ್‌ಗಳಿಲ್ಲ.

55

ಕೆಲವು ಮೂಲಗಳ ಪ್ರಕಾರ, ಸದ್ಯ ನರ್ಸ್‌ ಜಯಲಕ್ಷ್ಮೀ ಬೆಂಗಳೂರಿನ ಹೊರಗೆ ನೆಲೆಸಿದ್ದಾರೆ. ಆದರೆ, ಸಾರ್ವಜನಿಕರ ಗಮನದಿಂದ ದೂರ ಉಳಿದಿದ್ದಾರೆ. ಅವರ ದೈನಂದಿನ ವೃತ್ತಿಪರ ಅಥವಾ ವ್ಯವಹಾರದ ಕಾರ್ಯಗಳು ಸೋಶಿಯಲ್‌ ಮೀಡಿಯಾದಲ್ಲೂ ಹಂಚಿಕೊಳ್ಳೋದಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories