ಅಂಬಿಕಾ ಸೀರೆ ಧರಿಸಿದ ದುರ್ಗಾಳನ್ನು ನೋಡಿ ವೀಕ್ಷಕರಲ್ಲಿ ಗೊಂದಲ; ಕೊನೆಗೂ ಬಂದ ಮಾಳವಿಕಾ

Published : Sep 25, 2025, 09:18 AM IST

ಶರತ್-ದುರ್ಗಾ ಮದುವೆಯ ಹಿಂದಿನ ಸತ್ಯವನ್ನು ಮಾಳವಿಕಾ ತನ್ನ ತಪಸ್ಸಿನಿಂದ ಅರಿತುಕೊಂಡಿದ್ದಾಳೆ. ಇತ್ತ ಅಂಬಿಕಾಳ ಸೀರೆಯುಟ್ಟ ದುರ್ಗಾಳನ್ನು ಕಂಡು ಶರತ್ ಕೋಪಗೊಂಡು ಮನೆಯಿಂದ ಹೊರಹಾಕಲು ಯತ್ನಿಸುತ್ತಾನೆ.

PREV
16
ಶರತ್ ಮತ್ತು ದುರ್ಗಾ ಮದುವೆ

ಶರತ್ ಮತ್ತು ದುರ್ಗಾ ಮದುವೆ ಹೇಗಾಯ್ತು ಎಂಬ ಸತ್ಯ ಮಾಳವಿಕಾಗೆ ಗೊತ್ತಾಗಿದೆ. ದುರ್ಗಾ ದೇಹದಲ್ಲಿ ಅಂಬಿಕಾ ಆತ್ಮ ಸೇರಿದ್ದರಿಂದ ಮದುವೆ ನಡೆದಿರುವ ದೃಶ್ಯಗಳು ಮಾಳವಿಕಾಗೆ ಕಾಣಿಸಿದೆ. ಮತ್ತೊಂದೆಡೆ ದುರ್ಗಾ ರಕ್ಷಣೆಗೆ ಮಾಳವಿಕಾ ಬಂದಿದ್ದಾಳೆ. ಅಂಬಿಕಾ ಸೀರೆ ಧರಿಸಿ ಬಂದ ದುರ್ಗಾಳನ್ನು ನೋಡಿ ವೀಕ್ಷಕರು ಕನ್ಫ್ಯೂಸ್ ಆಗಿದ್ದಾರೆ.

26
ಮಾಳವಿಕಾ ತಪಸ್ಸು

ಮಾಂಗಲ್ಯಧಾರಣೆವರೆಗೂ ನಾನು ಅಂದುಕೊಂಡಂತೆಯೇ ನಡೆದಿತ್ತು. ಅಲ್ಲಿಯವರೆಗೂ ಬಂದ ಅಡೆತಡೆಗಳನ್ನು ತಡೆದಿದ್ದೆ. ಕೊನೆ ಕ್ಷಣದಲ್ಲಿ ಎಲ್ಲವೂ ಬದಲಾಗಿದ್ದು ಹೇಗೆ ಎಂದು ತಿಳಿದುಕೊಳ್ಳಲು ಮಾಳವಿಕಾ ತಪಸ್ಸು ಮಾಡಿದ್ದಳು. ಈ ದೀರ್ಘ ತಪಸ್ಸಿನ ಫಲವಾಗಿ ಸತ್ಯ ಮಾಳವಿಕಾ ಮುಂದಿದೆ.

36
ಮಾಳವಿಕಾ ಏನು ಮಾಡ್ತಾಳೆ?

ಅಂಬಿಕಾ ಆತ್ಮ ಶಕ್ತಿಯುತವಾಗಿರೋದನ್ನು ಅರಿತುಕೊಂಡು ಮಾಳವಿಕಾ ತನ್ನದೇ ಪ್ಲಾನ್‌ ಜೊತೆ ಮನೆಗೆ ಹಿಂದಿರುಗಿ ಬಂದಿದ್ದಾಳೆ. ಈ ಮದುವೆ ನಡೆದಿದ್ದರಲ್ಲಿ ದುರ್ಗಾಳ ಯಾವ ತಪ್ಪಿಲ್ಲ ಅನ್ನೋದು ಮಾಳವಿಕಾಗೆ ಗೊತ್ತಾಗಿದೆ. ಮುಂದೆ ಮಾಳವಿಕಾ ಏನು ಮಾಡ್ತಾಳೆ ಎಂಬುದರ ಬಗ್ಗೆ ತೀವ್ರ ಕುತೂಹಲ ಹೆಚ್ಚಾಗಿದೆ.

46
ಅಂಬಿಕಾಳ ಸೀರೆ

ಇತ್ತ ಅಂಬಿಕಾಳ ಸೀರೆ ಧರಿಸಿ ಬಂದ ದುರ್ಗಾಳನ್ನು ನೋಡಿ ಶರತ್ ಸಿಡಿಮಿಡಿಗೊಂಡಿದ್ದಾನೆ. ನನ್ನ ಹಾಗೂ ಮಗಳ ಎಮೋಷನ್ ಜೊತೆ ಹೀಗೆಲ್ಲ ಆಟ ಆಡ್ಬೇಡ ಎಂದು ದುರ್ಗಾಳನ್ನು ಮನೆಯಿಂದ ಹೊರಹಾಕಲು ಶರತ್ ಮುಂದಾಗಿದ್ದಾನೆ. ದುರ್ಗಾಳಲ್ಲಿ ಅಂಬಿಕಾಳನ್ನು ಕಂಡು ಮನೆಯವರು ಖುಷಿಯಾಗಿದ್ದಾರೆ.

56
ವೀಕ್ಷಕರಲ್ಲಿ ಗೊಂದಲ

ಈ ಹಿಂದೆ ಅಂಬಿಕಾಗೆ ಸೇರಿದ್ದ ಎಲ್ಲಾ ವಸ್ತುಗಳನ್ನು ಮಾಳವಿಕಾ ಮತ್ತು ಮಾಯಾ ಮನೆಯಿಂದ ಹೊರಗೆ ಹಾಕಿದ್ದರು. ಇದೀಗ ದುರ್ಗಾಗೆ ಈ ಸೀರೆ ಎಲ್ಲಿ ಸಿಕ್ತು ಎಂದು ವೀಕ್ಷಕರು ಗೊಂದಲಕ್ಕೆ ಸಿಲುಕಿದರು. ಆ ಸಂದರ್ಭದಲ್ಲಿ ಅಂಬಿಕಾಳ ತಾಳಿಯೊಂದು ಮಾತ್ರ ಮನೆಯಲ್ಲಿ ಉಳಿದುಕೊಂಡಿತ್ತು. ಇತ್ತೀಚೆಗೆ ಜಗನ್ನಾಥ್, ಸೊಸೆ ಅಂಬಿಕಾಳ ದೊಡ್ಡ ಫೋಟೋವನ್ನು ತರಿಸಿದ್ದರು.

ಇದನ್ನೂ ಓದಿ: ವಿಷ್ಣುವರ್ಧನ್, ರವಿಚಂದ್ರನ್, ಶಶಿಕುಮಾರ್ ಸಿನಿಮಾ ಕಥೆಯಂತಾಗ್ತಿದೆ ಅಮೃತಧಾರೆ ಸೀರಿಯಲ್

66
ನೆಟ್ಟಿಗರ ಕಮೆಂಟ್

ಈ ಪ್ರೋಮೋ ನೋಡಿದ ನೆಟ್ಟಿಗರು, ಅಲ್ಲಾ ಈ ಶರತೂ ಯಾಕೆ ಇಸ್ಟೊಂದು ಓವರ್ ಆಗಿ ರಿಯಾಕ್ಟ್ ಮಾಡ್ತಾನೆ ಅಂತ. ಅವಳು ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿಲ್ಲ ಅಂತ ಯಾಕೆ ಈ ರೀತಿ ಸೇಡು. ತೀರಿಸಿಕೊಳ್ಳುತ್ತಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ. ಇದರ ಹಿಂದೆಯೂ ಮಾಯಾಳ ಕುತಂತ್ರ ಇದೆ ಅಲ್ಲವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಉಪ್ಪಿಲ್ಲದ ಊಟದಂತಾಗ್ತಿದ್ದ ಸೀರಿಯಲ್‌ಗೆ ಜೋಶ್ ತುಂಬಲು ಕಂಬ್ಯಾಕ್ ಮಾಡಿದ ಹಿರಿಯ ನಟಿ

Read more Photos on
click me!

Recommended Stories