Annayya Serial: ಮಾಡಬಾರದ್‌ ಮಾಡೋಕೆ ಹೋಗಿ ಚಟ್ನಿಪುಡಿ ಆದ ಜಿಮ್‌ ಸೀನ; ರೌದ್ರಾವತಾರ ತಾಳಿದ ಮಾರಿಗುಡಿ ಶಿವು

Published : May 02, 2026, 11:20 AM IST

Annayya Kannada Serial Episode: ಅಣ್ಣಯ್ಯ ಧಾರಾವಾಹಿಯಲ್ಲಿ ಇಷ್ಟವಿಲ್ಲದೆ ಗುಂಡು ರಶ್ಮಿಯನ್ನು ಸೀನ ಮದುವೆ ಆದನು. ಆದರೆ ಅವನು ಮೊದಲೇ ಪಿಂಕಿಯನ್ನು ಪ್ರೀತಿ ಮಾಡುತ್ತಿದ್ದ. ಅವನ ವಿರೋಧದಲ್ಲೇ ಮದುವೆ ನಡೆದಿತ್ತು. ಈಗ ಅವನು ಎರಡನೇ ಮದುವೆಗೆ ರೆಡಿಯಾಗಿದ್ದಾನೆ. 

PREV
15
ಭ್ರಮೆಯಲ್ಲಿದ್ದ ಶಿವಣ್ಣ!

ಸೀನ ಎಷ್ಟೇ ಹೇಳಿದರೂ ಕೂಡ ರಶ್ಮಿ ಡಿವೋರ್ಸ್‌ ಕೊಟ್ಟಿಲ್ಲ. ಈಗ ಯಾರಿಗೂ ಗೊತ್ತಿಲ್ಲದ ಹಾಗೆ ಪಿಂಕಿಯನ್ನು ಮದುವೆ ಆಗೋಕೆ ರೆಡಿ ಆಗಿದ್ದಾನೆ. ದೇವಸ್ಥಾನದಲ್ಲಿ ಎಲ್ಲ ತಯಾರಿ ನಡೆದಿತ್ತು. ತಂಗಿಯಂದಿರ ಜೀವನ ಚೆನ್ನಾಗಿ ಆಗಿದೆ, ಎಲ್ಲರೂ ಗಂಡನ ಮನೆ ಸೇರಿದ್ದಾರೆ ಎಂದು ಅವನು ಅಂದುಕೊಂಡಿದ್ದಾನೆ, ಆದರೆ ವಾಸ್ತವ ಬೇರೆ ಇದೆ.

25
ಪ್ರೋಮೋ ಔಟ್‌ ಆಯ್ತು!

ಈಗ ಈ ಧಾರಾವಾಹಿಯಲ್ಲಿ ಸೀನ ಹಾಗೂ ಪಿಂಕಿ ಮದುವೆ ಆಗೋದನ್ನು ಶಿವ ನೋಡಿದ್ದಾನೆ. ಏನ್‌ ಕಿತ್ಕೋತೀಯೋ ಕಿತ್ಕೋ ಎಂದು ಅವನು ಅವಾಜ್‌ ಹಾಕಿದ್ದಾನೆ. ಆಗ ಶಿವು ಅವನಿಗೆ ನಾಲ್ಕು ಬಾರಿಸಿ ಈ ಮದುವೆಯನ್ನು ತಡೆದಿದ್ದಾನೆ. ಒಟ್ಟಿನಲ್ಲಿ ಈ ಪ್ರೋಮೋ ಮಜವಾಗಿದೆ, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

35
ಪ್ರೋಮೋ ರಿಲೀಸ್‌

ಗುಂಡು ಜೀವ್ನದ್ ಜೊತೆ ಆಟ ಆಡಿದ ಜಿಮ್ ಸೀನನನ್ನ..ಶಿವಣ್ಣ ಸುಮ್ನೆ ಬಿಡೋ‌ನಲ್ಲ! ರೋಚಕ ಘಟ್ಟದಲ್ಲಿ ಅಣ್ಣಯ್ಯ ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರೋಮೋ ರಿಲೀಸ್‌ ಆಗಿದೆ. 

45
ಸೀನನ ಮುಂದೆ ಶಿವಣ್ಣನ ರೌದ್ರಾವತಾರ
  • ಇದು ಇದು ಚೆನ್ನಾಗಿರೋದು ಅಂದ್ರೆ, ಬೆಂಕಿ ಪ್ರೋಮೋ ತುಂಬ ಕ್ಯೂರಿಯಾಸಿಟಿ ಹೆಚ್ಚಾಗ್ತಿದೆ. ಬಿಡಬೇಡ ಶಿವು, ಸೀನನನ್ನು..
  • ಶಿವಣ್ಣ ಸರಿಯಾಗಿ ಹೊಡಿ ಆ ಸೀನಾಗೆ
  • ತಂಗಿಗಾಗಿ ಶಿವಣ್ಣನ ರೌದ್ರಾವತಾರ, ಸೀನಂಗೆ ಶಿವು ಬಿಡುಸ್ತಾನ ಗ್ರಹಚಾರ.
  • ಸೀನನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು, ಹಾಗೆ ಒಂದು 4 ಜಾಸ್ತಿ ಬಾರಿಸಬೇಕು
  • ಸೀನಾ ಚಟ್ನಿಪುಡಿ ಆಗೋದ
  • ಸೀನ ನಾ ಕಥೆ, ಶ್ರೀಮದ್ ರಮಾ ರಮಣ ಗೋವಿಂದ ಗೋವಿಂದ
  • ಪಿಂಕಿ ನಿನ್ ಮದುವೆಗೆ ಬಿತ್ತು ಬೆಂಕಿ….
  • ಶಿವಣ್ಣ ಬಿಡ್ಬೇಡ ಆ ಸಿನನ್ನ ಹೊಡಿ ಹೊಡಿ ಶಿವಣ್ಣ
  • ಆದ್ರೂ ಶಿವಣ್ಣ ತಿಂಗಿಯಂದಿರಲ್ಲಿ ಒಬ್ಬರಿಗಾದ್ರೂ ಚೆನ್ನಾಗಿರೋ ಗಂಡನ ಮನೆ ಸಿಗಬೇಕಿತ್ತು
55
ಸೀನ -ಪಿಂಕಿ ಜೊತೆ ಬದುಕಬೇಕು ಎಂದ ವೀಕ್ಷಕರು
  • ಬಿಡಬೇಡ ಶಿವಣ್ಣ ನೋಡೋ ವೀಕ್ಷಕರ ಪರವಾಗಿ ಹಾಕೊಂಡು ನಾಲ್ಕು ಹಾಕು ಸರಿಯಾಗಿ.
  • ಬಲವಂತದ ಮದುವೆ ಆದ್ರೆ ಒಂದು ಸಾರಿ ಮದುವೆ ಆದಮೇಲೆ ಪಾಸ್ಟ್ ಏನೇ ಇರಲಿ, ತಮ್ಮ ಸಂಗಾತಿ ಹೇಗೆ ಇರಲಿ ಅನುಸರಿಸಿಕೊಂಡು ಜೀವನ ಮಾಡೋದೇ ಸರಿ, ಅದೇ ನಮ್ಮ ಸಂಸ್ಕೃತಿ.
  • ಇಷ್ಟ ಇಲ್ಲ ಅಂದ್ರೆ ಈ ಮದುವೆ ಆಗ್ಬಾರ್ದು ಮದುವೆ ಆದ್ಮೇಲೆ ಅವ್ರು ಜೊತೆ ಕಷ್ಟನೊ ಸುಖಾನೊ ಅವರ ಜೊತೆ ಇರ್ಬೇಕು ಇವ್ಳು ಜೀವನ ಹಾಳ್ ಮಾಡಿ ಇನ್ನ ಒಬ್ಬಳ ಜೊತೆ ಮದುವೆ ಆಗೋದು ತಪ್ಪು ಇತರ ನೀವೇ ತೋರ್ಸೋದು ತಪ್ಪು, ಇವಾಗ ಆಗ್ತಾ ಇರೋದು ಇದೆ ಹೆಂಡತಿ ಇದ್ದರೂ ಇನ್ನ ಒಬ್ಬಳನ್ನ ಮದುವೆ ಆಗೋದು, ಅವಳಿಗೋಸ್ಕ ಹೆಂಡತಿನ ಕೊಲೆ ಮಾಡೋದು, ಬಿಟ್ಟೋಗೊದು ಮಾಡ್ತಾರೆ, ಅಣ್ಣ, ತಮ್ಮ, ಅಪ್ಪ ಇವ್ರು ಇದ್ರೆ ಇಂತೋರಿಗೆ ಬುದ್ಧಿ ಕಲಿಸೋಕೆ, ಆದರೆ ಈ ಕೆಲಸವನ್ನು ಗುಂಡು ಮಾಡಿದ್ರೆ ಸೂಪರ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories