Lakshmi Nivasa ಸೀರಿಯಲ್ ಅದಕ್ಕಲ್ಲ, ಇದಕ್ಕೆ ಬಿಟ್ಟಿದ್ದು: ಕೊನೆಗೂ ಭವಿಷ್​ ಗೌಡ ನಿಜ ಗುಟ್ಟು ರಿವೀಲ್

Published : May 16, 2026, 12:37 PM IST

'ಲಕ್ಷ್ಮೀ ನಿವಾಸ' ಸೀರಿಯಲ್‌ನಿಂದ ಹೊರನಡೆದಿದ್ದ ನಟ ಭವಿಷ್ ಗೌಡ, ಇದೀಗ ಅದರ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. 'ಗಂಧದ ಗುಡಿ' ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದ ಅವಕಾಶ ಸಿಕ್ಕಿದ್ದರಿಂದ, ಅದನ್ನು ಪ್ರಮೋಷನ್ ಎಂದು ಭಾವಿಸಿ 'ಲಕ್ಷ್ಮೀ ನಿವಾಸ' ಧಾರಾವಾಹಿಯನ್ನು ತೊರೆದಿದ್ದಾಗಿ ಹೇಳಿದ್ದಾರೆ.

PREV
16
ಲಕ್ಷ್ಮೀನಿವಾಸದಿಂದ ಗಂಧದ ಗುಡಿಯವರೆಗೆ..

ಲಕ್ಷ್ಮೀ ನಿವಾಸ ಸೀರಿಯಲ್​ (Lakshmi Nivasa Serial)ನಲ್ಲಿ ಇದಾಗಲೇ ಕೆಲವು ಪಾತ್ರಗಳು ಬದಲಾಗಿವೆ. ಅದಕ್ಕೆ ಬೇರೆ ಬೇರೆ ಕಾರಣಗಳೂ ಇವೆ. ಅದರಲ್ಲಿ ಒಂದು ಪಾತ್ರ ವಿಶ್ವಂದು. ಜಾಹ್ನವಿಯ ಸ್ನೇಹಿತನಾದ ವಿಶ್ವನ ಪಾತ್ರದಲ್ಲಿ ಮಿಂಚಿ ಎಲ್ಲರ ಮನಸ್ಸನ್ನು ಗೆದ್ದಿದ್ದರು ನಟ ಭವಿಷ್​ ಗೌಡ (Bhavish Gowda). ಆದರೆ ಅವರು ಏಕಾಏಕಿ ಸೀರಿಯಲ್​ನಿಂದ ಹೊರನಡೆದರು. ಬಳಿಕ ಶ್ರೀರಸ್ತು ಶುಭಮಸ್ತು ಖ್ಯಾತಿಯ ನಟ ನಕುಲ್ ಶರ್ಮ (Nakul Sharma) ವಿಶ್ವನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

26
ಆಗ ನಟ ಹೇಳಿದ್ದೇನು?

ಭವಿಷ್​ ಗೌಡ ಅವರು ಏಕಾಏಕಿ ಸೀರಿಯಲ್​ ಬಿಟ್ಟಾಗ ಅವರಿಗೆ ಯಾಕೆ ಎನ್ನುವ ಪ್ರಶ್ನೆ ಆಗ ಎದುರಾಗಿತ್ತು. ಆಗ ಅವರು ಸ್ಪಷ್ಟ ಉತ್ತರ ಕೊಟ್ಟಿರಲಿಲ್ಲ. ಕಲಾವಿದರಿಗೆ ಬದುಕಲು ಸಂಭಾವನೆಯೂ ಬೇಕು. ನನಗೆ ಧಾರಾವಾಹಿ ತಂಡದಿಂದ ಪೇಮೆಂಟ್‌ ಸಮಸ್ಯೆ, ಅಥವಾ ಇನ್ಯಾವುದೇ ಸಮಸ್ಯೆ ಆಗಿಲ್ಲ. ಈ ಧಾರಾವಾಹಿಯನ್ನು ಬೇರೆಯವರು ಬೇರೆ ಕಾರಣಕ್ಕೆ ಬಿಟ್ಟಿರಬಹುದು. ಆದರೆ ನಾನು ಕಾಲ್‌ಶೀಟ್‌ ಕಡಿಮೆ ಸಿಕ್ಕಿತು ಎಂದು ಬಿಟ್ಟಿದ್ದೇನೆ ಅಷ್ಟೇ ಎಂದು ಹೇಳಿದ್ದರು.

36
ಮುಂಗಾರು ಮಳೆ ಡೈಲಾಗ್​

ಆದರೆ, ಇದೀಗ ಅವರು ಸಂದರ್ಶನವೊಂದರಲ್ಲಿ ನಿಜವಾದ ಕಾರಣವನ್ನು ರಿವೀಲ್​ ಮಾಡಿದ್ದಾರೆ. ನಾನು ಲಕ್ಷ್ಮೀ ನಿವಾಸದಲ್ಲಿ ನಟಿಸುತ್ತಿದ್ದ ವೇಳೆಯೇ ನಾನು ಮಹಾನಟಿ ರಿಯಾಲಿಟಿ ಷೋನಲ್ಲಿ ಒಂದು ಸೀಸನ್​ಗೆ ಹೋಗಿದ್ದೆ. ಅಲ್ಲಿ ಗಣೇಶ್​ ಅವರ ಮುಂಗಾರು ಮಳೆ ಡೈಲಾಗ್​ ಹೇಳಿದ್ದೆ. ಅದು ನಿರ್ಮಾಪಕ ಸಕ್ಕರೆಬೈಲ್​ ಶ್ರೀನಿವಾಸ್​ ಅವರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತಂತೆ. ಆದರೆ ಆಗ ಅವರು ಏನೂ ಹೇಳಿರಲಿಲ್ಲ ಎಂದು ವಿಷಯ ತಿಳಿಸಿದ್ದಾರೆ.

46
ನನಗೆ ಆಗಿಬರಲ್ಲ ಎಂದ್ಕೊಂಡೆ

ನಾನು ಅದಾಗಲೇ ಕಲರ್ಸ್​ ಕನ್ನಡದ 2-3 ಪ್ರಾಜೆಕ್ಟ್​ಗಳಿಗೆ ಆಡಿಷನ್​ ಕೊಟ್ಟಿದ್ದೆ. ಆದರೆ ಯಾಕೋ ಯಾವುದೂ ವರ್ಕ್​ಔಟ್​ ಆಗಲಿಲ್ಲ. ಏಕೆ ಎಂದು ನನಗೂ ಗೊತ್ತಿಲ್ಲ. ಆದ್ರೆ ನನಗೆ ಅವೆಲ್ಲಾ ಸಿಗಲ್ಲ ಎಂದು ಸುಮ್ಮನಾಗಿದ್ದ. ಬಳಿಕ ಗಂಧದ ಗುಡಿ ಸೀರಿಯಲ್​ಗೆ ಆಫರ್​ ಬಂತು, ಆದರೆ ಯಾವ ಚಾನೆಲ್​ ಎಂದು ಕೇಳಿದ ತಕ್ಷಣ, ಅಲ್ಲಿ ನನಗೆಲ್ಲಾ ಆಗಲ್ಲ, ಬರಲ್ಲ ಎಂದೆ ಎಂದು ಆ ದಿನಗಳ ನೆನೆದಿದ್ದಾರೆ ಭವಿಷ್​.

56
ಒಂದೇ ದಿನದಲ್ಲಿ ಸೆಲೆಕ್ಟ್​

ಕೊನೆಗೆ, ಅವರು ಬಿಡಲಿಲ್ಲ. ಒಂದು ಸಲ ಬಂದು ಆಡಿಷನ್​ ಕೊಟ್ಟು ಹೋಗಿ ಎಂದರು. ತುಂಬಾ ಒತ್ತಾಯ ಮಾಡುತ್ತಿದ್ದಾರೆ ಎಂದು ಹೋದೆ. ಮರುದಿನವೇ ಪ್ರೊಡ್ಯೂಸರ್​ ಕರೆದು ಗಂಧದ ಗುಡಿಗೆ ಸೆಲೆಕ್ಟ್​ ಆಗಿದ್ದೀರಿ ಎಂದರು. ಆದರೆ ಅದಾಗಲೇ ಲಕ್ಷ್ಮೀ ನಿವಾಸದಲ್ಲಿ ಮಾಡುತ್ತಿದ್ದುದರಿಂದ ಎರಡೂ ಮ್ಯಾನೇಜ್​ ಮಾಡುವುದು ಕಷ್ಟ ಆಗುತ್ತೆ ಎಂದೆ. ಅದಕ್ಕೆ ಅವರು, ಗಂಧದ ಗುಡಿಯಲ್ಲಿ ಲೀಡ್ ರೋಲ್​. ನೀವು ಆ ಸೀರಿಯಲ್​​ ಬಿಡಲೇಬೇಕಾಗುತ್ತದೆ ಎಂದರು.

66
ಪ್ರಮೋಷನ್​ ಸಿಕ್ತು

ಎರಡೂ ಸೀರಿಯಲ್ ಮ್ಯಾನೇಜ್ ಮಾಡೋಕೆ ಆಗತ್ತಾ ನೋಡಿದೆ. ಆದರೆ ಅದು ಸಾಧ್ಯವಾಗದ ಕಾರಣ, ಜೀ ಕನ್ನಡದವರಿಗೆ ಮುಂಚೆಯೇ ಹೇಳಿ ಆ ಸೀರಿಯಲ್​ ಬಿಟ್ಟೆ ಎಂದು ನಿಜವಾದ ಕಾರಣವನ್ನು ಭವಿಷ್​ ಗೌಡ ಹೇಳಿದ್ದಾರೆ. ಲೀಡ್​ ರೋಲ್​ ಅಂದ ಮೇಲೆ ಅದೊಂದು ರೀತಿ ಪ್ರಮೋಷನ್​ ಇದ್ದಂತೆಯೇ. ಆದ್ದರಿಂದ ಅದನ್ನು ಒಪ್ಪಿಕೊಂಡೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories