ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview

Published : Feb 23, 2026, 10:08 PM IST

ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್‌ ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜೊತೆ ರಿಯಲ್‌ ಪತಿ ಬಗ್ಗೆ ಮಾತನಾಡಿದ್ದಾರೆ.

PREV
15
ನಿಮ್ಮ ಮದುವೆ ಬಗ್ಗೆ ಹೇಳಿ

ನಾನು ಹಾಗೂ ನನ್ನ ಗಂಡ ಮೊದಲಿನಿಂದಲೂ ಸ್ನೇಹಿತರು. ಕೆಲಸದ ವಿಚಾರಕ್ಕೆ ಅವರು, ನಾನು ಮೀಟ್‌ ಮಾಡಿದೆವು. ಆಗ ಅವರು ನನ್ನ ಮದುವೆ ಆಗ್ತೀಯಾ ಎಂದು ಪ್ರಶ್ನೆ ಮಾಡಿದರು. ನನ್ನ ಜೀವನದ ಏರಿಳಿತವನ್ನು ಅವರು ನೋಡಿದ್ದಾರೆ, ಹೀಗಾಗಿ ನಾನು ಓಕೆ ಎಂದೆ. ನಮ್ಮದು ಲವ್‌ ಮ್ಯಾರೇಜ್.‌ ಆದರೆ ಲವ್‌ ಪ್ರಪೋಸ್‌ ಇರಲಿಲ್ಲ.

25
ಪತಿಯ ವೃತ್ತಿ ಏನು?

ನನ್ನ ಗಂಡನ ಹೆಸರು ಹೇಮಂತ್‌ ಶ್ರೀನಿವಾಸ್.‌ ಈಗ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ನಟಿಸುವುದು ನನಗಿಂತ ಅವರಿಗೆ ಜಾಸ್ತಿ ಖುಷಿ.

35
ಈಗ ಪ್ರಿಯಾ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ನಿಮ್ಮ ಸಂಗಾತಿ ಏನು ಹೇಳುತ್ತಾರೆ?

ಅವರಂತೂ ತುಂಬ ಖುಷಿಯಿಂದ ಇದ್ದಾರೆ. ನನ್ನ ಜೊತೆ ಯಾರಾದರೂ ಮಾತನಾಡಿ, ಫೋಟೋ ತಗೊಂಡರೆ ಅವರು ದೂರದಲ್ಲೇ ನಿಂತು ನೋಡಿ ಖುಷಿಪಡ್ತಾರೆ.

45
ಮತ್ತೆ ನಟಿಸೋದಕ್ಕೆ ನನ್ನ ಪತಿಯೇ ಕಾರಣ

ಮದುವೆಯಾದ್ಮೇಲೆ ನಟನೆ ಬೇಡ ಎಂದು ನಾನು ದೂರ ಇದ್ದೆ. ಆದರೆ ನನ್ನ ಗಂಡನೇ ಫೋಸ್ಟ್‌ ಮಾಡಿದ್ರು, ನಿನಗೆ ನಟನೆ ಖುಷಿ ಇದೆ ಎಂದರೆ ಮಾಡು ಎಂದರು. ಹೀಗಾಗಿ ಮತ್ತೆ ನಟನೆಗೆ ಬಂದೆ.

55
ಕುಟುಂಬದ ಬೆಂಬಲ ಹೇಗಿದೆ?

ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೀನಿ. ಅವಕಾಶಗಳು ಇಲ್ಲದಿದ್ದಾಗ ನನ್ನ ಮನೆಯಲ್ಲಿ ಎಲ್ಲರೂ ಸಪೋರ್ಟ್‌ ಮಾಡಿದ್ದಾರೆ, ಪದೇ ಪದೇ ಮೋಟಿವೇಟ್‌ ಮಾಡುತ್ತಿದ್ದರು. ಕಷ್ಟಪಟ್ಟಿದ್ದಕ್ಕೆ ಫಲಿತಾಂಶ ಸಿಗುತ್ತದೆ ಎಂದು ಹೇಳುತ್ತಲೇ ಇದ್ದರು. ಎಲ್ಲೇ ಕರೆದರೂ ಆಡಿಷನ್‌ನಲ್ಲಿ ಭಾಗವಹಿಸುತ್ತಿದ್ದೆ, ಒಳ್ಳೆಯ ಡೈರೆಕ್ಟರ್‌ ಅಡಿಯಲ್ಲಿ ಕೆಲಸ ಮಾಡಿದ್ದೀನಿ, ಎಷ್ಟೋ ಪ್ರಾಜೆಕ್ಟ್‌ಗಳು ಕೈತಪ್ಪಿ ಹೋದಾಗ ನನಗೆ ಯಾಕೆ ಹೀಗಾಯ್ತು ಎಂದು ಬೇಸರ ಮಾಡಿಕೊಂಡಿದ್ದೂ ಇದೆ. ಆಗೆಲ್ಲ ಮನೆಯವರು ಮೋಟಿವೇಟ್‌ ಮಾಡುತ್ತಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories