Muddu Sose Serial: ವಿದ್ಯಾಗೆ ಸಂಕಟ ತಂದಿಟ್ಟ ವಿನೋದಿನಿ; ಈಗ ಸೋತರೆ ಮಾತ್ರ ಭದ್ರನಿಂದ ಶಾಶ್ವತವಾಗಿ ದೂರ!

Published : Feb 23, 2026, 09:18 PM IST

Muddu Sose Serial Kannada: 'ಮುದ್ದುಸೊಸೆ' ಧಾರಾವಾಹಿಯಲ್ಲಿ ಕುತೂಹಲಕಾರಿ ಘಟ್ಟಕ್ಕೆ ಬಂದಿದೆ. ವೇಗವಾದ ಕಥಾಹಂದರ, ರೋಚಕ ತಿರುವುಗಳ ಮೂಲಕ ಗಮನಸೆಳೆದ ಈ ಸೀರಿಯಲ್‌ನಲ್ಲಿ, ಇದೀಗ ಹೀರೋಯಿನ್ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆ‌ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

PREV
15
ಫಾಸ್ಟ್‌ ಕಥೆ ಹೇಳ್ತಿದ್ದಾರೆ

"ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ನನ್ನ ಗಂಡನ ಮೇಲಿರುವ ಅಪವಾದ ಸುಳ್ಳು!" – ಎಂದು ವಿದ್ಯಾ ನಂಬಿದ್ದಾಳೆ. ಒಂದೇ ತಿಂಗಳೊಳಗೆ ಎಂಟಕ್ಕೂ ಅಧಿಕ ಮಹಾ ತಿರುವು ಬಂದಿದೆ. ಕಿರುತೆರೆಯಲ್ಲಿ ಇಷ್ಟು ವೇಗವಾಗಿ ಕಥೆ ಹೇಳ ಹೊರಟಿರುವುದು ಒಂದು ಹೊಸ ಪ್ರಯೋಗ.

25
ವಿನಂತಿ ಕುತಂತ್ರ

ಭದ್ರ ಮತ್ತು ವಿನಂತಿ ಒಂದೇ ಹಾಸಿಗೆಯಲ್ಲಿ ಇರುತ್ತಾರೆ. ಇದನ್ನು ಮನೆಯವರಿಗೆ ಕಂಡಿದ್ದಾರೆ. ವಿನಂತಿ ಜೀವನ ಹಾಳಾಗಲಿದೆ ಎಂದು ಇವರಿಬ್ಬರಿಗೂ ಮದುವೆ ಮಾಡುವ ಪ್ಲ್ಯಾನ್‌ ಮಾಡಲಾಗಿದೆ. ಇದು ವಿನಂತಿ ಹಾಗೂ ಅವಳ ತಾಯಿ ಮಾಡಿದ ಯೋಜನೆ ಆಗಿತ್ತು. ಆದರೆ ವಿದ್ಯಾಗೆ ಮಾತ್ರ ತನ್ನ ಗಂಡನ ಮೇಲೆ ನಂಬಿಕೆ. ಭದ್ರನಿಗೆ ಕೇಕ್‌ ತಿಂದಮೇಲೆ ಏನಾಗಿದೆ ಎನ್ನೋದು ನೆನಪಿಲ್ಲ.

35
ವಿದ್ಯಾಗೆ ಎರಡು ಆಯ್ಕೆ ಕೊಟ್ಟ ಶಿವರಾಮೇಗೌಡ

ಭದ್ರನ ತಂದೆ ಶಿವರಾಮೇಗೌಡ, ಮಗನಿಗೆ ವಿನಂತಿ ಜೊತೆ ಮದುವೆ ಮಾಡಿಸಲು ಯೋಚಿಸಿದ್ದಾನೆ. ಸೊಸೆ ವಿದ್ಯಾ, ಭದ್ರನಿಗೆ ವಿಚ್ಛೇದನ ಕೊಟ್ಟು ದೂರ ಆಗಬೇಕು. ಆಗ ಒಟ್ಟು ಆಸ್ತಿಯಲ್ಲಿ ಶೇಕಡಾ 50%ರಷ್ಟು ಪಾಲು ಕೊಡುತ್ತಾನೆ. ಇಲ್ಲವೇ ಭದ್ರನ ಮೊದಲ ಪತ್ನಿಯಾಗಿಯೇ ಮನೆಯಲ್ಲಿ ಉಳಿಯುವುದು. ಆದರೆ, ಭದ್ರ ಮತ್ತು ವಿನಂತಿ ಮದುವೆ ಆಗುವುದು. ವಿನಂತಿ ಎರಡನೇ ಪತ್ನಿ ಪಟ್ಟ ಪಡೆಯುತ್ತಾಳೆ.

45
ರಣರಂಗಕ್ಕೆ ಇಳಿದ ವಿದ್ಯಾ

ಗಂಡ ಭದ್ರನ ವಿರುದ್ಧ ದೊಡ್ಡ ಪಿತೂರಿ ಆಗಿದೆ ಎಂದು ವಿದ್ಯಾ ನಂಬಿದ್ದಾಳೆ. ನನಗೆ ಗಂಡ ಬೇಕು ಎನ್ನುವ ವಿದ್ಯಾ ಈಗ ರಣರಂಗಕ್ಕೆ ಇಳಿದಿದ್ದಾಳೆ. ತನ್ನ ತಾಳಿಯನ್ನು ಉಳಿಸಿಕೊಳ್ಳಬೇಕು ಎಂದು ಅವಳು ಕುತಂತ್ರಿಗಳ ನಿಜ ಬಣ್ಣವನ್ನು ಬಯಲು ಮಾಡಲು ರೆಡಿ ಆಗಿದ್ದಾಳೆ.

55
ಏನಾಗಲಿದೆ?

ವಿದ್ಯಾಳ ಈ ಹೋರಾಟಕ್ಕೆ ಜಯ ಸಿಗುತ್ತಾ? ವಿದ್ಯಾ ಗೆಲ್ಲುತ್ತಾಳಾ? ಒಟ್ಟಿನಲ್ಲಿ ಕುತಂತ್ರಿಗಳ ಮುಖವಾಡ ಕಳಚುವ ಆ ರೋಚಕ ಕ್ಷಣಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. 'ಮುದ್ದುಸೊಸೆ' - ಪ್ರತಿ ರಾತ್ರಿ 7.30ಕ್ಕೆ ನೋಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories