'ನಂದಗೋಕುಲ' ಧಾರಾವಾಹಿಯ ಖಳನಾಯಕಿ ಪ್ರಿಯಾ ಪಾತ್ರಧಾರಿ ಅರ್ಪಿತಾ ಗೌಡ, ತಮ್ಮ ಪಾತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ನಕಾರಾತ್ಮಕ ಕಮೆಂಟ್‌ಗಳ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರೇ ತಮ್ಮನ್ನು ಕೆಟ್ಟದಾಗಿ ನಿಂದಿಸುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸೀರಿಯಲ್ ಪಾತ್ರಧಾರಿಗಳಿಗೆ ವಿಭಿನ್ನ ರೀತಿಯ ಕಮೆಂಟ್ಸ್ ತುಂಬಾ ಕಾಮನ್. ಅದು ನೆಗೆಟಿವ್ ಶೇಡ್ನ ಪಾತ್ರಗಳಲ್ಲಿ ನಟಿಸುತ್ತಿದ್ದರೆ ಅದಕ್ಕೆ ಬರುವಷ್ಟು ನೆಗೆಟಿವ್ ಕಮೆಂಟ್ಸ್ಗಳಿಂದ ಕೆಲವು ನಟಿಯರು ತುಂಬಾ ನೋವು ಅನುಭವಿಸುವುದು ಇದೆ. ಸೀರಿಯಲ್ಗಳಲ್ಲಿ ಬರುವ ಪಾತ್ರ ಕೇವಲ ಒಂದು ಪಾತ್ರ ಎಂದು ನೋಡದೇ,ಕೆಲವೊಮ್ಮೆ ಆ ಪಾತ್ರದ ಮೂಲಕ ವೈಯಕ್ತಿಕವಾಗಿಯೂ ಕೀಳು ಮಟ್ಟದ ಭಾಷೆ ಪ್ರಯೋಗಿಸಿ ಕಮೆಂಟ್ ಮಾಡುವವರು ಇದ್ದಾರೆ. ಇದರ ಬಗ್ಗೆ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ನಂದಗೋಕುಲ' ಸೀರಿಯಲ್ ವಿಲನ್ ಪ್ರಿಯಾ ಮಾತನಾಡಿದ್ದಾರೆ.
26
ನೋವು ತೋಡಿಕೊಂಡ ನಟಿ
ಈ ಸೀರಿಯಲ್ನಲ್ಲಿ ಸೊಸೆಯ ಪಾತ್ರದಲ್ಲಿ ನಟಿಸ್ತಿರೋ ನಟಿಯ ಹೆಸರು ಅರ್ಪಿತಾ ಗೌಡ. araginientertainment ಚಾನೆಲ್ ಜೊತೆ ತಮ್ಮ ಜೀವನದ ಕೆಲವೊಂದು ಘಟನೆಗಳನ್ನು ಹಂಚಿಕೊಂಡಿರುವ ನಟಿ, ತಮಗೆ ಬರ್ತಿರೋ ನೆಗೆಟಿವ್ ಕಮೆಂಟ್ಸ್ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಅತ್ಯಂತ ಕೆಟ್ಟದ್ದಾಗಿ ಕಮೆಂಟ್ಸ್ ಮಾಡುವವರ ಪೈಕಿ ಹೆಣ್ಣುಮಕ್ಕಳೇ ಹೆಚ್ಚಿನವರು. ಇವರು ಏಕೆ ಹೀಗೆ ಎಂದು ನನಗೆ ಗೊತ್ತಾಗ್ತಿಲ್ಲ. ತುಂಬಾ ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ. ಅವರಿಗೆ ನಮ್ಮನ್ನು ಕಂಡ್ರೆ ಯಾಕೆ ಹೀಗೆ ಎನ್ನೋದೇ ಗೊತ್ತಾಗುವುದಿಲ್ಲ ಎಂದಿದ್ದಾರೆ.
36
ಅವರಿಗಾದ್ರೆ ಒಂದು, ನಮಗಾದ್ರೆ ಇನ್ನೊಂದು...
ಸೀರಿಯಲ್ಗಳಲ್ಲಿ ಯಾವುದೇ ಅಸಭ್ಯ ಬಟ್ಟೆ ಹಾಕದೇ, ನೀಟಾಗಿ ಇದ್ರೂ ಕೆಟ್ಟ ಕೆಟ್ಟ ಕಮೆಂಟ್ಸ್ ಮಾಡ್ತಾರೆ. ಆದರೆ ಅರೆಬರೆ ಡ್ರೆಸ್ ಹಾಕಿಕೊಂಡು, ಹೇಗೇಗೋ ಕಾಣಿಸಿಕೊಳ್ಳುವವರು ಮುಂದೆ ಯಾವಾಗ ವಿಡಿಯೋ ಹಾಕ್ತಾರೆ ಎಂದು ಕಾಯುತ್ತಾ ಕುಳಿತಿರುತ್ತಾರೆ. ಆದರೆ ನಮ್ಮಂಥವರಿಗೆ ಮಾತ್ರ ಕೆಟ್ಟದ್ದಾಗಿ ಕಮೆಂಟ್ ಹಾಕೋದು, ಅದೂ ಹೆಚ್ಚಾಗಿ ಮಹಿಳೆಯರೇ ಅನ್ನೋದು ತುಂಬಾ ನೋವಿನ ಸಂಗತಿ ಎಂದಿದ್ದಾರೆ.
ಅಂದಹಾಗೆ ಈ ಸೀರಿಯಲ್ನಲ್ಲಿ ಪ್ರಿಯಾಳದು ತುಂಬಾ 'ಪೋಸೆಸಿವ್' ಆದ ಹಾಗೂ ಸ್ವಾರ್ಥದ ಸ್ವಭಾವ. ಅತ್ತೆ-ಮಾವ ಮತ್ತು ಮನೆಯ ಎಲ್ಲರ ಪ್ರೀತಿ ತನಗೆ ಮಾತ್ರ ಸಿಗಬೇಕು ಎಂದು ಬಯಸುವ ಆಕೆಯ ವರ್ತನೆಯಿಂದ ಮನೆಯಲ್ಲಿ ಆಗಾಗ ಕಲಹಗಳು ಏರ್ಪಡುತ್ತವೆ.
56
ಸಿನಿಮಾದಲ್ಲಿ ನಟನೆ
ಅಂದಹಾಗೆ ನಟಿ ಅರ್ಪಿತಾ ಗೌಡ ಶಿವಮೊಗ್ಗದವರು. ರಮ್ಯಾ ಅವರು ನಾಯಕಿ ಆಗಿರುವ ‘ನಾಗರಹಾವು’ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಆ ಸಿನಿಮಾದಲ್ಲಿ ನಾಗದೇವತೆ ಪಾತ್ರಕ್ಕೆ ಹುಡುಗಿ ಹುಡುಕುತ್ತಿದ್ದರು. ಅವರಿಗೆ ಒಂದು ಇಮ್ಯಾಜಿನೇಷನ್ ಇತ್ತು. ಆದ್ರೆ ಯಾವ ಹುಡುಗಿನೂ ಸೂಟ್ ಆಗಲಿಲ್ಲ. ನನ್ನ ಪರಿಚಯದವರೊಬ್ಬರು ನನ್ನನ್ನು ಕರೆಸಿದ್ದರು. ಸುಮ್ಮನೇ ಹೋಗಿದ್ದೆ, ಸೆಲೆಕ್ಟ್ ಆಗಿಬಿಟ್ಟೆ ಎಂದು ಈ ಹಿಂದೆ ನಟಿ ನೆನಪಿಸಿಕೊಂಡಿದ್ದರು.
66
ಕುಟುಂಬದ ಹಿನ್ನೆಲೆ
ಅಂದಹಾಗೆ ಅರ್ಪಿತಾ ಅವರಿಗೆ ಮದುವೆಯಾಗಿದ್ದು ಸುಖ ಸಂಸಾರ ನಡೆಸುತ್ತಿದ್ದಾರೆ. ಮದುವೆಯಾದ ಮೇಲೆ ಬಣ್ಣದ ಲೋಕ ಬೇಡ ಅಂದುಕೊಂಡಿದ್ರಂತೆ. ಆದರೆ ಪತಿಯ ಸಪೋರ್ಟ್ನಿಂದ ಇಲ್ಲಿಯವರೆಗೂ ಬಂದೆ ಎಂದಿದ್ದಾರೆ ನಟಿ. ಆಗ ‘ಸತ್ಯ’ ಧಾರಾವಾಹಿಯಿಂದ ಕಾಲ್ ಬಂದು ಅಲ್ಲಿ ನಟಿಸಿದ್ದರು. ಅದಾದ ಬಳಿಕ ನೂರು ಜನ್ಮಕ್ಕೂ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.