ಬಿಗ್ ಬಾಸ್ 12ರ ವಿನ್ನರ್ ಗಿಲ್ಲಿ ನಟನ ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದಿದೆ. ಶೀಘ್ರವೇ ಗಿಲ್ಲಿ ನಟ ಕಲರ್ಸ್ ಕನ್ನಡ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಏನಿದೆ ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟನನ್ನು ಮತ್ತೆ ಕಲರ್ಸ್ ಕನ್ನಡದಲ್ಲಿ ನೋಡುವ ಅವಕಾಶ ಫ್ಯಾನ್ಸ್ ಗೆ ಸಿಗ್ತಿದೆ. ಗಿಲ್ಲಿ ತಮಾಷೆ ನೋಡೋಕೆ ನೀವು ಇನ್ನೊಂದು ವಾರ ಕಾಯ್ಬೇಕು. ಕಲರ್ಸ್ ಕನ್ನಡ, ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಗಿಲ್ಲಿ ಮಿಂಚಲಿದ್ದಾರೆ.
25
ಎಂಟರ್ಟೈನ್ ಮೆಂಟ್ ಆಫ್ ದಿ ಇಯರ್
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಅತಿ ಹೆಚ್ಚು ಮನರಂಜನೆ ನೀಡಿದ ನಟ ಗಿಲ್ಲಿ. ಕೋಟ್ಯಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದ ಗಿಲ್ಲಿ, ದಾಖಲೆಯಲ್ಲಿ ಗೆಲುವು ಸಾಧಿಸಿದ್ರು. ಗಿಲ್ಲಿ ಹೋದ್ರೆ ಅಲ್ಲೆಲ್ಲ ನಗು ಎನ್ನುವ ಒಂದು ನಂಬಿಕೆ ಜನರಲ್ಲಿದೆ. ಈಗ ಗಿಲ್ಲಿ ಅವರಿಗೆ ಎಂಟರ್ಟೈನ್ ಮೆಂಟ್ ಆಫ್ ದಿ ಇಯರ್ ಅವಾರ್ಡ್ ಸಿಕ್ಕಿದೆ.
35
ವೇದಿಕೆ ಮೇಲೂ ಗಿಲ್ಲಿ ತಮಾಷೆ
ಗಿಲ್ಲಿಯ ಪ್ರೋಮೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದೆ. ಗಿಲ್ಲಿ ನಟ, ಅವಾರ್ಡ್ ಕೈನಲ್ಲಿ ಹಿಡಿದು ಅಕುಲ್ ಬಾಲಾಜಿ ಜೊತೆ ತಮಾಷೆ ಮಾಡ್ತಾ, ಪ್ರೇಕ್ಷಕರನ್ನು ನಗಿಸ್ತಿದ್ದಾರೆ. ಆಕ್ಟರ್ ಡೈಲಾಗ್ ಜೊತೆ ಹಾಡೂ ಹೇಳಿ ಗಿಲ್ಲಿ ಮನರಂಜನೆ ನೀಡಿದ್ದಾರೆ.
ವೇದಿಕೆ ಕೆಳಗಿದ್ದ ನಟರ ಜೊತೆ ವೇದಿಕೆ ಮೇಲಿಂದಲೇ ಗಿಲ್ಲಿ ಮಾತುಕತೆ ನಡೆಸಿದ್ದಾರೆ. ಸಿಕ್ಕ ಅವಕಾಶ ಬಿಡ್ದೆ, ರಿಷಬ್ ಶೆಟ್ಟಿ ಬಳಿ ಆಕ್ಟಿಂಗ್ ಅವಕಾಶ ಕೇಳಿದ್ದಾರೆ. ಮುಂದಿನ ಚಿತ್ರದಲ್ಲಿ ನನಗೊಂದು ಸಣ್ಣ ಪಾತ್ರ ನೀಡಿ ಎಂದಿದ್ದಾರೆ. ರಿಷಬ್ ಅದಕ್ಕೆ ಒಪ್ಪಿ, ಮುಂದಿನ ಸಿನಿಮಾದಲ್ಲಿ ಅವಕಾಶ ನೀಡ್ತಾರಾ ನೋಡ್ಬೇಕು.
55
ಅಭಿಮಾನಿಗಳು ಖುಷ್
ಗಿಲ್ಲಿಯನ್ನು ಕಲರ್ಸ್ ಕನ್ನಡ ವೇದಿಕೆ ಮೇಲೆ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಗಿಲ್ಲಿ ಹಾಗೂ ಕಾವ್ಯಾ ವೇದಿಕೆ ಮೇಲೆ ಒಟ್ಟಿಗೆ ಬರ್ತಾರೆ ಎನ್ನುವ ನಿರೀಕ್ಷೆ ಫ್ಯಾನ್ಸ್ ಗಿದೆ. ಕಲರ್ಸ್ ಕನ್ನಡ ಗಿಲ್ಲಿ – ಕಾವ್ಯ ಪ್ರೋಮೋ ಹಾಕ್ಲಿ ಎನ್ನುತ್ತಿರುವ ವೀಕ್ಷಕರು ಜೂನ್ 21ಕ್ಕೆ ಕಾಯ್ತಿದ್ದಾರೆ. ಕಲರ್ಸ್ ಕನ್ನಡ, ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮವನ್ನು ಜೂನ್ 21 ರಂದು ಸಂಜೆ ಐದು ಗಂಟೆಗೆ ಪ್ರಸಾರ ಮಾಡಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.