'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ತನ್ನ ಅಕ್ಕ ಅಂಬಿಕಾಳನ್ನು ಹುಡುಕಲು ಹೋದ ದುರ್ಗಾಳನ್ನು ಚಿತೆಯ ಮೇಲೆ ಮಲಗಿಸುವ ದೃಶ್ಯದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ದುರ್ಗಾ ಪಾತ್ರಧಾರಿ ರಿಷಿಕಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಚಿತ್ರೀಕರಣದ ಅನುಭವವನ್ನು ವಿವರಿಸಿದ್ದಾರೆ.
ನಾನಿನ್ನ ಬಿಡಲಾರೆ (Naa Ninna Bidalaare Serial) ವಾಸ್ತವಕ್ಕೆ ಸಂಪೂರ್ಣ ದೂರವಾಗಿದ್ದರೂ, ಅಕ್ಕ-ತಂಗಿಯರ ಪ್ರೀತಿಯ ಕಥೆ, ಬ್ಲ್ಯಾಕ್ಮ್ಯಾಜಿಕ್ ತಂತ್ರ... ಹೀಗೆ ಹಲವಾರು ವಿಷಯಗಳಿಂದ ವೀಕ್ಷಕರಿಗೆ ಆಪ್ತ ಆಗುತ್ತಿದೆ.
26
ಕ್ಯೂಟ್ ದೆವ್ವ ಅಂಬಿಕಾ
ಇದರಲ್ಲಿ, ಕ್ಯೂಟ್ ದೆವ್ವ ಅನ್ನಿಸಿಕೊಂಡವಳು ದುರ್ಗಾಳ ಅಕ್ಕ ಅಂಬಿಕಾ. ಅವಳು ದುರ್ಗಾಳಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಳು. ಆದರೆ ಅವಳೇ ತನ್ನ ಅಕ್ಕ ಎಂದು ದುರ್ಗಾಗೆ ಗೊತ್ತೇ ಇರಲಿಲ್ಲ. ಕೊನೆಗೆ ಆ ಸತ್ಯ ಬಯಲಾಗಿದೆ.
36
ದುರ್ಗಾಳ ಸಾಯಿಸಲು ರೌಡಿ
ಅಂಬಿಕಾಳ ಶಕ್ತಿಯನ್ನು ತಾನು ಪಡೆದು ಎಲ್ಲಾ ಸರ್ವನಾಶ ಮಾಡಲು ಪಣ ತೊಟ್ಟವಳು ಅವಳ ಅತ್ತೆ ಮಾಳವಿಕಾ. ಆದ್ದರಿಂದ ಏನೇನೋ ಅನಾಹುತ ಸೃಷ್ಟಿಸಿ, ಅದಕ್ಕೆ ಸತ್ತುಹೋದ ಅಂಬಿಕಾನೇ ಕಾರಣ ಎಂದು ಎಲ್ಲರನ್ನೂ ನಂಬಿಸಿ, ಅವಳ ಶ್ರಾದ್ಧ ಮಾಡಿ ಕಾಯಂ ಆಗಿ ಬರದೇ ಇರುವ ಹಾಗೆ ಕುತಂತ್ರ ಮಾಡಿದ್ದಳು.
ಕೊನೆಗೆ, ಅವಳೇ ತನ್ನ ಅಕ್ಕ ಎನ್ನುವ ಸತ್ಯ ದುರ್ಗಾಗೆ ತಿಳಿಯುತ್ತಲೇ ಆಕೆಯನ್ನು ಮತ್ತೆ ಕರೆತರಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಳು. ಇದನ್ನು ತಿಳಿದ ಮಾಳವಿಕಾ, ದುರ್ಗಾಳನ್ನು ಸಾಯಿಸಲು ರೌಡಿಗಳನ್ನು ಬಿಟ್ಟಳು.
56
ಮೇಕಿಂಗ್ ವಿಡಿಯೋ
ದುರ್ಗಾ ಅತ್ತ ಇನ್ನೊಂದು ಲೋಕದಲ್ಲಿ ಅಕ್ಕ ಅಂಬಿಕಾಳನ್ನು ಹುಡುಕ ಹೊರಟಿದ್ದರೆ, ಇತ್ತ ಭೂಮಿಯ ಮೇಲೆ ಅವಳನ್ನು ರೌಡಿಗಳು ಹೊಡೆದು ಪ್ರಜ್ಞೆ ತಪ್ಪಿಸಿದ್ದರು. ಆ ಸಂದರ್ಭದಲ್ಲಿ ಅವಳನ್ನು ಹಾಗೆಯೇ ಸುಡಲು ಚಿತೆ ಸಿದ್ಧಮಾಡಿದ್ದರು. ಅದರ ಮೇಕಿಂಗ್ ವಿಡಿಯೋ ಇದೀಗ ವೈರಲ್ ಆಗಿದೆ.
66
ಶೇರ್ ಮಾಡಿಕೊಂಡ ನಟಿ
ಇದರಲ್ಲಿ ನಿಜವಾಗಿಯೂ ಚಿತೆಯನ್ನು ಸಿದ್ಧಪಡಿಸಿ ಹೇಗೆ ಮಲಗಿಸಲಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ. ದುರ್ಗಾ ಪಾತ್ರಧಾರಿ ರಿಷಿಕಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಬಳಿಕ ಏನಾಯ್ತು, ಹೇಗೆ ರೌಡಿಗಳು ತಮ್ಮ ಕೈ ಕಟ್ಟಿಹಾಕಿದ್ದರು ಎನ್ನುವುದನ್ನು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.